IND vs WI ODI Series: ವಿಂಡೀಸ್ ವಿರುದ್ಧದ ಏಕದಿನ ಸರಣಿ : ಟೀಮ್ ಇಂಡಿಯಾದ ಈ ಪಂಚಪಾಂಡವರ ಪಾಲಿಗೆ ಇಂಪಾರ್ಟೆಂಟ್

ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ( IND vs WI ODI Series) ಮೊದಲ ಪಂದ್ಯ ನಾಳೆ (ಶುಕ್ರವಾರ) ಟ್ರಿನಿಡಾಡ್’ನಲ್ಲಿ ನಡೆಯಲಿದೆ. ವಿಂಡೀಸ್ ವಿರುದ್ಧದ ಏಕದಿನ ಸರಣಿ ಟೀಮ್ ಇಂಡಿಯಾದ ಐವರು ಆಟಗಾರರ ಪಾಲಿಗೆ ತುಂಬಾನೇ ಇಂಪಾರ್ಟೆಂಟ್. ವೆಸ್ಟ್ ಇಂಡೀಸ್ ವಿರುದ್ಧ ಆ ಐವರು ಆಟಗಾರರು ಮಿಂಚಿದರೆ ಭವಿಷ್ಯದಲ್ಲಿ ಭಾರತ ಪರ ಆಡುವ ಮತ್ತಷ್ಟು ಅವಕಾಶಗಳು ಲಭ್ಯವಾಗಲಿವೆ. ಹಾಗಾದ್ರೆ ಆ ಪಂಚ ಪಾಂಡವರು ಯಾರು?

 ಶುಭಮನ್ ಗಿಲ್

ಭಾರತ ಟೆಸ್ಟ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill), ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕ ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. 2018ರ ಐಸಿಸಿ ಅಂಡರ್-19 ವಿಶ್ವಕಪ್’ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಪಂಜಾಬ್’ನ ಶುಭಮನ್ ಗಿಲ್ ಇಂಡಿಯಾ ಸೀನಿಯರ್ ತಂಡದಲ್ಲಿ ಟೆಸ್ಟ್ ಆಡುವ ಅವಕಾಶ ಪಡೆದಿದ್ದು, ಸೀಮಿತ ಓವರ್’ಗಳಲ್ಲಿ ಅವಕಾಶ ಸಿಕ್ಕಿಲ್ಲ. ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶುಭಮನ್ ಗಿಲ್ ಮಿಂಚಿದ್ರೆ, ಭಾರತ ಪರ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಅವಕಾಶ ಸಿಗಬಹುದು.

ಸಂಜು ಸ್ಯಾಮ್ಸನ್

ಭಾರತ ಪರ ಇತ್ತೀಚೆಗೆ ಟಿ20 ಕ್ರಿಕೆಟ್’ನಲ್ಲಿ ಮಿಂಚಿದ್ರೂ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಮುಂಬೈ ಆಟಗಾರ ಶ್ರೇಯಸ್ ಅಯ್ಯರ್’ಗಾಗಿ ಸಂಜು ಸ್ಯಾಮ್ಸನ್ (Sanju Samson) ಅವರಿಗೆ ಅವಕಾಶ ನಿರಾಕರಿಸಲಾಗಿದೆ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಮ್ಮನ್ನು ಟಿ20 ಸರಣಿಗೆ ಕಡೆಗಣಿಸಿದ ಬಿಸಿಸಿಐ ಆಯ್ಕೆ ಸಮಿತಿಗೆ ಆಟದಿಂದಲೇ ಉತ್ತರ ಕೊಡುವ ಅವಕಾಶ ಸಂಜು ಸ್ಯಾಮ್ಸನ್ ಮುಂದಿದೆ.

ದೀಪಕ್ ಹೂಡ

ಭಾರತ ತಂಡದ ಹೊಸ ಭರವಸೆ ದೀಪಕ್ ಹೂಡ ಇತ್ತೀಚೆಗೆ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಅಮೋಘ ಪ್ರದರ್ಶನ ತೋರಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿಯ 2ನೇ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದ ಹೂಡ, ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದಾರೆ. ಭಾರೀ ಪೈಪೋಟಿಯ ಮಧ್ಯೆ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ದೀಪಕ್ ಹೂಡಗೆ ವಿಂಡೀಸ್ ವಿರುದ್ಧದ ಸರಣಿ ಮಹತ್ವದ್ದು.

ಅರ್ಷದೀಪ್ ಸಿಂಗ್

ಪಂಜಾಬ್’ನ ಯುವ ಎಡಗೈ ಮಧ್ಯಮ ವೇಗದ ಬೌಲರ್. ಐಪಿಎಲ್’ನಲ್ಲಿ ಅಮೋಘ ಪ್ರದರ್ಶನ ತೋರಿದ್ದ ಅರ್ಷದೀಪ್, ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಐಸಿಸಿ ಟಿ20 ವಿಶ್ವಕಪ್’ಗಾಗಿ ಭಾರತ ತಂಡ ಓರ್ವ ಎಡಗೈ ಮಧ್ಯಮ ವೇಗಿಯ ಹುಡುಕಾಟದಲ್ಲಿದ್ದು, ವಿಂಡೀಸ್ ವಿರುದ್ಧ ಅರ್ಷದೀಪ್ ಸಿಂಗ್ ಮಿಂಚಿದ್ರೆ ವಿಶ್ವಕಪ್ ತಂಡದಲ್ಲಿ ಈ ಯುವ ವೇಗಿಗೆ ಅವಕಾಶ ಸಿಗಬಹುದು.

ರುತುರಾಜ್ ಗಾಯಕ್ವಾಡ್

ಐಪಿಎಲ್’ನಲ್ಲಿ ಗಮನ ಸೆಳೆದು ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ನಿರಾಸೆ ಮೂಡಿಸಿರುವ ಯುವ ಬಲಗೈ ಆರಂಭಿಕ ಬ್ಯಾಟ್ಸ್’ಮನ್. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಎಲ್ಲಾ ಪಂದ್ಯಗಳಲ್ಲಿ ಅವಕಾಶ ಸಿಕ್ಕಿದ್ರೂ, ಗಳಿಸಿದ್ದು ಕೇವಲ ಒಂದು ಅರ್ಧಶತಕ ಮಾತ್ರ. ಹೀಗಾಗಿ ಈ ಮಹಾರಾಷ್ಟ್ರ ಆಟಗರನಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮಹತ್ವದ್ದಾಗಿದೆ.

ಇದನ್ನೂ ಓದಿ : I love Virat .. ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಯಾಕೆ ಹೀಗಂದ್ರು ?

ಇದನ್ನೂ ಓದಿ : Virat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್

IND vs WI ODI Series Ruthuraj Gaikwad Gaikwad Deepak Hooda Sanju Samsun Arshadeep Singh Shubman Gill These Indian Players Important

Comments are closed.