ಭಾನುವಾರ, ಏಪ್ರಿಲ್ 27, 2025
HomeSportsCricketHarbhajan insulted Dhoni : ಅಭಿಮಾನಿಗೆ ತಿರುಗೇಟು ಕೊಡುವ ಭರದಲ್ಲಿ ಎಂ.ಎಸ್ ಧೋನಿಗೆ ಅವಮಾನ ಮಾಡಿದ...

Harbhajan insulted Dhoni : ಅಭಿಮಾನಿಗೆ ತಿರುಗೇಟು ಕೊಡುವ ಭರದಲ್ಲಿ ಎಂ.ಎಸ್ ಧೋನಿಗೆ ಅವಮಾನ ಮಾಡಿದ ಟರ್ಬನೇಟರ್ ಹರ್ಭಜನ್ ಸಿಂಗ್

- Advertisement -

ಬೆಂಗಳೂರು : (Harbhajan insulted Dhoni) ಟೀಮ್ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ, ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ (Harbhajan Singh), ಧೋನಿ ಅಭಿಮಾನಿಯೊಬ್ಬನಿಗೆ ತಿರುಗೇಟು ಕೊಡುವ ಭರದಲ್ಲಿ ಭಾರತ ಕಂಡ ಸರ್ವಶ್ರೇಷ್ಠ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಅವಮಾನ ಮಾಡಿದ್ದಾರೆ.

ಭಾರತ ತಂಡ ಇಂಗ್ಲೆಂಡ್’ನ ಲಂಡನ್’ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test Championship final – WTC final 2023) ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 209 ರನ್’ಗಳ ಹೀನಾಯ ಸೋಲು ಕಂಡಿತ್ತು. ಇದರೊಂದಿಗೆ 10 ವರ್ಷಗಳಿಂದ ಐಸಿಸಿ ಟ್ರೋಫಿ ಭಾರತಕ್ಕೆ ಮತ್ತೊಮ್ಮೆ ಮರೀಚಿಕೆಯಾಗಿಯೇ ಉಳಿಯಿತು. 2013ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ, ಮತ್ತೆ ಐಸಿಸಿ ಟ್ರೋಫಿ ಗೆದ್ದಿಲ್ಲ.

ಐಸಿಸಿ ಟೂರ್ನಿಗಳಲ್ಲಿ ಭಾರತದ ವೈಫಲ್ಯದ ಹಿನ್ನೆಲೆಯಲ್ಲಿ ಧೋನಿ ಅಭಿಮಾನಿಯೊಬ್ಬ ಟ್ವೀಟ್ ಒಂದನ್ನು ಮಾಡಿದ್ದ. ಆ ಟ್ವೀಟ್’ನಲ್ಲಿ ಧೋನಿ ನಾಯಕತ್ವದಲ್ಲಿ 2007ರ ಟಿ20 ವಿಶ್ವಕಪ್ ಗೆಲುವಿನ ಬಗ್ಗೆ ಉಲ್ಲೇಖ ಮಾಡಿದ್ದ. “ನೋ ಕೋಚ್, ನೋ ಮೆಂಟರ್. ಯುವಕರ ಸೈನ್ಯ. ಹೆಚ್ಚಿನ ಹಿರಿಯ ಆಟಗಾರರು ಟೂರ್ನಿಯಲ್ಲಿ ಆಡಲು ನಿರಾಕರಿಸಿದ್ದರು. ಅದಕ್ಕೂ ಮೊದಲು ಧೋನಿಗೆ ಯಾವುದೇ ತಂಡವನ್ನು ಮುನ್ನಡೆಸಿದ ಅನುಭವವಿರಲಿಲ್ಲ. ಆದರೆ ಈ ಹುಡುಗ ಬಲಿಷ್ಠ ಆಸ್ಟ್ರೇಲಿಯಾವನ್ನು ಸೆಮಿಫೈನಲ್’ನಲ್ಲಿ ಸೋಲಿಸಿದ. ನಾಯಕನಾದ 48 ದಿನಗಳಲ್ಲೇ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ” ಎಂದು ಸಹಜವಾಗಿಯೇ ಧೋನಿ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾನೆ. ಧೋನಿ ಅಭಿಮಾನಿಯ ಈ ಟ್ವೀಟ್ ನೋಡಿ ಕೆರಳಿದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಟ್ವೀಟ್ ಮೂಲಕವೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ : Rahul Dravid : ದ್ರಾವಿಡ್ ಗರಡಿಯಲ್ಲಿ 2 ಐಸಿಸಿ ಟ್ರೋಫಿ ಸೋತ ಟೀಮ್ ಇಂಡಿಯಾ, ವಂಡೇ ವರ್ಲ್ಡ್ ಕಪ್ ಲಾಸ್ಟ್ ಚಾನ್ಸ್

“ಹೌದು.. ಈ ಎಲ್ಲಾ ಪಂದ್ಯಗಳಲ್ಲಿ ನೀವು ಹೇಳಿದ ಯುವಕನೊಬ್ಬನೇ ಆಡಿದ್ದಾನೆ. ಉಳಿದ 10 ಮಂದಿ ಆಡಿಲ್ಲ. ಹೀಗಾಗಿ ಏಕಾಂಗಿಯಾಗಿಯೇ ಆತ ವಿಶ್ವಕಪ್ ಟ್ರೋಫಿಗಳನ್ನ ಗೆಲ್ಲಿಸಿದ್ದಾನೆ. ವಿಪರ್ಯಾಸ ಏನೆಂದರೆ ಆಸ್ಟ್ರೇಲಿಯಾ ಅಥವಾ ಬೇರೆ ಯಾವುದೇ ದೇಶಗಳು ವಿಶ್ವಕಪ್ ಗೆದ್ದಾಗ ತಂಡ ಗೆದ್ದಿತೆಂದು ಹೆಡ್’ಲೈನ್’ಗಳು ಹೇಳುತ್ತವೆ. ಆದರೆ ಭಾರತ ಗೆದ್ದರೆ ನಾಯಕ ಗೆದ್ದ ಎಂದು ಹೇಳಲಾಗುತ್ತದೆ. ಕ್ರಿಕೆಟ್ ಟೀಮ್ ಗೇಮ್. ಒಟ್ಟಾಗಿ ಗೆಲ್ಲುತ್ತೇವೆ, ಒಟ್ಟಾಗಿ ಸೋಲುತ್ತೇವೆ” ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಧೋನಿ ಅಭಿಮಾನಿ ತನ್ನ ನೆಚ್ಚಿನ ಆಟಗಾರನ ಮೇಲಿನ ಅಭಿಮಾನದಿಂದ ಮಾಡಿದ ಟ್ವೀಟ್’ಗೆ ಧೋನಿಗೆ ಅವಮಾನವಾಗುವಂತೆ ಹರ್ಭಜನ್ ಸಿಂಗ್ ಟ್ವೀಟ್ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Harbhajan insulted Dhoni : Turbanator Harbhajan Singh insulted MS Dhoni in revenge for a fan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular