Hulk Hogan : ವಿಶ್ವ ಕುಸ್ತಿ ದಂತಕಥೆ ಹಲ್ಕ್ ಹೋಗನ್ ನಿಧನ
Hulk Hogan : ವಿಶ್ವ ಕುಸ್ತಿಯ ದಂತಕಥೆ ಮತ್ತು ಡಬ್ಲ್ಯೂಡಬ್ಲ್ಯೂಇ (WWE) ಹಾಲ್ ಆಫ್ ಫೇಮರ್ ಹಲ್ಕ್ ಹೋಗನ್ ಅವರು 71 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಫ್ಲೋರಿಡಾದ ಕ್ಲಿಯರ್‌ವಾಟರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಹಲ್ಕ್ ಹೋಗನ್ ಅವರ ನಿಜವಾದ ಹೆಸರು ಟೆರ್ರಿ ಜೀನ್ ಬೊಲಿಯಾ (Terry Gene Bollea). ಅವರು 1980 ರ ದಶಕದಲ್ಲಿ ವೃತ್ತಿಪರ ಕುಸ್ತಿಯನ್ನು ಜಾಗತಿಕ ವಿದ್ಯಮಾನವನ್ನಾಗಿ ಪರಿವರ್ತಿಸಿದ ಐಕಾನಿಕ್ ವ್ಯಕ್ತಿಗಳಲ್ಲಿ ಒಬ್ಬರು
“ಹಲ್ಕ್ ಮ್ಯಾನಿಯಾ” (Hulkamania) ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿತ್ತು. ಡಬ್ಲ್ಯೂಡಬ್ಲ್ಯೂಎಫ್/ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಶಿಪ್‌ಗಳನ್ನು ಗೆದ್ದಿದ್ದರು.
ವ್ರೆಸ್ಲ್‌ಮೇನಿಯಾದಂತಹ ಅತಿದೊಡ್ಡ ಕಾರ್ಯಕ್ರಮಗಳ ಮುಖ್ಯಭಾಗವಾಗಿದ್ದರು. ಕುಸ್ತಿಯ ಜೊತೆಗೆ, ಅವರು ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿಯೂ ಕಾಣಿಸಿ ಕೊಂಡಿದ್ದರು.
Also Read : 58 ವರ್ಷದ ಬಳಿಕ ಎಡ್ಜ್‌ಬಾಸ್ಟನನ್ ನಲ್ಲಿ ಗೆದ್ದು ದಾಖಲೆ ಬರೆದ ಶುಭಮನ್ ಗಿಲ್ ಪಡೆ
ನಿಧನಕ್ಕೆ ಡಬ್ಲ್ಯೂಡಬ್ಲ್ಯೂಇ ಸೇರಿದಂತೆ ವಿಶ್ವದಾದ್ಯಂತದ ಕುಸ್ತಿ ಸಮುದಾಯ, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಅವರು ವೃತ್ತಿಪರ ಕುಸ್ತಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಮತ್ತು ಪಾಪ್ ಸಂಸ್ಕೃತಿಯಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಹೋಗನ್ ಇತ್ತೀಚಿನ ತಿಂಗಳುಗಳಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಮೇ 2025 ರಲ್ಲಿ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
Also Read : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಚ್ಚೇಧನ
ಪತ್ನಿ ಸ್ಕೈ ಡೈಲಿ ಅವರು ಹೋಗನ್ ಆರೋಗ್ಯವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಈ ಹಿಂದೆ ಸ್ಪಷ್ಟಪಡಿಸಿದ್ದರು. ಆದರೆ ಗುರುವಾರ ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.
Hulk Hogan Wrestling Legend Dies aged 71



