ಭಾನುವಾರ, ಏಪ್ರಿಲ್ 27, 2025
HomeSportsCricketICC T20 World Cup 2022 : ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಆಯ್ಕೆ, ಆಶಿಶ್‌...

ICC T20 World Cup 2022 : ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಆಯ್ಕೆ, ಆಶಿಶ್‌ ನೆಹ್ರಾ ಮಹತ್ವದ ಘೋಷಣೆ

- Advertisement -

ಮುಂಬೈ : ಐಸಿಸಿ ಟಿ20 ವಿಶ್ವಕಪ್ 2022 ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮೂರು ವರ್ಷಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಅಲ್ಲದೇ ICC T20 World Cup 2022ರಲ್ಲಿ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಸ್ಥಾನ ಪಡೆಯಲಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಶಿಶ್‌ ನೆಹ್ರಾ (Ashish Nehra big announcement) ಘೋಷಣೆ ಮಾಡಿದ್ದಾರೆ.

ದಿನೇಶ್ ಕಾರ್ತಿಕ್ ಅವರು ತಮ್ಮ ಹೊಸ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ. ಈ ಬಾರಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ತೋರಿದ ಅದ್ಬುತ ಆಟದ ನೆರವಿನಿಂದ ದಿನೇಶ್‌ ಕಾರ್ತಿಕ್‌ ಇದೀಗ ಟೀಂ ಇಂಡಿಯಾದಲ್ಲಿಯೂ ಸ್ಥಾನ ಪಡೆದಿದ್ದಾರೆ. ಅದ್ರಲ್ಲೂ ದಿನೇಶ್‌ ಕಾರ್ತಿಕ್ ರಾಜ್‌ಕೋಟ್‌ನಲ್ಲಿ ಭಾರತ ತಂಡ ಗೌರವಾನ್ವಿತ ಮೊತ್ತವನ್ನು ಗಳಿಸಲು ನೆರವಾಗಿದ್ದರು. ಕಡಿಮೆ ಎಸೆತದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಕಡಿಮೆ ಎಸೆತದಲ್ಲಿ ಅರ್ಧ ಶತಕ ಗಳಿಸಿದ ಭಾರತದ ಅತ್ಯಂತ ಹಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಇದೀಗ ಟೀಂ ಇಂಡಿಯಾಗೆ ದಿನೇಶ್‌ ಕಾರ್ತಿಕ್‌ ಪುನರಾಗಮನ ಹೊಸ ಹುಮ್ಮಸ್ಸನ್ನು ತಂಡಿದೆ. ಈ ಬಾರಿಗೆ ಐರ್ಲೆಂಡ್‌ ಸರಣಿಗೆ ಆಯ್ಕೆ ಮಾಡಿರುವ ಟೀಂ ಇಂಡಿಯಾದಲ್ಲಿ ಕಾರ್ತಿಕ್‌ ಸ್ಥಾನ ಪಡೆದಿದ್ದಾರೆ. ಒಂದೊಮ್ಮೆ ಕ್ಲಿಕ್‌ ಆದ್ರೆ ಒಂದಿಷ್ಟು ವರ್ಷಗಳ ಕಾಲ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ICC T20 ವಿಶ್ವಕಪ್ 2022 ಗಾಗಿ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಈಗಾಗಲೇ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.

ದಿನೇಶ್‌ ಕಾರ್ತಿಕ್‌ ಅವರು ಈಗಾಗಲೇ ಟಿ20 ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದಾರೆ. ಅವರು 200 ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಗಳಿಸಿದ್ದಾರೆ ಎಂದು ನೆಹ್ರಾ ಅವರು ಕ್ರಿಕ್‌ಬಜ್‌ನ ಶೋನಲ್ಲಿ ಹೇಳಿದ್ದಾರೆ. ನಾಲ್ಕನೇ T20I ನಲ್ಲಿ, 12.5 ಓವರ್‌ಗಳಲ್ಲಿ 81/4 ರಿಂದ, ಕಾರ್ತಿಕ್ 203.7 ರ ಸ್ಟ್ರೈಕ್ ರೇಟ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಿಡಿಸುವ ಮೂಲಕ ಭಾರತ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.

