ಬೆಂಗಳೂರು: (ICC T20 World Cup schedule) ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯುವ ಚುಟುಕು ಕ್ರಿಕೆಟ್ ಹಬ್ಬ ಟಿ20 ವಿಶ್ವಕಪ್ ಟೂರ್ನಿಯನ್ನು ಇಡೀ ಕ್ರಿಕೆಟ್ ಜಗತ್ತೇ ಎದುರು ನೋಡುತ್ತಿದೆ. ಜಗತ್ತಿನ ಬಲಿಷ್ಠ ತಂಡಗಳು ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ವಿಶ್ವಕಪ್ ಗೆಲ್ಲಲು ರಣತಂತ್ರ ಹೆಣೆಯುತ್ತಿವೆ. ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ಕೂಡ ಈ ಬಾರಿ ಚುಟುಕು ವರ್ಲ್ಡ್ ಕಪ್ ಗೆಲ್ಲುವ ಫೇವರಿಟ್ ತಂಡವಾಗಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಮಂದಿ ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಟಿ20 ವಿಶ್ವಕಪ್’ಗೆ (ICC T20 World Cup schedule) ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.
ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್-2ನಲ್ಲಿ ಸ್ಥಾನ ಪಡೆದಿದೆ.
ಐಸಿಸಿ ಟಿ20 ವಿಶ್ವಕಪ್: ಭಾರತದ ವೇಳಾಪಟ್ಟಿ (ಗ್ರೂಪ್-2)
Vs ಪಾಕಿಸ್ತಾನ: ಅಕ್ಟೋಬರ್ 23
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
Vs ಅರ್ಹತಾ ಸುತ್ತಿನ ತಂಡ: ಅಕ್ಟೋಬರ್ 27
ಸ್ಥಳ: ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ)
Vs ದಕ್ಷಿಣ ಆಫ್ರಿಕಾ: ಅಕ್ಟೋಬರ್ 30
ಸ್ಥಳ: ಪರ್ತ್
ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ (ಭಾರತೀಯ ಕಾಲಮಾನ)
Vs ಬಾಂಗ್ಲಾದೇಶ: ನವೆಂಬರ್ 02
ಸ್ಥಳ: ಅಡಿಲೇಡ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
Vs ಅರ್ಹತಾ ಸುತ್ತಿನ ತಂಡ: ನವೆಂಬರ್ 06
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
ನೇರಪ್ರಸಾರ (Live Telecast): Stat Sports Network
ಲೈವ್ ಸ್ಟ್ರೀಮಿಂಗ್ (Live Streaming): Disney + Hotstar
ಇದನ್ನೂ ಓದಿ : Virat Kohli: ಲಂಡನ್‌ನಲ್ಲಿ ವಿರಾಟ್; ಪತ್ನಿ ಅನುಷ್ಕಾ ಜೊತೆ ಸೂರ್ಯರಶ್ಮಿಯನ್ನು ಚುಂಬಿಸಿದ ಕಿಂಗ್ ಕೊಹ್ಲಿ
ಇದನ್ನೂ ಓದಿ : India Women Vs England Women: ಇಂಗ್ಲೆಂಡ್ ವನಿತೆಯರ ವಿರುದ್ಧ ಸ್ಮೃತಿ ಮಂಧನ ಅಬ್ಬರದ ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ
ICC T20 World Cup India matches when, where, who are the opponents Here is the complete schedule