GT vs CSK IPL 2023 Final : ಐಪಿಎಲ್‌ ಇತಿಹಾಸದಲ್ಲೇ ಹೊಸ ದಾಖಲೆ : ಮೀಸಲು ದಿನದಂದು ಪಂದ್ಯ, ನಿಯಮಗಳಲ್ಲಿ ಬದಲಾವಣೆ

ಅಹಮದಾಬಾದ್‌ : GT vs CSK IPL 2023 Final : ಮಳೆಯ ಆರ್ಭಟದಿಂದಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಫೈನಲ್‌ ಪಂದ್ಯ ರದ್ದಾಗಿದ್ದು, ಮೀಸಲು ದಿನವಾದ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ನಾಲ್ಕು ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ದ ಕಳೆದ ಬಾರಿಯ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ನೀಡಲು ಕೋಟ್ಯಾಂತರ ಮಂದಿ ಕಾತರರಾಗಿದ್ದಾರೆ. ನಿನ್ನೆ ಸಂಜೆಯಿಂದಲೇ ಆರಂಭಗೊಂಡ ಮಳೆಯಿಂದಾಗಿ ಸಂಜೆ ನಡೆಯಬೇಕಾಗಿದ್ದ ಸಮಾರೋಪ ಸಮಾರಂಭ ನಡೆದಿರಲಿಲ್ಲ. ರಾತ್ರಿ ಸುಮಾರು 11 ಗಂಟೆಯ ವರೆಗೂ ಕೂಡ ಪ್ರೇಕ್ಷಕರು ಪಂದ್ಯ ಆರಂಭಕ್ಕಾಗಿ ಕಾದು ಕುಳಿತಿದ್ದರು. ಆದರೆ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದಂತೆಯೇ ಪಂದ್ಯವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಆದರೆ ಇಂದು ನಡೆಯುವ ಪಂದ್ಯಕ್ಕೂ ಕೂಡ ಮಳೆಯ ಭೀತಿ ಕಾಡಲಾರಂಭಿಸಿದೆ.

ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16 ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮೀಸಲು ದಿನದಂದು ಫೈನಲ್‌ ಪಂದ್ಯವನ್ನು ನಡೆಸಲಾಗುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಪಂದ್ಯದ ಟಾಸ್‌ ನಡೆಸಲು ಕೂಡ ಸಾಧ್ಯವಾಗಿರಲಿಲ್ಲ. ಭಾನುವಾರ ಸಂಜೆ ಅಹಮದಾಬಾದ್‌ನಲ್ಲಿ ಭಾರಿ ಆಲಿಕಲ್ಲು ಮತ್ತು ಗುಡುಗು ಸಹಿತ ಮಳೆ ಸುರಿದ ಹಿನ್ನೆಲೆಯಲ್ಲಿ ಫೈನಲ್‌ ಪಂದ್ಯ ರದ್ದಾಗಿತ್ತು. ಸೋಮವಾರ ರಾತ್ರಿ 7 ಗಂಟೆಗೆ ನಿಗದಿಯಾಗಿರುವಂತೆ ಟಾಸ್ ನಡೆಯಲಿದೆ.

