ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), ಸರ್ಬಿಯಾ ನಟಿ ನತಾಶ ಸ್ಟಾಂಕೋವಿಕ್’ರನ್ನು (Natasha Stankovic) ಮದುವೆಯಾಗಿ ಎರಡೂವರೆ ವರ್ಷಗಳೇ ಕಳೆದಿವೆ. ಇಬ್ಬರಿಗೂ 4 ತಿಂಗಳ ಪುಟ್ಟ ಮಗುವಿದ್ದಾನೆ. ಸರ್ಬಿಯಾ ನಟಿಯನ್ನು ಮದುವೆಯಾಗಿ ಎರಡೂವರೆ ವರ್ಷಗಳೇ ಕಳೆದಿದ್ರೂ, ಪತ್ನಿಯ ತಂದೆ-ತಾಯಿಯನ್ನು ಹಾರ್ದಿಕ್ ಪಾಂಡ್ಯ ಇದುವರೆಗೆ ಭೇಟಿ ಮಾಡಿರಲಿಲ್ಲ. ಇದೀಗ ಮೊದಲ ಬಾರಿ ಪತ್ನಿಯ ಫ್ಯಾಮಿಲಿಯನ್ನು ಪಾಂಡ್ಯ ಭೇಟಿ ಮಾಡಿದ್ದಾರೆ.
ಭಾರತಕ್ಕೆ ಬಂದಿರುವ ನತಾಶ ಸ್ಟಾಂಕೋವಿಕ್ ಅವರ ತಂದೆ-ತಾಯಿ ಹಾಗೂ ಕುಟುಂಬಸ್ಥರನನ್ನು ಪಾಂಡ್ಯ ಭೇಟಿಯಾಗಿದ್ದಾರೆ. ಹಾರ್ದಿಕ್ ಪಾಂಡ್ಯರನ್ನು ನೋಡುತ್ತಿದ್ದಂತೆ ಪತ್ನಿಯ ತಾಯಿ ರಾಡಾ ಅವರ ಸಂತಸಕ್ಕೆ ಪಾರವೇ ಇರ್ಲಿಲ್ಲ. ಅಳಿಯನನ್ನು ನೋಡಿದ ಅತ್ತೆ ಒಂದು ಕ್ಷಣ ಭಾವುಕರಾದರು, ಅಳಿಯನನ್ನು ಬಿಗಿದಪ್ಪಿ ಮುದ್ದಾಡಿದರು. ಈ ವೀಡಿಯೊವನ್ನು ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಟ್ವಿಟರ್’ನಲ್ಲಿ ಪ್ರಕಟಿಸಿದ್ದಾರೆ.
“ವೀಡಿಯೊ ಕಾಲ್ ಮತ್ತು ಫೋನ್ ಕಾಲ್’ಗಳ ನಂತರ ಈಗ ಇವರನ್ನು ನೇರವಾಗಿ ಭೇಟಿ ಮಾಡಿದ್ದೇನೆ. ನತಾಶ ಕುಟುಂಬವನ್ನು ಭೇಟಿ ಮಾಡ ಖುಷಿಯಾಗಿದೆ. ಇಂತಹ ಕ್ಷಣಗಳಿಗೆ ನಾನು ಕೃತಜ್ಞನಾಗಿರುತ್ತೇನೆ” ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ. ಸರ್ಬಿಯಾ ದೇಶದ ನಟಿ ನತಾಶ ಸ್ಟಾಂಕೋವಿಕ್’ರನ್ನು ಹಾರ್ದಿಕ್ ಪಾಂಡ್ಯ 2020ರ ಮೇ 31ರಂದು ಮದುವೆಯಾಗಿದ್ದರು. ಪಾಂಡ್ಯ-ನತಾಶ ದಂಪತಿಗೆ 2022ರ ಜುಲೈ 31ರಂದು ಗಂಡು ಮಗುವಿನ ಜನನವಾಗಿತ್ತು. ಜ್ಯೂನಿಯರ್ ಪಾಂಡ್ಯ ಹೆಸರು ಅಗಸ್ತ್ಯ ಪಾಂಡ್ಯ.
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-1ರ ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾರ್ದಿಕ್ ಪಾಂಡ್ಯಗೆ ದಕ್ಷಿಣ ಆಫ್ರಿಕಾದ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಹರಿಣಗಳ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಬುಧವಾರ (ಸೆಪ್ಟೆಂಬರ್ 28) ಕೇರಳದ ತಿರುವನಂತಪುರದಲ್ಲಿ ನಡೆಯಿದೆ. 2ನೇ ಪಂದ್ಯ ಅಕ್ಪೋಬರ್ 2ರಂದು ಗುವಾಹಟಿ ಮತ್ತು 3ನೇ ಪಂದ್ಯ ಅಕ್ಟೋಬರ್ 4ರಂದು ಇಂದೋರ್’ನಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿದ ಬೆನ್ನಲ್ಲೇ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಐಸಿಸಿ ಟಿ20 ವಿಶ್ವಕಪ್ ಅಕ್ಟೋಬರ್ 16ರಂದು ಆರಂಭವಾಗಲಿದ್ದು, ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : Team India arrives in Thiruvananthapuram: ಸಂಜು ಸ್ಯಾಮ್ಸನ್ ನಾಡಿಗೆ ಬಂದಿಳಿದ ಟೀಮ್ ಇಂಡಿಯಾಗೆ ಭರ್ಜರಿ ವೆಲ್ ಕಮ್
Hardik Pandya Meets Wife Natasha Stankovic Family