Indian Hockey Team : ಕಾಮನ್ವೆಲ್ತ್ ಗೇಮ್ಸ್‌ ನಿಂದ ಹಿಂದೆ ಸರಿದ ಭಾರತದ ಹಾಕಿ ತಂಡ

ನವದೆಹಲಿ : ಬರ್ಮಿಂಗ್‌ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ನ ಹಾಕಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಭಾರತದ ಹಾಕಿ ತಂಡಕ್ಕೆ ಕಂಟಕವೊಂದು ಎದುರಾಗಿದೆ. ಕೋವಿಡ್ -19 ಮತ್ತು ಬ್ರಿಟನ್‌ನ ತಾರತಮ್ಯದ ಕ್ಯಾರೆಂಟೈನ್ ನಿಯಮಗಳ ಕಾರಣದಿಂದಾಗಿ 2022 ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನ ಹಾಕಿ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಭಾರತ ಘೋಷಣೆಯನ್ನು ಮಾಡಿದೆ.

ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನಂದ್ರೊ ನಿಂಗೊಬಮ್ ಅವರು ಫೆಡರೇಶನ್ ನಿರ್ಧಾರವನ್ನ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ ಘೋಷಣೆ ಮಾಡಿದ್ದಾರೆ. ಭಾರತದ ಬಗ್ಗೆ ಬ್ರಿಟನ್‌ನ ದ್ವಂದ್ವ ಧೋರಣೆಯೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇನ್ನು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್‌ನಿಂದ ಹಿಂದೆ ಸರಿಯಲು ಬ್ರಿಟನ್ ಒಂದು ದಿನ ಮೊದಲೇ ನಿರ್ಧರಿಸಿದ್ದು, ಭಾರತದ ನಿರ್ಧಾರವೇ ಉತ್ತರ ಎಂದು ನಂಬಲಾಗಿದೆ.

ಇದನ್ನೂ ಓದಿ: T20 World Cup 2021 : 1 ಗಂಟೆಯಲ್ಲಿ ಸೋಲ್ಡೌಟ್‌ ಆಯ್ತು ಭಾರತ – ಪಾಕ್‌ ಪಂದ್ಯದ ಟಿಕೆಟ್‌

ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ( 28 ಜುಲೈ ನಿಂದ 8 ಆಗಸ್ಟ್) ಮತ್ತು ಏಷ್ಯನ್ ಗೇಮ್ಸ್ (10-25 ಸೆಪ್ಟೆಂಬರ್) ನಡುವೆ ಕೇವಲ 32 ದಿನಗಳ ಅಂತರವಿದೆ ಎಂದು ಹಾಕಿ ಇಂಡಿಯಾ ಹೇಳಿದೆ. ಹಾಗಾಗಿ ತಮ್ಮ ಆಟಗಾರರನ್ನ ಯುಕೆಗೆ ಕಳುಹಿಸುವ ಮೂಲಕ ಅಪಾಯವನ್ನ ತೆಗೆದುಕೊಳ್ಳಲು ತಾವು ಬಯಸುವುದಿಲ್ಲ ಎಂದಿದೆ.

ಇನ್ನು ನಿಂಗೊಬಮ್ ಅವ್ರು ‘ಏಷ್ಯನ್ ಗೇಮ್ಸ್ 2024 ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಖಂಡಾಂತರ ಅರ್ಹತಾ ಸ್ಪರ್ಧೆ ಮತ್ತು ಏಷ್ಯನ್ ಗೇಮ್ಸ್‌ನ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗುವ ಭಾರತೀಯ ತಂಡಗಳ ಯಾವುದೇ ಅಪಾಯವನ್ನ ಹಾಕಿ ಇಂಡಿಯಾ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: DC vs CSK IPL 2021 : ಪಂತ್‌ ಪಡೆಯ ಎದುರು ಮುಗ್ಗರಿಸಿದ ಧೋನಿ ಬಾಯ್ಸ್‌ : ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

(Indian hockey team from the Commonwealth Games)

Comments are closed.