Rajeshwari Gayakwad: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್

ಬೆಂಗಳೂರು: ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಭಾರತ ಮಹಿಳಾ ಏಕದಿನ ಹಾಗೂ ಟಿ20 ತಂಡಗಳನ್ನು (India Womens’ Cricket Team) ಪ್ರಕಟಿಸಲಾಗಿದ್ದು, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (Rajeshwari Gayakwad) ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.

ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಭಾರತ ಮಹಿಳಾ ತಂಡ ಬಾಂಗ್ಲಾದೇಶದಲ್ಲಿ 3 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಟಿ20 ಸರಣಿ ಜುಲೈ 9ರಂದು ಆರಂಭವಾಗಲಿದ್ದರೆ, ಏಕದಿನ ಸರಣಿ ಜುಲೈ 16ರಂದು ಆರಂಭವಾಗಲಿದೆ.

ಕರ್ನಾಟಕದ ಅನುಭವಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಜೊತೆ ಹಿಮಾಚಲ ಪ್ರದೇಶದ ಮಧ್ಯಮ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಮತ್ತು ಬಂಗಾಳದ ವಿಕೆಟ್ ಕೀಪರ್ ಸ್ಫೋಟಕ ಬ್ಯಾಟರ್ ರಿಚಾ ಘೋಷ್ ಕೂಡ ಬಾಂಗ್ಲಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. 2014ರಲ್ಲಿ ಟೀಮ್ ಇಂಡಿಯಾಗ ಪದಾರ್ಪಣೆ ಮಾಡಿದ್ದ 32 ವರ್ಷದ ರಾಜೇಶ್ವರಿ ಗಾಯಕ್ವಾಡ್, ಭಾರತ ಪರ ಆಡಿದ 64 ಏಕದಿನ ಪಂದ್ಯಗಳಿಂದ 99 ವಿಕೆಟ್ಸ್, 55 ಟಿ20 ಪಂದ್ಯಗಳಿಂದ 58 ವಿಕೆಟ್ಸ್ ಹಾಗೂ 2 ಟೆಸ್ಟ್ ಪಂದ್ಯಗಳಿಂದ 5 ವಿಕೆಟ್ ಪಡೆದಿದ್ದಾರೆ.

ಭಾರತ ಮಹಿಳಾ ಟಿ20 ತಂಡ:
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಜೆಮೈಮಾ ರಾಡ್ರಿಗ್ಸ್, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಎಸ್.ಮೇಘನಾ, ಪೂಜಾ ವಸ್ತ್ರಕಾರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಮೋನಿಕಾ ಪಟೇಲ್, ರಶ್ಮಿ ಖನೋಜಿಯಾ, ಅನುಶಾ ಬರೆಡ್ಡಿ, ಮಿನ್ನು ಮಣಿ.

ಇದನ್ನೂ ಓದಿ : India tour of West Indies : ಕೆರಿಬಿಯನ್ ಚಾಲೆಂಜ್’ಗೆ ಇಂದಿನಿಂದ ಟೀಮ್ ಇಂಡಿಯಾ ಸಮರಾಭ್ಯಾಸ ಶುರು, ನಾಳೆ ತಂಡ ಸೇರಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ

ಇದನ್ನೂ ಓದಿ : Rahul Dravid – Karun Nair: ಕರ್ನಾಟಕ ತೊರೆದು ಬೇರೆ ರಾಜ್ಯದ ಪರ ಆಡಲು ಕರುಣ್ ನಾಯರ್’ಗೆ ರಾಹುಲ್ ದ್ರಾವಿಡ್ ಸಲಹೆ

ಭಾರತ ಏಕದಿನ ಟಿ20 ತಂಡ:
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಜೆಮೈಮಾ ರಾಡ್ರಿಗ್ಸ್, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಕಾರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಮೋನಿಕಾ ಪಟೇಲ್, ರಶ್ಮಿ ಖನೋಜಿಯಾ, ಅನುಶಾ ಬರೆಡ್ಡಿ, ಸ್ನೇಹ್ ರಾಣಾ.

Rajeshwari Gayakwad: Kannadathi Rajeshwari Gayakwad lost her place in the Indian women’s cricket team

Comments are closed.