ಸೋಮವಾರದ ಪಂದ್ಯದ ಮೇಲೆ ಮಳೆ ಪರಿಣಾಮ ಬೀರಿದರೆ ಹಲವು ನಿಯಮಗಳನ್ನು ಜಾರಿಗೆ ತರಲಲಾಗುತ್ತದೆ. 20-ಓವರ್‌ಗಳನ್ನು ಆಡಲು ಅಂತಿಮ ಪಂದ್ಯ ನಡೆಬೇಕಾದ್ರೆ ಕನಿಷ್ಠ ರಾತ್ರಿ 9.35 ಕ್ಕೆ ಪ್ರಾರಂಭವಾಗಬೇಕು. ಒಂದೊಮ್ಮೆ ಪಂದ್ಯ ವಿಳಂಭವಾದ್ರೆ ಓವರ್‌ ಕಡಿತ ಮಾಡಲಾಗುತ್ತದೆ. ರಾತ್ರಿ 12.06 ಗಂಟೆ ಪಂದ್ಯ ಆರಂಭಿಸಲು ಅವಕಾಶ ಲಭಿಸಿದ್ರೂ ಕೂಡ ಐದು ಓವರ್‌ಗಳ ಪಂದ್ಯವನ್ನು ನಡೆಸಲು ಐಪಿಎಲ್‌ ಮಂಡಳಿ ನಿರ್ಧಾರ ಕೈಗೊಂಡಿದೆ. ಅದಕ್ಕೂ ಅವಕಾಶ ಸಿಗದೇ ಇದ್ರೆ ಸೂಪರ್‌ ಓವರ್‌, ಸೂಪರ್‌ ಓವರ್‌ ಕೂಡ ಅಸಾಧ್ಯವಾದ್ರೆ ಲೀಗ್‌ ಹಂತದಲ್ಲಿ ಅತೀ ಹೆಚ್ಚು ಪಾಯಿಂಟ್‌ಗಳಿಸಿರುವ ತಂಡವನ್ನು ವಿಜೇತ ತಂಡವೆಂದು ಘೋಷಿಸಲಾಗುತ್ತದೆ. ಈ ಬಾರಿಯ ಐಪಿಎಲ್‌ ಲೀಗ್‌ ಹಂತದ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್‌ ದೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕಿಂತ ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್‌ ತಂಡ ಹೆಚ್ಚು ಅಂಕ ಪಡೆದಿರುವ ಹಿನ್ನೆಲೆಯಲ್ಲಿ ಗುಜರಾತ್‌ ಟೈಟಾನ್ಸ್‌ ತಂಡ ಐಪಿಎಲ್‌ ಚಾಂಪಿಯನ್‌ ಆಗಿ ಹೊರ ಹೊಮ್ಮಲಿದೆ.

ಹಳೆ ಟಿಕೆಟ್‌ನಲ್ಲೇ ಪ್ರೇಕ್ಷಕರಿಗೆ ಅವಕಾಶ :

ಭಾನುವಾರದ ಫೈನಲ್‌ಗೆ ಟಿಕೆಟ್ ಹೊಂದಿರುವವರು ಅದೇ ಟಿಕೆಟ್‌ ಬಳಸಿ ಸೋಮವಾರದ ಪಂದ್ಯಕ್ಕಾಗಿ ಕ್ರೀಡಾಂಗಣವನ್ನು ಪ್ರವೇಶಿಸಬಹುದಾಗಿದೆ. ಪ್ರೇಕ್ಷಕರು ನಡುರಾತ್ರಿಯ ವರೆಗೂ ಪಂದ್ಯ ಆರಂಭಕ್ಕಾಗಿ ಕಾದಿದ್ದರು. ಆದರೆ ಕೊನೆಗೆ ಪಂದ್ಯ ಆರಂಭವಾಗುವುದಿಲ್ಲ ಅನ್ನೋದು ಖಚಿತವಾಗುತ್ತಿದ್ದಂತೆಯೇ ಕ್ರೀಡಾಂಗಣದಿಂದ ಹೊರ ನಡೆದಿದ್ದರು. ಆದರೆ ಸೋಮವಾರ ಪಂದ್ಯ ನಡೆಯಲಿದೆ ಅನ್ನೋ ಘೋಷಣೆ ಹೊರ ಬೀಳುತ್ತಲೇ ಕೊಂಚ ಸಮಾಧಾನಗೊಂಡಿದ್ದರು. ಫೈನಲ್‌ ಪಂದ್ಯದ ವೇಳೆಯಲ್ಲಿ ಅಭಿಮಾನಿಗಳು ಸಮಾಧಾನದಿಂದ ವರ್ತನೆ ಮಾಡಿರುವುದಕ್ಕೆ ಬಿಸಿಸಿಐ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದೆ.

ಕಳೆದ ಬಾರಿಯಷ್ಟೇ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಗುಜರಾತ್‌ ಟೈಟಾನ್ಸ್‌ ತಂಡ ಮೊದಲ ಸರಣಿಯಲ್ಲೇ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್‌ ಈ ಬಾರಿಯೂ ಫೈನಲ್‌ ಪ್ರವೇಶ ಪಡೆದುಕೊಂಡಿದೆ. ಚೆನ್ನೂ ಸೂಪರ್‌ ಕಿಂಗ್ಸ್‌ ಐಪಿಎಲ್‌ನಲ್ಲಿ ಅತೀ ಹೆಚ್ಚು ಬಾರಿ ಫೈನಲ್‌ ಪ್ರವೇಶಿಸಿದೆ. ಇದುವರೆಗೆ ಒಟ್ಟು 9 ಬಾರಿ ಫೈನಲ್‌ ಪ್ರವೇಶಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಇದುವರೆಗೆ ಒಟ್ಟು 4 ಬಾರಿ ಐಪಿಎಲ್‌ ಟ್ರೋಪಿಯನ್ನು ಜಯಿಸಿದೆ. ಆದರೆ ಐದು ಬಾರಿ ಸೋಲನ್ನು ಕಂಡಿದೆ. ಇದೀಗ 10 ನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗೆಲ್ಲುವ ಫೇವರೇಟ್‌ ತಂಡವಾಗಿ ಹೊರಹೊಮ್ಮಿದೆ.

