Exclusive : ಐಸಿಸಿ ಟಿ20 ವಿಶ್ವಕಪ್: ಜಸ್‌ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಫಿಟ್‌ನೆಸ್ ರಿಪೋರ್ಟ್ ಔಟ್

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah fitness report) ಮತ್ತು ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ (Harshal Patel) ಆಡಲಿದ್ದಾರಾ..? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಗಾಯದ ಕಾರಣ ಏಷ್ಯಾ ಕಪ್ ಟೂರ್ನಿಗೆ ಅಲಭ್ಯರಾಗಿದ್ದ ಬುಮ್ರಾ ಮತ್ತು ಹರ್ಷಲ್ ಪಟೇಲ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಟಿ20 ವಿಶ್ವಕಪ್’ಗೆ (ICC T20 World Cup )ಲಭ್ಯರಾಗಲಿದ್ದಾರೆ.

ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಸೆಪ್ಟೆಂಬರ್ 16ರಂದು ನಡೆಯಲಿದ್ದು, ತಂಡದ ಟ್ರಂಪ್ ಕಾರ್ಡ್ ಬೌಲರ್’ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ವಾಪಸ್ಸಾಗಲಿದ್ದಾರೆ. ಇಬ್ಬರೂ ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರವನ್ನು ಮುಗಿಸಿದ್ದು, ಫಿಟ್ನೆಸ್ ಪರೀಕ್ಷೆಯಲ್ಲೂ ಪಾಸ್ ಆಗಿದ್ದಾರೆ.

ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಭಾರತದ ಸಂಭಾವ್ಯ ತಂಡ
1.ರೋಹಿತ್‌ ಶರ್ಮಾ (ನಾಯಕ), 2.ಕೆ.ಎಲ್‌ ರಾಹುಲ್‌ (ಉಪನಾಯಕ), 3.ವಿರಾಟ್‌ ಕೊಹ್ಲಿ, 4.ಸೂರ್ಯಕುಮಾರ್‌ ಯಾದವ್, 5.ಹಾರ್ದಿಕ್‌ ಪಾಂಡ್ಯ, 6.ದಿನೇಶ್‌ ಕಾರ್ತಿಕ್‌ (ವಿಕೆಟ್ ಕೀಪರ್), 7.ರವೀಂದ್ರ ಜಡೇಜಾ, 8.ಯುಜ್ವೇಂದ್ರ ಚಹಲ್‌, 9.ಭುವನೇಶ್ವರ್‌ ಕುಮಾರ್‌, 10.ಜಸ್‌ಪ್ರೀತ್‌ ಬುಮ್ರಾ, 11.ಹರ್ಷಲ್‌ ಪಟೇಲ್‌, 12.ಅರ್ಷದೀಪ್‌ ಸಿಂಗ್‌, 13.ದೀಪಕ್‌ ಹೂಡ, 14.ರವಿಚಂದ್ರನ್‌ ಅಶ್ವಿನ್‌, 15.ರಿಷಭ್‌ ಪಂತ್‌.

ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಳಲ್ಲಿ ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 20ರಂದು ಆರಂಭವಾಗಲಿದ್ದು, ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ.2ನೇ ಪಂದ್ಯ ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ಹಾಗೂ 3ನೇ ಪಂದ್ಯ ಸೆಪ್ಟೆಂಬರ್ 25ರಂದು ಹೈದರಾಬಾದ್’ನಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ನಂತರ ಭಾರತ ತಂಡದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಟಿ20 ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 28ರದು ತಿರುವನಂತಪುರದಲ್ಲಿ ನಡೆಯಲಿದೆ. ಐಸಿಸಿ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.

ಭಾರತ Vs ಆಸ್ಟ್ರೇಲಿಯಾ ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20: ಸೆಪ್ಟೆಂಬರ್ 20, ಮೊಹಾಲಿ
2ನೇ ಟಿ20: ಸೆಪ್ಟೆಂಬರ್ 23, ನಾಗ್ಪುರ
3ನೇ ಟಿ20: ಸೆಪ್ಟೆಂಬರ್ 25, ಹೈದರಾಬಾದ್

ಭಾರತ Vs ದಕ್ಷಿಣ ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20: ಸೆಪ್ಟೆಂಬರ್ 28, ತಿರುವನಂತಪುರ
2ನೇ ಟಿ20: ಅಕ್ಟೋಬರ್ 02, ಗುವಾಹಟಿ
3ನೇ ಟಿ20: ಅಕ್ಟೋಬರ್ 04, ಇಂದೋರ್

ಭಾರತ Vs ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ವೇಳಾಪಟ್ಟಿ
ಮೊದಲ ಏಕದಿನ: ಅಕ್ಟೋಬರ್ 06, ಲಕ್ನೋ
2ನೇ ಏಕದಿನ: ಅಕ್ಟೋಬರ್ 09, ರಾಂಚಿ
3ನೇ ಏಕದಿನ: ಅಕ್ಟೋಬರ್ 11, ದೆಹಲಿ

ಇದನ್ನೂ ಓದಿ : Virat Kohli high-level mask : ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಕೊಹ್ಲಿ ಟ್ರೈನಿಂಗ್, ಏನಿದರ ವಿಶೇಷತೆ ಗೊತ್ತಾ ?

ಇದನ್ನೂ ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

Exclusive ICC T20 World Cup Jasprit Bumrah, Harshal Patel fitness report out

Comments are closed.