Fitness Apps : ನೀವು ಫಿಟ್‌ನೆಸ್‌ ಆಪ್‌ಗಳನ್ನು ಹುಡುಕುತ್ತಿದ್ದೀರಾ? ಇಲ್ಲಿದೆ 5 ಬೆಸ್ಟ್‌ ಫಿಟ್‌ನೆಸ್‌ ಆಪ್‌ಗಳು!

ಇವತ್ತಿನ ದಿನಗಳಲ್ಲಿ ಬಹಳ ಮಹತ್ವವಾದದ್ದು ಫಿಟ್‌ ಮತ್ತು ಹೆಲ್ದಿ (Fit and Healthy) ಯಾಗಿರುವುದು. ಅದಕ್ಕಾಗಿ ಹಲವರು ಫಿಟ್‌ನೆಸ್‌ ಕ್ಲಬ್‌, ಯೋಗಾ ಕ್ಲಾಸ್‌, ಜಿಮ್‌ಗೆ ಸೇರುವುದು ಮತ್ತು ಏನೋನೋ ಮಾಡಲು ಯೋಚಿಸುತ್ತಾರೆ. ಆದರೆ, ಅದೆಲ್ಲದಕ್ಕೂ ನಿಗದಿತ ಸಮಯದ ಹೊಂದಾಣಿಕೆಯ ಅವಶ್ಯಕತೆಯಿದೆ. ಆದ್ದರಿಂದ ನೀವು ಕೆಲವು ಹೆಲ್ತ ಮತ್ತು ಫಿಟ್‌ನೆಸ್‌ ಆಪ್‌ (Fitness Apps) ಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ (Smartphone) ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವುದರ ಮೂಲಕ ನಿಮ್ಮ ಚಟುವಟಿಕೆಗಳ ಮೇಲೆ ಸುಲಭಾಗಿ ನಿಗಾವಹಿಸಬಹುದು. ಇಲ್ಲಿ ಹೇಳಿರುವ ಜನಪ್ರಿಯ ಹೆಲ್ತ್‌ ಮತ್ತು ಫಿಟ್‌ನೆಸ್‌ ಆಪ್‌ಗಳನ್ನು ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ನಿಮ್ಮ ಫಿಟ್‌ನೆಸ್‌ ಮತ್ತು ಹೆಲ್ತ್‌ಗೆ ಪ್ರಯೋಜನವಾಗುವ ಬೆಸ್ಟ್‌ ಆಪ್‌ಗಳು :