ಲೀಗ್‌ ಹಂತದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಗುಜರಾತ್‌ ಟೈಟಾನ್ಸ್‌ ತಂಡ ಅಗ್ರಸ್ಥಾನಿಯಾಗಿ ಪ್ಲೇ ಆಫ್‌ ಪ್ರವೇಶಿಸಿತ್ತು. ಎರಡನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಗುಜರಾತ್‌ ಟೈಟಾನ್ಸ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ದ ಭರ್ಜರಿ ಆಟದ ಮೂಲಕ ಫೈನಲ್‌ ಪ್ರವೇಶಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಇದುವರೆಗೆ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ ಸೂಪರ್‌ ಕಿಂಗ್ಸ್‌ 1 ಪಂದ್ಯಗಳಲ್ಲಿ ಗೆದ್ದಿದ್ರೆ ಗುಜರಾತ್‌ ಟೈಟಾನ್ಸ್‌ 3 ಪಂದ್ಯಗಳಲ್ಲಿ ಗೆಲುವು ಕಂಡಿದೆ.

IPL 2023 Final CSK vs GT : ಪಿಚ್‌ ರಿಪೋರ್ಟ್‌

ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಈ ಬಾರಿ ಒಟ್ಟು ಎಂಟು ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳು ಎಂಟು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಸೋಲನ್ನು ಕಂಡಿವೆ. ಅಹಮದಾಬಾದ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಟಾಸ್‌ ಸೋತರು ನಾಲ್ಕು ಬಾರಿ ಗೆಲುವು ಕಂಡಿದೆ. ಇಲ್ಲಿನ ಪಿಚ್‌ ಬ್ಯಾಟಿಂಗ್‌ಗೆ ಉತ್ತಮವಾಗಿ ನೆರವಾಗಲಿದ್ದು, ಮೊದಲು ಬ್ಯಾಟಿಂಗ್‌ ನಡೆಸುವ ತಂಡ ಸರಾಸರಿ ೧೯೦ರನ್‌ ಬಾರಿಸಲಿದೆ. ಇನ್ನು ಈ ಮೈದಾನದಲ್ಲಿನ 207 ರನ್‌ ತಂಡವೊಂದರ ಗರಿಷ್ಠ ಮೊತ್ತವಾಗಿದೆ.

CSK vs GT : ಆಟಗಾರರ ಬಲಾಬಲ

ಇನ್ನು ಚೆನ್ನೈ ಹಾಗೂ ಗುಜರಾತ್‌ ತಂಡಗಳ ನಡುವಿನ ಆಟಗಾರರ ಬಲಾಬಲ ನೋಡುವುದಾದ್ರೆ. ಚೆನ್ನೈ ಹಾಗೂ ಗುಜರಾತ್‌ ನಡುವಿನ ಪಂದ್ಯದಲ್ಲಿ ರುತುರಾಜ್‌ ಗಾಯಕ್ವಾಡ್‌ 4 ಪಂದ್ಯಗಳಲ್ಲಿ 237 ರನ್‌ ಗಳಿಸಿದ್ದು, 145 ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ಅಲ್ಲದೇ ಗರಿಷ್ಟ 62 ರನ್‌ ಬಾರಿಸಿದ್ದಾರೆ. ಇನ್ನು ಗುಜರಾತ್‌ ತಂಡ ಆರಂಭಿಕ ಆಟಗಾರ ಚೆನ್ನೈ ತಂಡದ ವಿರುದ್ದ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಶುಭಮನ್‌ ಗಿಲ್‌ 2 ಪಂದ್ಯಗಳಲ್ಲಿ 123 ರನ್‌ ಗಳಿಸಿದ್ದು, 133ರ ಸ್ಟ್ರೇಕ್‌ ರೇಟ್‌ ಹೊಂದಿದ್ದಾರೆ. ಅಲ್ಲದೇ ಗರಿಷ್ಟ 63 ರನ್‌ ಬಾರಿಸಿದ್ರೆ, ಮತ್ತೋರ್ವ ಆರಂಭಿಕ ಆಟಗಾರ ವೃದ್ದಿಮಾನ್‌ ಸಾಹ 4 ಪಂದ್ಯಗಳನ್ನು ಆಡಿದ್ದು 115 ರನ್‌ ಗಳಿಸಿದ್ದಾರೆ. 113ರ ಸ್ಟ್ರೇಕ್‌ ರೇಟ್‌ ಹೊಂದಿದ್ದು, ಗರಿಷ್ಟ 67 ರನ್‌ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ ಎ ಜೋಸೆಫ್‌ 3 ಪಂದ್ಯಗಳಲ್ಲಿ 5 ವಿಕೆಟ್‌ ಕಬಳಿಸಿದ್ರೆ, ರವೀಂದ್ರ ಜಡೇಜಾ 3 ಪಂದ್ಯಗಳಲ್ಲಿ 4 ವಿಕೆಟ್‌ ಪಡೆದುಕೊಂಡಿದ್ದಾರೆ.

ಶುಭಮನ್‌ ಗಿಲ್‌ ಗರಿಷ್ಠ ರನ್‌

ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್‌ ತಂಡದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ 16 ಪಂದ್ಯಗಳನ್ನು ಆಡಿದ್ದು, ೮೫೧ ರನ್‌ ಬಾರಿಸುವ ಮೂಲಕ ಗರಿಷ್ಟ ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಾರಿ 3 ಶತಕ, 4 ಅರ್ಧ ಶತಕ ಬಾರಿಸಿದ್ದಾರೆ. ಗರಿಷ್ಟ 129 ರನ್‌ ಬಾರಿಸುವ ಮೂಲಕ ಐಪಿಲ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪಾಪ್‌ ಡುಪ್ಲೆಸಿಸ್‌ ಎರಡನೇ ಸ್ಥಾನದಲ್ಲಿದ್ದಾರೆ. ಅವರು 14 ಇನ್ನಿಂಗ್ಸ್‌ಗಳ ಮೂಲಕ 730 ರನ್‌ ಬಾರಿಸಿದ್ರೆ, ವಿರಾಟ್‌ ಕೊಹ್ಲಿ 14 ಇನ್ನಿಂಗ್ಸ್‌ ಆಡಿದ್ದು 639 ರನ್‌ ಬಾರಿಸಿರುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಚೆನ್ನೈ ತಂಡದ ಡೆವೋನ್‌ ಕಾನ್ವೆ 15 ಇನ್ನಿಂಗ್ಸ್‌ಗಳಲ್ಲಿ 625 ರನ್‌ ಗಳಿಸುವ ಮೂಲಕ 5 ನೇ ಸ್ಥಾನದಲ್ಲಿದ್ದಾರೆ.

