ಸೋಮವಾರ, ಏಪ್ರಿಲ್ 28, 2025
HomeSportsCricketICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ,...

ICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ, ವರ್ಲ್ಡ್ ಕಪ್‌ನಲ್ಲಿ ಆಡಲಿರುವ 15 ಮಂದಿ ಆಟಗಾರರು ಇವರೇ..!

- Advertisement -

ಬೆಂಗಳೂರು: ( ICC T20 World Cup India Squad) ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಸೆಪ್ಟೆಂಬರ್ 16ರಂದು ನಡೆಯಲಿದೆ. ತಂಡದ ಆಯ್ಕೆಗೆ ಸೆಪ್ಟೆಂಬರ್ 16 ಕೊನೆಯ ದಿನವಾಗಿದ್ದು, ಬಿಸಿಸಿಐ ಆಯ್ಕೆ ಸಮಿತಿ ವೇಗಿ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ರಿಪೋರ್ಟ್’ಗೆ ಕಾಯುತ್ತಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ, ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಬುಮ್ರಾ ಅವರ ಫಿಟ್ನೆಸ್ ರಿಪೋರ್ಟ್ ಕೈಸೇರಿದ ಬೆನ್ನಲ್ಲೇ ತಂಡದ ಆಯ್ಕೆ ನಡೆಯಲಿದೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಆಡಿದ ಬಹುತೇಕ ಆಟಗಾರರು ವಿಶ್ವಕಪ್’ನಲ್ಲಿ ಆಡಲಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲಿದ್ದು, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜ ತಂಡಕ್ಕೆ ಮರಳಲಿದ್ದಾರೆ. ವಿಶ್ವಕಪ್ ತಂಡದಲ್ಲಿ ನಾಲ್ವರು ಸ್ಪೆಷಲಿಸ್ಟ್ ಬ್ಯಾಟ್ಸ್’ಮನ್’ಗಳು, ಮೂವರು ಆಲ್ರೌಂಡರ್’ಗಳು, ಇಬ್ಬರು ವಿಕೆಟ್ ಕೀಪರ್’ಗಳು, ಇಬ್ಬರು ಸ್ಪಿನ್ನರ್’ಗಳು ಹಾಗೂ ನಾಲ್ವರು ವೇಗದ ಬೌಲರ್’ಗಳು ಸ್ಥಾನ ಪಡೆಯಲಿದ್ದಾರೆ.

ಐಸಿಸಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ನಡೆಯಲಿದ್ದು, ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್-2ನಲ್ಲಿ ಸ್ಥಾನ ಪಡೆದಿದೆ. ಅರ್ಹತಾ ಸುತ್ತಿನಿಂದ ಎರಡು ತಂಡಗಳು ಗ್ರೂಪ್-2ನಲ್ಲಿ ಕಾಣಿಸಿಕೊಳ್ಳಲಿವೆ.

ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಲಿರುವ (T20 World Cup India Squad) ಭಾರತದ ಸಂಭಾವ್ಯ ತಂಡ

1.ರೋಹಿತ್‌ ಶರ್ಮಾ (ನಾಯಕ), 2.ಕೆ.ಎಲ್‌ ರಾಹುಲ್‌ (ಉಪನಾಯಕ), 3.ವಿರಾಟ್‌ ಕೊಹ್ಲಿ, 4.ಸೂರ್ಯಕುಮಾರ್‌ ಯಾದವ್, 5.ಹಾರ್ದಿಕ್‌ ಪಾಂಡ್ಯ, 6.ದಿನೇಶ್‌ ಕಾರ್ತಿಕ್‌ (ವಿಕೆಟ್ ಕೀಪರ್), 7.ರವೀಂದ್ರ ಜಡೇಜಾ, 8.ಯುಜ್ವೇಂದ್ರ ಚಹಲ್‌, 9.ಭುವನೇಶ್ವರ್‌ ಕುಮಾರ್‌, 10.ಜಸ್‌ಪ್ರೀತ್‌ ಬುಮ್ರಾ, 11.ಹರ್ಷಲ್‌ ಪಟೇಲ್‌, 12.ಅರ್ಷದೀಪ್‌ ಸಿಂಗ್‌, 13.ದೀಪಕ್‌ ಹೂಡ, 14.ರವಿಚಂದ್ರನ್‌ ಅಶ್ವಿನ್‌, 15.ರಿಷಭ್‌ ಪಂತ್‌.

ಇದನ್ನೂ ಓದಿ : Exclusive : ಐಸಿಸಿ ಟಿ20 ವಿಶ್ವಕಪ್: ಜಸ್‌ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಫಿಟ್‌ನೆಸ್ ರಿಪೋರ್ಟ್ ಔಟ್

ಇದನ್ನೂ ಓದಿ : Virat Kohli high-level mask : ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಕೊಹ್ಲಿ ಟ್ರೈನಿಂಗ್, ಏನಿದರ ವಿಶೇಷತೆ ಗೊತ್ತಾ ?

ICC T20 World Cup India Squad selection September 16 These are the 15 players

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular