IND-W vs PAK-W : ಪಾಕ್ ಮಹಿಳೆಯರ ವಿರುದ್ಧ ಭಾರತದ ವನಿತೆಯರಿಗೆ ಭರ್ಜರಿ ಜಯ

ಬರ್ಮಿಂಗ್’ಹ್ಯಾಮ್ : ( IND-W vs PAK-W) ಕಾಮನ್ವೆಲ್ತ್ ಗೇಮ್ಸ್-2022ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಪಾಕಿಸ್ತಾನ ವಿರುದ್ಧ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದ ಹರ್ಮನ್’ಪ್ರೀತ್ ಬಳಗ, ( India Women Cricket Team) ಪಾಕಿಸ್ತಾನ ವನಿತೆಯರನ್ನು ಮಣಿಸುವ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಗೆಲುವು ದಾಖಲಿಸಿತು.

ಮಳೆಯ ಕಾರಣ 18 ಓವರ್’ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ವನಿತಾ ತಂಡ, ಭಾರತೀಯ ಕರಾರುವಾಕ್ ಸಂಘಟಿತ ದಾಳಿಗೆ ತತ್ತರಿಸಿ ಕೇವಲ 99 ರನ್ನಿಗೆ ಆಲೌಟಾಯಿತು. ಭಾರತ ಪರ ಸ್ಪಿನ್ನರ್’ಗಳಾದ ಸ್ನೇಹ್ ರಾಣಾ ಮತ್ತು ರಾಧಾ ಯಾದವ್ ತಲಾ ಎರಡು ವಿಕೆಟ್ ಉರುಳಿಸಿದರು.

ಸುಲಭ ಗುರಿ ಬೆನ್ನಟ್ಟಿದ ಭಾರತೀಯ ತಂಡ, ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರ ಸ್ಫೋಟಕ ಅರ್ಧಶತಕ ನೆರವಿನಿಂದ ಕೇವಲ 11.4 ಓವರ್’ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಾಕ್ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದ ಮಂಧಾನ ಕೇವಲ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ ಅಜೇಯ 63 ರನ್ ಸಿಡಿಸಿದ್ರು.

ಭಾರತ ಮಹಿಳಾ ಕ್ರಿಕೆಟ್‌ ತಂಡ : 11.4 ಓವರ್‌ಗಳಲ್ಲಿ 2 ವಿಕೆಟ್‌ಗೆ 102 ರನ್‌ (ಶಫಾಲಿ ವರ್ಮಾ 16, ಸ್ಮೃತಿ ಮಂಧಾನಾ 63*, ಸಭಿನೇನಿ ಮೇಘನಾ 14; ತುಬಾ ಹಸನ್‌ 18ಕ್ಕೆ 1, ಒಮೈಮಾ ಸೊಹೇಲ್‌ 20ಕ್ಕೆ 1)

ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ: 18 ಓವರ್‌ಗಳಲ್ಲಿ 99 ರನ್‌ಗಳಿಗೆ ಆಲ್‌ಔಟ್‌ (ಮಿನೀಬಾ ಅಲಿ 32, ಬಿಸ್ಮಾ ಮಹರೂಫ್ 17, ಆಲಿಯಾ ರಿಯಾಝ್ 18; ಸ್ನೇಹಾ ರಾಣಾ 15ಕ್ಕೆ 2, ರಾಧಾ ಯಾದವ್‌ 18ಕ್ಕೆ 2)

ಇದನ್ನೂ ಓದಿ : Jeremy Lalrinnunga: ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಜೆರೆಮಿ ಲಾಲ್ರಿನ್ನುಂಗಾ ಬಗ್ಗೆ ಇಲ್ಲಿದೆ ಒಂದಿಷ್ಟು ಕುತೂಹಲಕಾರಿ ಸಂಗತಿ

ಇದನ್ನೂ ಓದಿ : Marnus Labuschagne insult Sachin Tendulkar : ಕ್ರಿಕೆಟ್ ದೇವರಿಗೆ ಅವಮಾನ ಮಾಡಿದ್ರಾ ಈ ಆಸೀಸ್ ಕ್ರಿಕೆಟರ್ ?

ಇದನ್ನೂ ಓದಿ : KL Rahul hits back to Critics : ರಾಹುಲ್ ಬಗ್ಗೆ ಇಲ್ಲ ಸಲ್ಲದ ಟೀಕೆ ; ಚುಚ್ಚು ಮಾತುಗಳಿಗೆ ಖಡಕ್ ಉತ್ತರ ಕೊಟ್ಟ ಕನ್ನಡಿಗ

IND-W vs PAK-W Commonwealth Games Cricket India Win

Comments are closed.