ಮೊಹಮ್ಮದ್‌ ಸೆಮಿ ಬೆಸ್ಟ್‌ ಬೌಲರ್‌

ಇನ್ನು ಬೌಲಿಂಗ್‌ ವಿಭಾಗದಲ್ಲಿಯೂ ಗುಜರಾತ್‌ ತಂಡ ಬಲಿಷ್ಠವಾಗಿದ್ದು, ಗುಜರಾತ್‌ ತಂಡದ ಪ್ರಮಖ ಬೌಲರ್‌ ಮೊಹಮ್ಮದ್‌ ಸೆಮಿ 16 ಇನ್ನಿಂಗ್ಸ್‌ಗಳಲ್ಲಿ 28 ವಿಕೆಟ್‌ ಪಡೆದು ಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಗುಜರಾತ್‌ ತಂಡ ರಶೀದ್‌ ಖಾನ್‌ ಇದ್ದು,16 ಪಂದ್ಯಗಳಲ್ಲಿ 27 ವಿಕೆಟ್‌ ಉರುಳಿಸಿದ್ದಾರೆ. ಅಲ್ಲದೇ ಗುಜರಾತ್‌ ತಂಡದ ಮೋಹಿತ್‌ ಶರ್ಮಾ ಮೂರನೇ ಸ್ಥಾನದಲ್ಲಿದ್ದು 13 ಪಂದ್ಯಗಳನ್ನು ಆಡಿದ್ದು, 24 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತುಷಾರ್‌ ದೇಶಪಾಂಡೆ 15 ಪಂದ್ಯಗಳಲ್ಲಿ 20 ವಿಕೆಟ್‌ ಹಾಗೂ ರವೀಂದ್ರ ಜಡೇಜಾ 15 ಪಂದ್ಯಗಳಲ್ಲಿ 19 ವಿಕೆಟ್‌ ಕಬಳಿಸುವ ಮೂಲಕ 6 ಮತ್ತು 8 ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ ಪಂದ್ಯಾವಳಿಯಲ್ಲಿಯೇ 10 ಬಾರಿ ಫೈನಲ್‌ ಪ್ರವೇಶಿಸುವ ಮೂಲಕ ಅತೀ ಹೆಚ್ಚು ಫೈನಲ್‌ಗೆ (IPL Final) ಎಂಟ್ರಿಕೊಟ್ಟ ತಂಡ ಅನ್ನೋ ಹೆಗ್ಗಳಿಕೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಪಾತ್ರವಾಗಿದೆ. ಆದರೆ ದುರಂತವೆಂದ್ರೆ ಚೆನ್ನೈ ಸೂಪರ್‌ ಕಿಂಗ್ಸ್‌ ಫೈನಲ್‌ನಲ್ಲಿ ಗೆದ್ದ ಪಂದ್ಯಗಳಿಗಿಂತ ಸೋತ ಪಂದ್ಯಗಳೇ ಹೆಚ್ಚು. ನಾಯಕ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವ ತ್ಯೆಜಿಸಿದ ಬೆನ್ನಲ್ಲೇ ಕಳೆದ ಬಾರಿಯ ಐಪಿಎಲ್‌ ಋತುವಿನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹೀನಾಯವಾಗಿ ಸೋಲನ್ನು ಕಂಡು ಪ್ಲೇ ಆಫ್‌ಗೂ ಮೊದಲೇ ಐಪಿಎಲ್‌ನಿಂದ ಹೊರ ಬಿದ್ದಿತ್ತು. ಆದರೆ ಈ ಬಾರಿ ಚೆನ್ನೈ ತಂಡ ಫಿನಿಕ್ಸ್‌ ನಂತೆ ಎದ್ದು ಬಂದಿದೆ. ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಆರಂಭಿಕ ಲೀಗ್‌ ಪಂದ್ಯಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೊಂಚ ಎಡವಿದ್ರೂ ಕೂಡ ನಂತರದಲ್ಲಿ ಚೆನ್ನೈ ಅದ್ಬುತ ಪ್ರದರ್ಶನವನ್ನು ನೀಡಿದೆ.

ಅದ್ರಲ್ಲೂ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಐಪಿಎಲ್‌ ಪಂದ್ಯಾವಳಿಯಲ್ಲಿ ಒಟ್ಟು ಚೆನ್ನೈ ಸೂಪರ ಕಿಂಗ್ಸ್‌ ತಂಡ ಒಟ್ಟು 10 ಬಾರಿ ಫೈನಲ್‌ ಗೆ ಎಂಟ್ರಿ ಕೊಟ್ಟಿದೆ. ಈ ಪೈಕಿ ಚೆನ್ನೈ ಸೂಪರ್‌ ಕಿಂಗ್ಸ್‌ 4 ಬಾರಿ ಐಪಿಎಲ್‌ ಟ್ರೋಫಿ ಜಯಿಸಿದ್ದು, ಐದು ಬಾರಿ ಸೋಲನ್ನು ಕಂಡಿದೆ. ಮುಂಬೈ ಇಂಡಿಯನ್ಸ್‌, ಸನ್‌ರೈಸಸ್‌ ಹೈದ್ರಾಬಾದ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ವಿರುದ್ದ ತಲಾ ಒಂದೊಂದು ಬಾರಿ ಗೆಲುವು ಕಂಡಿದೆ. ಇನ್ನು ಮುಂಬೈ ಇಂಡಿಯನ್ಸ್‌ ತಂಡದ ವಿರುದ್ದ 3 ಬಾರಿ ಸೋಲನ್ನು ಕಂಡಿದ್ರೆ, ಕೊಲ್ಕತ್ತಾ ನೈಟ್‌ರೈಡರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳ ವಿರುದ್ದ ತಲಾ ಒಂದೊಂದು ಬಾರಿ ಸೋಲುಂಡಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ (CSK ) ಫೈನಲ್‌ ಫಲಿತಾಂಶ – IPL 2023 Final

2008
ಮೊದಲ ಐಪಿಎಲ್‌ನಲ್ಲಿಯೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ (IPL Final) ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ದ ಸೋಲನ್ನು ಕಂಡಿತ್ತು.