  1. ಡೈಲಿ ಯೋಗಾ:
    ಯಾರು ಪ್ರತಿನಿತ್ಯವೂ ಯೋಗಾಭ್ಯಾಸ ಮಾಡುತ್ತಾರೋ ಅಂತವರು ಈ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುಬಹುದು. ಇದರಿಂದ ಅವರಿಗೆ ಡೈಲಿ ಟಿಪ್ಸ್‌ಗಳು ದೊರಕುತ್ತವೆ. ಮುಖ್ಯವಾಗಿ ಈ ಆಪ್‌ ಯೋಗಾಭ್ಯಾಸದ ಅವಧಿಯನ್ನು ಟ್ರ್ಯಾಕ್‌ ಮಾಡಲು ಸಲಹೆ ಮತ್ತು ಸಮಯದ ಸೂಚನೆಗಳನ್ನು ಒದಗಿಸುತ್ತದೆ. ಇದಲ್ಲದೇ ಬಳಕೆದಾರರ ಗಮನವನ್ನು ಕೇಂದ್ರೀಕರಿಸುವ ಸಲುವಾಗಿ ಧ್ವನಿ ಕ್ಲಿಪ್‌ಗಳನ್ನು ಒಳಗೊಂಡಿದೆ.
  2. ಗೂಗಲ್‌ ಫಿಟ್‌:
    ಗೂಗಲ್‌ನಿಂದ ರಚಿಸಲ್ಪಟ್ಟ ಗೂಗಲ್‌ ಫಿಟ್‌ ಆಪ್‌ ವರ್ಕೌಟ್‌ ಟ್ರ್ಯಾಕರ್‌ ಆಪ್‌ ಆಗಿದೆ. ಈ ಆಪ್‌ ಬಳಕೆದಾರರ ವೇಗ, ಎತ್ತರ, ನಡಿಗೆ, ಓಟ, ಮಾರ್ಗ ಮತ್ತು ಇತರ ಚಟುವಟಿಕೆಗಳನ್ನು ಗುರುತಿಸುತ್ತದೆ. ಇದರ ಜೊತೆಗೆ ಬಳಕೆದಾರರು ಎಷ್ಟು ಸ್ಟೆಪ್ಸ್‌ ನಡೆದಿದ್ದಾರೆ ಮತ್ತು ಎಷ್ಟು ಕ್ಯಾಲೋರಿಗಳು ಬರ್ನ್‌ ಆಗಿದೆ ಎಂಬುದರ ಮಾಹಿತಿ ಇರಿಸುತ್ತದೆ.
  3. ಹೆಲ್ದಿಫೈಮೀ:
    ಈ ಆಪ್‌ ನಿಮ್ಮ ಆರೋಗ್ಯ ಮತ್ತು ಫಿಟ್ನೆಸ್‌ ಗುರಿ ತಲುಪಲು ಸಹಾಯ ಮಾಡುತ್ತದೆ. ಹೆಲ್ದಿಫೈ ವರ್ಕೌಟ್‌ ಟ್ರ್ಯಾಕರ್‌, ವೈಟ್‌ ಲಾಸ್‌ ಟ್ರ್ಯಾಕರ್‌, ನೀವು ಕುಡಿಯುವ ನೀರಿನ ಟ್ರ್ಯಾಕರ್‌, ಮತ್ತು ನಿಮ್ಮ ನಿದ್ದೆ ಮತ್ತು ಹ್ಯಾಂಡ್‌ವಾಶ್‌ ಟ್ರ್ಯಾಕರ್‌ ಅನ್ನು ಸುಗಮಗೊಳಿಸುತ್ತದೆ. ಇದರ ಹೊರತಾಗಿ, ಬಳಕೆದಾರರು ಪೂರ್ಣ ದೇಹದ ವರ್ಕೌಟ್‌ಗಳು ಮತ್ತು ಯೋಗಾಗಳನ್ನು ಮತ್ತು ಯಾವುದೇ ಸಲಕರಣೆಗಳಲ್ಲಿದ ಹೋಮ್‌ ವರ್ಕೌಟ್‌ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.
  4. ಕ್ಯಾಲೋರಿ ಕೌಂಟರ್‌ ಮೈಫಿಟ್‌ನೆಸ್‌ ಪಲ್‌ :
    ಇದು ಉತ್ತಮ ಫಿಟ್‌ನೆಸ್‌ ಆಪ್‌ ಆಗಿದ್ದು, ತೂಕ ಇಳಿಸುವವರಿಗೆ ಮತ್ತು ಅಂತಹವರು ಏನನ್ನು ಸೇವಿಸಬೇಕು ಎಂಬುದನ್ನು ತಿಳಿಯಲು ಸಹಾಯ ಮಾಡುವ ಆಪ್‌ ಆಗಿದೆ. ಅದಲ್ಲದೇ ನಿಮ್ಮ ದೇಹಕ್ಕೆ ಅನುಗುಣವಾಗಿ ಏನನ್ನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು ಎಂಬುದರ ಮಾರ್ಗದರ್ಶನ ನೀಡುತ್ತದೆ. ಈ ಆಪ್‌ ನಲ್ಲಿ 6 ಮಿಲಿಯನ್‌ಗಿಂತಲೂ ಹೆಚ್ಚಿನ ಆಹಾರದ ಉತ್ಪನ್ನಗಳ ಮಾಹಿತಿಯನ್ನು ಒಳಗೊಂಡಿದೆ. ಇದರ ಜೊತೆಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಆಹಾರದ ಒಳನೋಟ, ರೆಸ್ಟೋರೆಂಟ್‌, ರೆಸಿಪಿ, ಕ್ಯಾಲೋರಿ ಕೌಂಟರ್‌ ಮುಂತಾದವನ್ನು ಒಳಗೊಂಡಿದೆ.
  5. ಜೀಫಿಟ್‌ ವರ್ಕೌಟ್‌ ಟ್ರಾಕರ್‌ :
    ಈ ಆಪ್‌ ಬರೀ ಫಿಟ್‌ನೆಸ್‌ ಟ್ರಾಕರ್‌ ಅಷ್ಟೇ ಅಲ್ಲ, ಇದು ಜಿಮ್‌ ಟ್ರೇನರ್‌ ಸಹ ಹೌದು. ಬಳಕೆದಾರರು ಇದರಲ್ಲಿ ಉಚಿತವಾಗಿ ಫಿಟ್‌ನೆಸ್‌ ಪ್ಲಾನ್‌ಗಳನ್ನು ಪಡೆಯಬಹುದು. ಇದರಿಂದ ಬಳಕೆದಾರರು ಯಾವಾಗಲೂ ಚಟುವಟಿಕೆಯಿಂದರಿಬಹುದು. ಈ ಆಪ್‌ನಲ್ಲಿ 1300 ಚಟುವಟಿಕೆಗಳನ್ನು ವಿವರವಾಗಿ ಹೇಳಲಾಗಿದೆ.

ಇದನ್ನೂ ಓದಿ : Eating Tips For Monsoon Season: ಮಳೆಗಾಲದಲ್ಲಿ ನಿಮ್ಮ ಆಹಾರ ಸೇವನೆ ಹೀಗಿರಲಿ

ಇದನ್ನೂ ಓದಿ : Yoga For Children : ನಿಮ್ಮ ಮಕ್ಕಳ ಬುದ್ಧಿಮಟ್ಟ ಹೆಚ್ಚಬೇಕೆ? ಈ ಐದು ಯೋಗಾಸನ ಹೇಳಿ ಕೊಡಿ

(Fitness Apps 5 health and fitness apps for android users)

Comments are closed.