India tour of West Indies : ಕೆರಿಬಿಯನ್ ಚಾಲೆಂಜ್’ಗೆ ಇಂದಿನಿಂದ ಟೀಮ್ ಇಂಡಿಯಾ ಸಮರಾಭ್ಯಾಸ ಶುರು, ನಾಳೆ ತಂಡ ಸೇರಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ

ಬಾರ್ಬೆಡೋಸ್: ಕೆರಿಬಿಯನ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (India tour of West Indies), ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಇಂದು (ಸೋಮವಾರ) ಸಮರಾಭ್ಯಾಸ ಆರಂಭಿಸಲಿದೆ

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಈಗಾಗಲೇ ಕೆರಿಬಿಯನ್ ನಾಡಿನಲ್ಲಿ ಬೀಡು ಬಿಟ್ಟಿದ್ದು, ಸೋಮವಾರ ತಾಲೀಮು ಶುರು ಮಾಡಲಿದೆ. ಆದರೆ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಮಂಗಳವಾರ ಟೀಮ್ ಇಂಡಿಯಾ ಪಾಳೆಯವನ್ನು ಸೇರಿಕೊಳ್ಳಲಿದ್ದಾರೆ. WTC ಫೈನಲ್ ನಂತರ ಯುರೋಪ್ ಪ್ರವಾಸದಲ್ಲಿದ್ದ ನಾಯಕ ರೋಹಿತ್ ಶರ್ಮಾ ಶನಿವಾರ ವೆಸ್ಟ್ ಇಂಡೀಸ್ ತಲುಪಿದ್ದಾರೆ.

ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ. ಪ್ರಥಮ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡ ಬಾರ್ಬೆಡೋಸ್’ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಜುಲೈ 6ರಂದು ಟೀಮ್ ಇಂಡಿಯಾ, ಸ್ಥಳೀಯ ತಂಡದ ವಿರುದ್ಧ ಪ್ರಾಕ್ಟೀಸ್ ಮ್ಯಾಚ್ ಆಡಲಿದೆ.

ಭಾರತ ಟೆಸ್ಟ್ ತಂಡ:
ರೋಹಿತ್ ಶರ್ಮಾ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜೈದೇವ್ ಉನಾದ್ಕಟ್, ನವದೀಪ್ ಸೈನಿ.

ಇದನ್ನೂ ಓದಿ : Karun Nair : ರಾಜ್ಯ ತೊರೆಯಲಿದ್ದಾರೆಯೇ ಮತ್ತೊಬ್ಬ ಕನ್ನಡಿಗ? ವಿದರ್ಭ ಪರ ಆಡಲಿದ್ದಾರೆಯೇ ಕರುಣ್ ನಾಯರ್?

ಇದನ್ನೂ ಓದಿ : Rahul Dravid – Karun Nair: ಕರ್ನಾಟಕ ತೊರೆದು ಬೇರೆ ರಾಜ್ಯದ ಪರ ಆಡಲು ಕರುಣ್ ನಾಯರ್’ಗೆ ರಾಹುಲ್ ದ್ರಾವಿಡ್ ಸಲಹೆ

ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ (India tour of West Indies 2023 Fixtures)

ಟೆಸ್ಟ್ ಸರಣಿ:
ಪ್ರಥಮ ಟೆಸ್ಟ್: ಜುಲೈ12-16 (ವಿಂಡ್ಸರ್ ಪಾರ್ಕ್, ಡೊಮಿನಿಕಾ)
ದ್ವಿತೀಯ ಟೆಸ್ಟ್: ಜುಲೈ 20-24 (ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್)

ಏಕದಿನ ಸರಣಿ:
ಮೊದಲ ಏಕದಿನ: ಜುಲೈ 27 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಎರಡನೇ ಏಕದಿನ: ಜುಲೈ 29 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಮೂರನೇ ಏಕದಿನ: ಆಗಸ್ಟ್ 01 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)

ಟಿ20 ಸರಣಿ:
ಮೊದಲ ಟಿ20: ಆಗಸ್ಟ್ 04 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)
ಎರಡನೇ ಟಿ20: ಆಗಸ್ಟ್ 06 (ನ್ಯಾಷನಲ್ ಸ್ಟೇಡಿಯಂ, ಗಯಾನ)
ಮೂರನೇ ಟಿ20: ಆಗಸ್ಟ್ 08 (ನ್ಯಾಷನಲ್ ಸ್ಟೇಡಿಯಂ, ಗಯಾನ)
ನಾಲ್ಕನೇ ಟಿ20: ಆಗಸ್ಟ್ 12 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)
ಐದನೇ ಟಿ20: ಆಗಸ್ಟ್ 13 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)

India tour of West Indies: Team India practice for the Caribbean Challenge has started today, King Kohli will join the team tomorrow.

Comments are closed.