2010
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ ಪಂದ್ಯಾವಳಿಯಲ್ಲಿ ಎರಡನೇ ಬಾರಿಗೆ ಫೈನಲ್‌ ಪ್ರವೇಶಿಸಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಐಪಿಎಲ್‌ ಟ್ರೋಫಿಯನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನದಾಗಿಸಿಕೊಂಡಿದೆ.

2011
ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 58 ರನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಐಪಿಎಲ್‌ ಟ್ರೋಪಿ ಜಯಿಸಿತ್ತು.

2012
ಸತತ ಎರಡನೇ ವರ್ಷವೂ ಕೂಡ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ ಫೈನಲ್‌ ಗೆ ಎಂಟ್ರಿ ಕೊಟ್ಟಿತ್ತು. ಚೆನ್ನೈ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂಯದಲ್ಲಿ CSK ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐದು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು.

2013
ಕ್ವಾಲಿಫೈಯರ್‌ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿನ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 23 ರನ್‌ಗಳಿಂದ ಸೋಲನ್ನು ಕಂಡಿದೆ.

2015
ಕ್ವಾಲ್ಫೈಯರ್ 2 ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಆದರೆ ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 41 ರನ್‌ಗಳಿಂದ ಸೋಲನುಭವಿಸಿದೆ.

2018
ಸತತ ಫೈನಲ್‌ ಸೋಲುಗಳನ್ನು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸನ್‌ರೈಸಸ್‌ ಹೈದ್ರಾಬಾದ್‌ ತಂಡವನ್ನು ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೋಲಿಸುವ ಮೂಲಕ ಫೈನಲ್‌ ಪ್ರವೇಶಿಸಿತ್ತು. ಅಲ್ಲದೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸನ್‌ ರೈಸಸ್‌ ಹೈದ್ರಾಬಾದ್‌ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಜಯಿಸಿತು.

2019
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ದೆಹಲಿ ಕ್ಯಾಪಿಟಲ್ಸ್ ಅನ್ನು ಕ್ವಾಲಿಫೈಯರ್ 2 ಪಂದ್ಯದಲ್ಲಿ ಆರು ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಫೈನಲ್‌ ಪ್ರವೇಶ ಪಡೆದುಕೊಂಡಿತ್ತು. ಆದರೆ ಹೈದರಾಬಾದ್‌ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ವಿರುದ್ದ ಒಂದು ರನ್‌ಗಳಿಂದ ಸೋಲನ್ನು ಒಪ್ಪಿಕೊಂಡಿತ್ತು.

2021
ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ದುಬೈನ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ನಾಲ್ಕು ವಿಕೆಟ್‌ ಅಂತರದಿಂದ ಸೋಲಿಸಿ ಫೈನಲ್‌ ಪ್ರವೇಶಿಸಿತ್ತು. ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು 27 ರನ್‌ಗಳಿಂದ ಸೋಲಿಸುವ ಮೂಲಕ ಐಪಿಎಲ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

2023
ಐಪಿಎಲ್ 2023: ಚೆನ್ನೈ ಸೂಪರ್‌ ಕಿಂಗ್ಸ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಪ್ಲೇ ಆಫ್‌ ಪಂದ್ಯದಲ್ಲಿ ಸೋಲಿಸುವ ಮೂಲಕ ಫೈನಲ್‌ ಪ್ರವೇಶಿಸಿದೆ. ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಮತ್ತೊಮ್ಮೆ ಐಪಿಎಲ್‌ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ. ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸುತ್ತಿದೆ.

CSK vs GT : ಪಂದ್ಯಕ್ಕೆ ಮಳೆಯ ಭೀತಿ

ಹವಾಮಾನ ವರದಿ :
ಅಹಮದಾಬಾದ್‌ನಲ್ಲಿ ಭಾನುವಾರ ಸಂಜೆ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿತ್ತು. ಅಲ್ಲದೇ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಪಂದ್ಯವನ್ನು ರದ್ದು ಮಾಡಲಾಗಿತ್ತು. ಇಂದೂ ಕೂಡ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಮಳೆಯ ಭೀತಿಯೂ ಎದುರಾಗಿದೆ.

