ICC World test championship final: ಫೋಟೋ ಶೂಟ್’ನಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು

ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 – WTC final 2023) ಪಂದ್ಯಕ್ಕಿನ್ನು ಒಂದೇ ದಿನ ಬಾಕಿ. 2021-23ನೇ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಬುಧವಾರ (ಜೂನ್ 7) ಲಂಡನ್’ನಲ್ಲಿರುವ ದಿ ಓವಲ್ ಮೈದಾನದಲ್ಲಿ ಆರಂಭವಾಗಲಿದೆ. ಟೆಸ್ಟ್ ವಿಶ್ವಕಪ್ ಫೈನಲ್ ಖ್ಯಾತಿಯ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗುತ್ತಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಆಟಗಾರರು ಫೋಟೋ ಶೂಟ್’ನಲ್ಲಿ ಮಿಂಚಿದ್ದಾರೆ.

WTC ಫೈನಲ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಮೇ 23ರಂದೇ ಲಂಡನ್’ಗೆ ಪ್ರಯಾಣ ಬೆಳೆಸಿದ್ದರು. ಕಳೆದ 10 ದಿನಗಳಿಂದ ರೋಹಿತ್ ಶರ್ಮಾ ಬಳಗ ದಿ ಓವಲ್ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದ್ದು, ಈ ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ. 2021ರಲ್ಲಿ ಇಂಗ್ಲೆಂಡ್’ನ ಸೌಥಾಂಪ್ಟನ್ ಮೈದಾನದಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಫೈನಲ್ ತಲುಪಿದ್ದು, ಫೈನಲ್’ನಲ್ಲಿ ಕಾಂಗರೂಗಳ ಸವಾಲು ಎದುರಾಗಿದೆ.

WTC ಫೈನಲ್ ಪಂದ್ಯ ಬುಧವಾರ ಮಧ್ಯಾಹ್ನ 3 ಗಂಟೆಗೆ (ಭಾರತೀಯ ಕಾಲಮಾನ) ಆರಂಭವಾಗಲಿದೆ. ಆಲ್ರೌಂಡರ್ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಇದೇ ಮೊದಲ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ಕಾಣಿಸಿಕೊಂಡಿದೆ.

WTC 2023 ಫೈನಲ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:

  • ರೋಹಿತ್ ಶರ್ಮಾ (ನಾಯಕ)
  • ಶುಭಮನ್ ಗಿಲ್
  • ಚೇತೇಶ್ವರ್ ಪೂಜಾರ
  • ವಿರಾಟ್ ಕೊಹ್ಲಿ
  • ಅಜಿಂಕ್ಯ ರಹಾನೆ
  • ರವೀಂದ್ರ ಜಡೇಜ
  • ಕೆ.ಎಸ್ ಭರತ್ (ವಿಕೆಟ್ ಕೀಪರ್)
  • ರವಿಚಂದ್ರನ್ ಅಶ್ವಿನ್
  • ಮೊಹಮ್ಮದ್ ಶಮಿ
  • ಮೊಹಮ್ಮದ್ ಸಿರಾಜ್
  • ಉಮೇಶ್ ಯಾದವ್

ಇದನ್ನೂ ಓದಿ : Rishabh Pant : ಬೆಂಗಳೂರಿನಲ್ಲಿದ್ದಾನೆ ರಿಷಭ್ ಪಂತ್.., ಎಲ್ಲಿಗೆ ಬಂತು ಕಂಬ್ಯಾಕ್ ಮ್ಯಾಟರ್?

ICC World test championship final: Team India players shined in the photo shoot

Comments are closed.