Shubman Gill marriage: ಲವ್ವಲ್ಲಿ ಬಿದ್ದಿದ್ದಾರಾ ಟೀಮ್ ಇಂಡಿಯಾ ಪ್ರಿನ್ಸ್? ಈ ಬಾಲಿವುಡ್ ಚೆಲುವೆಯನ್ನು ಮದುವೆಯಾಗಲಿದ್ದಾರಾ ಶುಭಮನ್ ಗಿಲ್?

ಭಾರತ ಕ್ರಿಕೆಟ್ ತಂಡದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದ್ರೆ ಅದು ಯುವ ಓಪನರ್ ಶುಭಮನ್ ಗಿಲ್ (Shubman Gill). 24 ವರ್ಷದ ಶುಭಮನ್ ಗಿಲ್ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ ಆಟಗಾರ..

Shubman gill Ridhima Pandit : ಭಾರತ ಕ್ರಿಕೆಟ್ ತಂಡದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದ್ರೆ ಅದು ಯುವ ಓಪನರ್ ಶುಭಮನ್ ಗಿಲ್ (Shubman Gill). 24 ವರ್ಷದ ಶುಭಮನ್ ಗಿಲ್ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ ಆಟಗಾರ..

 Shubman gill Ridhima Pandit
Image Credit to Original Source

ವಿರಾಟ್ ಕೊಹ್ಲಿ ಕ್ರಿಕೆಟ್’ನ ’ಕಿಂಗ್ ’ ಆದ್ರೆ, ಶುಭಮನ್ ಗಿಲ್ ’ಪ್ರಿನ್ಸ್’ ಎಂದು ಕರೆಯಲ್ಪಡುತ್ತಾರೆ. ಟೀಮ್ ಇಂಡಿಯಾದ ಪ್ರಿನ್ಸ್ ಶುಭಮನ್ ಗಿಲ್ ಬಾಲಿವುಡ್ ಚೆಲುವೆಯೊಬ್ಬಳ ಜೊತೆ ಲವ್ವಲ್ಲಿ ಬಿದ್ದಿದ್ದಾರಾ? ಆ ಚೆಲುವೆಯನ್ನೇ ಈ ವರ್ಷದ ಕೊನೆಯಲ್ಲಿ ಶುಭಮನ್ ಗಿಲ್ ಮದುವೆಯಾಗಲಿದ್ದಾರಾ? ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ : Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!

ಪಂಜಾಬ್ ಆಟಗಾರ ಶುಭಮನ್ ಗಿಲ್ ಸದ್ಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup 2024) ಆಡಲು ಅಮೆರಿಕದ ನ್ಯೂಯಾರ್ಕ್’ನಲ್ಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಭಾನುವಾರ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಆರಂಭ ವಾಗಲಿದ್ದು, ಫೈನಲ್ ಪಂದ್ಯ ಜೂನ್ 29ರಂದು ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.

ICC T20 World Cup 2024 Shubman gill Ridhima Pandit marriage clarification
Image Credit to Original Source

ವಿಶ್ವಕಪ್’ನಲ್ಲಿ ಬ್ಯುಸಿಯಾಗಿರುವ ಶುಭಮನ್ ಗಿಲ್, ಬಾಲಿವುಡ್ ನಟಿ ರಿಧಿಮಾ ಪಂಡಿತ್ (Ridhima Pandit) ಪ್ರೇಮಪಾಶದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಶುಭಮನ್ ಗಿಲ್ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದೆಲ್ಲಾ ಸುಳ್ಳು ಸುದ್ದಿ ಎಂದು ರಿಧಿಮಾ ಪಂಡಿತ್ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ : Abhishek Sharma : ಫ್ರಾಂಚೈಸಿ ಟಿ20 ಲೀಗ್ ಇತಿಹಾಸದಲ್ಲಿ ವಿಶ್ವದಾಖಲೆ ಬರೆದ ಯುವರಾಜನ ಶಿಷ್ಯ ಅಭಿಷೇಕ್ ಶರ್ಮಾ!

“ ನನ್ನ ಮದುವೆಯ ಬಗ್ಗೆ ಪತ್ರಕರ್ತರು ಬೆಳ್ಳಂ ಬೆಳಗ್ಗೆಯೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಯಾವ ಮದುವೆ ? ನಾನು ಮದುವೆಯಾಗುತ್ತಿಲ್ಲ. ಶುಭಮನ್ ಗಿಲ್ ಜೊತೆಗಿನ ಮದುವೆ ಸುದ್ದಿಯೆಲ್ಲಾ ಸುಳ್ಳು” ಎಂದು ರಿಧಿಮಾ ಪಂಡಿತ್ ಹೇಳಿದ್ದಾರೆ. ಈ ಊಹಾಪೋಹದ ಬಗ್ಗೆ ಶುಭಮನ್ ಗಿಲ್ ಇನ್ನು ಪ್ರತಿಕ್ರಿಯೆ ಕೊಟ್ಟಿಲ್ಲ.

ICC T20 World Cup 2024 Shubman gill Ridhima Pandit marriage clarification

Comments are closed.