ಐಪಿಎಲ್‌ ವಿಜೇತರ ಪಟ್ಟಿ (IPL Winners 2008-20023 )

 • 2008 ರಾಜಸ್ಥಾನ ರಾಯಲ್ಸ್‌
 • 2009 ಡೆಕ್ಕನ್‌ ಚಾರ್ಜಸ್‌
 • 2010 ಚೆನೈ ಸೂಪರ್‌ ಕಿಂಗ್ಸ್‌
 • 2011 ಚೆನ್ನೈ ಸೂಪರ್‌ ಕಿಂಗ್ಸ್‌
 • 2012 ಕೋಲ್ಕತ್ತಾ ನೈಟ್‌ ರೈಡರ್ಸ್‌
 • 2013 ಮುಂಬೈ ಇಂಡಿಯನ್ಸ್‌
 • 2014 ಕೋಲ್ಕತ್ತಾ ನೈಟ್‌ ರೈಡರ್ಸ್
 • 2015‌ ಮುಂಬೈ ಇಂಡಿಯನ್ಸ್‌
 • 2016 ಸನ್‌ರೈಸಸ್‌ ಹೈದ್ರಾಬಾದ್
 • 2017‌ ಮುಂಬೈ ಇಂಡಿಯನ್ಸ್‌
 • 2018 ಚೆನ್ನೈ ಸೂಪರ್‌ ಕಿಂಗ್ಸ್‌
 • 2019 ಮುಂಬೈ ಇಂಡಿಯನ್ಸ್‌
 • 2020 ಮುಂಬೈ ಇಂಡಿಯನ್ಸ್‌
 • 2021 ಚೆನ್ನೈ ಸೂಪರ್‌ ಕಿಂಗ್ಸ್‌
 • 2022 ಗುಜರಾತ್‌ ಟೈಟಾನ್ಸ್‌
 • 2023 ಗುಜರಾತ್‌ ಟೈಟಾನ್ಸ್‌/ ಚೆನ್ನೈ ಸೂಪರ್‌ ಕಿಂಗ್ಸ್‌

IPL 2023 Final : ಫೈನಲ್‌ ವಿಜೇತರಿಗೆ ಬಹುಮಾನ

ಐಪಿಎಲ್ 2023 ರ ಫೈನಲ್‌ನ ವಿಜೇತರು 20 ಕೋಟಿ ರೂ. ಬಹುಮಾನ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ರನ್ನರ್‌ ಅಪ್‌ ತಂಡ 13 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ 7 ಕೋಟಿ ರೂ. ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ 6.5 ಕೋಟಿ ರೂ. ಬಹುಮಾನ ಪಡೆದು ಕೊಳ್ಳಲಿದೆ. ಇದನ್ನೂ ಓದಿ : IPL 2023 Final : ಐಪಿಎಲ್‌ ಫೈನಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವಿಗಿಂತ ಸೋತಿದ್ದೇ ಹೆಚ್ಚು

CSK vs GT : ಸಂಭಾವ್ಯ ತಂಡ

ಚೆನ್ನೈ ಸೂಪರ್ ಕಿಂಗ್ಸ್ (CSK) : ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತೀಶ ಪತಿರಣ

ಗುಜರಾತ್ ಟೈಟಾನ್ಸ್ (GT) : ವೃದ್ಧಿಮಾನ್ ಸಹಾ(ವಿಕೆ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್

ಇದನ್ನೂ ಓದಿ : ಈ ಬಾರಿಯೂ ನಮಗಿಲ್ಲ ಕಪ್‌ : ಪ್ಲೇ ಆಫ್‌ನಿಂದ ಹೊರ ಬಿದ್ದ ಆರ್‌ಸಿಬಿ

ಇದನ್ನೂ ಓದಿ : IPL 2023 Prize Money : ಐಪಿಎಲ್‌ ವಿಜೇತರಿಗೆ 20 ಕೋಟಿ, ರನ್ನರ್ ಅಪ್, ಆರೆಂಜ್ ಕ್ಯಾಪ್ – ಪರ್ಪಲ್ ಕ್ಯಾಪ್ ವಿಜೇತರಿಗೆ ಸಿಗುವ ಹಣವೆಷ್ಟು ?

GT vs CSK IPL 2023 Final New record in IPL history Match on reserve day change in rules

Comments are closed.