Chicken Kabab : ಮನೆಯಲ್ಲೇ ಮಾಡಿ ಹೋಟೆಲ್‌ಸ್ಟೈಲ್‌ ಗರಿಗರಿ ಚಿಕನ್‌ ಕಬಾಬ್‌

(Chicken Kabab )ಚಿಕನ್‌ ಹಾಗೂ ಚಿಕನ್‌ಗೆ ಸಂಬಂಧಪಟ್ಟ ಆಹಾರ ಖಾದ್ಯಗಳೆಂದರೆ ಮಾಂಸಹಾರಿಗಳಿಗೆ ತುಂಬಾ ಇಷ್ಟಪಡುತ್ತಾರೆ. ಚಿಕನ್‌ ಅಂದರೆ ಚಿಕ್ಕ ಮಕ್ಕಳು ಕೂಡ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಮನೆಯಲ್ಲಿ ಸೈಡ್‌ ಡಿಶ್‌ ಆಗಿ ಚಿಕನ್‌ ಕಬಾಬ್‌ನ್ನು ಈಗ ಮನೆಯಲ್ಲೇ ಸುಲಭ ರೀತಿಯಲ್ಲಿ ಮಾಡಿಕೊಂಡು ತಿನ್ನಬಹುದಾಗಿದೆ. ಮನೆಯಲ್ಲೇ ಗರಿಗರಿ ಚಿಕನ್‌ ಕಬಾಬ್‌ ಹೇಗೆ ಮಾಡುವುದು ಎನ್ನುವುದನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ:

  • 1 1/2 ಕೆಜಿ ಚಿಕನ್‌
  • ಬೆಳ್ಳುಳ್ಳಿ
  • ಶುಂಠಿ
  • ಹಸಿಮೆಣಸು
  • ಕೊತ್ತಂಬರಿ ಸೊಪ್ಪು
  • ಪುದಿನ ಸೊಪ್ಪು
  • ಕಬಾಬ್‌ ಪೌಂಡರ್‌
  • ಖಾರದ ಪುಡಿ
  • ಲಿಂಬೆಹಣ್ಣು
  • ಮೊಟ್ಟೆ

ಮಾಡುವ ವಿಧಾನ:
ಮೊದಲಿಗೆ ಒಂದೂವರೆ ಹಿಡಿ ಬೆಳ್ಳುಳ್ಳಿ, ಒಂದು ಹಿಡಿ ಶುಂಠಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದಿನ ಸೊಪ್ಪು ಸ್ವಲ್ಪ ಮತ್ತು ಐದರಿಂದ ಆರು ಹಸಿಮೆಣಸನ್ನು ಚೆನ್ನಾಗಿ ಮಿಕ್ಸಿಯಲ್ಲಿ ರುಬಿ ಪೆಸ್ಟ್‌ ತರ ಮಾಡಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಚಿಕನ್‌ ಹಾಕಿ ಅದಕ್ಕೆ ರುಬಿಕೊಂಡ ಪೆಸ್ಟ್‌, ಎರಡು ಸಣ್ಣ ಪ್ಯಾಕ್‌ ಕಬಾಬ್‌ ಪೌಂಡರ್‌, ರುಚಿಗೆ ತಕ್ಕಟ್ಟು ಖಾರದ ಪುಡಿ, ಎರಡು ಮೊಟ್ಟೆ, ಎರಡು ಲಿಂಬೆಹಣ್ಣಿನ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಒಂದು ಗಂಟೆಗಳ ಮುಚ್ಚಿ ಇಡಬೇಕು. ಆ ಮೇಲೆ ಒಂದು ಬಾಣಲೆಯಲ್ಲಿ ಕಬಾಬ್‌ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿಕೊಳ್ಳಬೇಕು. ಎಣ್ಣೆ ಬಿಸಿ ಆದ ಮೇಲೆ ಮಧ್ಯಮ ಉರಿಯಲ್ಲಿ ಇಟ್ಟುಕೊಂಡು ನೆನೆಸಿ ಇಟ್ಟುಕೊಂಡ ಕಬಾಬ್‌ನ್ನು ಒಂದೊಂದಾಗಿ ಎಣ್ಣೆಯಲ್ಲಿ ಬಿಟ್ಟು ಕರಿಯಬೇಕು. ಎಣ್ಣೆಯಲ್ಲಿ ಚೆನ್ನಾಗಿ ಐದು ನಿಮಿಷಗಳ ಕಾಲ ಬೇಯಿಸಿದರೆ ಸಾಕಾಗುತ್ತದೆ. ಹೀಗೆ ಸುಲಭವಾಗಿ ಮನೆಯಲ್ಲೇ ಗರಿಗರಿ ಚಿಕಾನ್‌ ಕಬಾಬ್ ಅನ್ನು ತಯಾರಿಸಬಹುದಾಗಿದೆ.

ಇದನ್ನೂ ಓದಿ : ಗೋಬಿಯ ಈ ಸ್ನ್ಯಾಕ್ಸ್‌ ಸವಿದಿದ್ದೀರಾ; ಗೋಬಿ–ಪೆಪ್ಪರ್‌ ಫ್ರೈ ಹೀಗೆ ಮಾಡಿ

ಇದನ್ನೂ ಓದಿ : ಹಾರ್ಮೋನ್‌ಗಳ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುವ ಗಿಡಮೂಲಿಕೆಗಳು

ಇದನ್ನೂ ಓದಿ : ಸಂಜೆಯ ಟೀ ಟೈಮ್‌ಗೆ ಇದು ಬೆಸ್ಟ್‌ : ಶೇಂಗಾದಿಂದ ಮಾಡಿ ಈ ರೀತಿಯ ಸ್ನಾಕ್ಸ್‌

ಇದನ್ನೂ ಓದಿ : ಮೃದುವಾದ ರೋಟಿ ಮಾಡಲು ಸೆಲೆಬ್ರಿಟಿ ಶೆಫ್‌ ಹೇಳುವ ಈ ಟಿಪ್ಸ್‌ ಫಾಲೋ ಮಾಡಿ

ಈ ತರಹದ (Chicken Kabab)ಚಿಕನ್‌ ಕಬಾಬ್‌ನ್ನು ಊಟದ ಸಮಯದಲ್ಲಿ ಸೈಡ್‌ ಡಿಶ್‌ ಆಗಿ ತಿನ್ನಬಹುದು. ಮನೆಗೆ ಆಕಸ್ಮಿಕವಾಗಿ ಬಂದ ಅತಿಥಿಗಳಿಗೆ ಬಹಳ ಬೇಗ ಅಡುಗೆ ಮಾಡಿ ಬಳಸಬಹುದಾಗಿದೆ. ಈ ಚಿಕನ್‌ ಕಬಾಬ್‌ ಅಲ್ಲಿ ಮನೆಯಲ್ಲೇ ತಯಾರಿಸಿದ ಶುಂಠಿ, ಬೆಳ್ಳುಳ್ಳಿ,ಕೊತ್ತಂಬರಿ ಸೊಪ್ಪು ಮತ್ತು ಪುದಿನ ಬಳಸಿರುವುದ್ದರಿಂದ ಊಟದ ನಂತರ ಬೇಗ ಜೀರ್ಣವಾಗುತ್ತದೆ. ಪುದಿನ ಇರುವುದ್ದರಿಂದ ಊಟದ ನಂತರ ಹೊಟ್ಟೆ ಉಬ್ಬರಿಸುವುದಿಲ್ಲ.

Homemade Hotel Style Crispy Chicken Kabab

Comments are closed.