ದಿನೇಶ್‌ ಕಾರ್ತಿಕ್‌ ಅವರು ಹಾರ್ದಿಕ್ ಪಾಂಡ್ಯ ಅವರೊಂದಿಗೆ 33 ಎಸೆತಗಳಲ್ಲಿ 65 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 82 ರನ್‌ಗಳ ಭಾರತವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ನಂ.6 ರಲ್ಲಿ ಬ್ಯಾಟ್ ಮಾಡಿದರು, ಅದು ನನಗೆ ಇಷ್ಟವಾಯಿತು, ಮತ್ತು ಅವರು ಅರ್ಧ ಶತಕ ಗಳಿಸಿದ್ದಾರೆ ಎಂಬ ಅಂಶ… ಅವರ ಇನ್ನಿಂಗ್ಸ್ ದೀರ್ಘವಾಗಿತ್ತು ಮತ್ತು ಅವರು ಆಟದಲ್ಲಿ ಮೊದಲೇ ಬ್ಯಾಟ್ ಮಾಡಲು ಪಡೆದರು… ಆದ್ದರಿಂದ ಇವು ನಿಮ್ಮ ಹೆಚ್ಚಿನ ನಿರೀಕ್ಷೆಗಳಾಗಿವೆ. ಅನುಭವಿ ಆಟಗಾರನನ್ನು ನೀವು ತಂಡಕ್ಕೆ ಕರೆಸಿಕೊಂಡಿದ್ದೀರಿ ಎಂದು ನೆಹ್ರಾ ಹೇಳಿದರು.

“ಹೌದು, ಅವರು ಕೊನೆಯ 3-4 ಓವರ್‌ಗಳಲ್ಲಿ ರನ್ ಗಳಿಸುತ್ತಾರೆ, ಆದರೆ ಅನುಭವ ಎಂದರೆ ಅವರಿಗೆ ಇತರ ಬಹಳಷ್ಟು ವಿಷಯಗಳೂ ತಿಳಿದಿವೆ. ಆಯ್ಕೆಗಾರರು ಮತ್ತು ತಂಡದ ನಿರ್ವಹಣೆ ಎಲ್ಲರೂ ಸಂತೋಷವಾಗಿರಬೇಕು. ನಾಕ್ ಖಂಡಿತವಾಗಿಯೂ ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ಮುಂದೆ ಹೋಗುವುದು, ಆ ಬ್ಯಾಟಿಂಗ್ ಸ್ಥಾನದಲ್ಲಿನ ಪ್ರಭಾವದ ಬಗ್ಗೆ ಈ ಸಂಪೂರ್ಣ ಚರ್ಚೆ… ನಿಮಗೆ ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ರವೀಂದ್ರ ಜಡೇಜಾ ಮತ್ತು ನಂತರ ಕಾರ್ತಿಕ್ ಅನುಭವವಿದೆ ಎಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ 200 ರನ್‌ಗಳ ಗುರಿಯನ್ನು ಬೆನ್ನಟ್ಟಲು ನಿಮಗೆ ಸಹಾಯ ಮಾಡುವ ರೀತಿಯ ಆಟಗಾರ,” ಎಂದು ಭಾರತದ ಮಾಜಿ ವೇಗಿ ಹೇಳಿದ್ದಾರೆ.

ಇದನ್ನೂ ಓದಿ : ಯುವರಾಜ್ ಸಿಂಗ್ ಮಗನಿಗೆ ನಾಮಕರಣ ; ಸಿಕ್ಸರ್ ಸಿಂಗ್ ಪುತ್ರನ ಹೆಸರೇನು ಗೊತ್ತಾ?

ಇದನ್ನೂ ಓದಿ : IND vs SA 5th T20 ಮಳೆಗೆ ಬಲಿ : 50% ಟಿಕೆಟ್ ಹಣ ವಾಪಸ್, KSCA ಮಹತ್ವದ ನಿರ್ಧಾರ

ICC T20 World Cup 2022 Dinesh Karthik select, Ashish Nehra big announcement

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular