India tour of West Indies : ಲಂಡನ್‌ನಲ್ಲಿ ಪತ್ನಿ ಅನುಷ್ಕಾ ಜೊತೆ ಕೃಷ್ಣ ದಾಸ್ ಕೀರ್ತನೆಯಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ

ಲಂಡನ್: ಭಾರತ ತಂಡದ ಆಟಗಾರರಿಗೆ ಇದು ವಿರಾಮದ ಸಮಯ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ICC World test championship final – WTC final 2023) ನಂತರ ಕ್ರಿಕೆಟ್‌ನಿಂದ ಟೀಮ್ ಇಂಡಿಯಾ ಆಟಗಾರರಿಗೆ (India tour of West Indies) ಒಂದು ತಿಂಗಳು ಬ್ರೇಕ್ ಸಿಕ್ಕಿರುವ ಹಿನ್ನೆಲೆಯಲ್ಲಿ ಹಲವು ಆಟಗಾರರು ಯೂರೋಪ್ ಪ್ರವಾಸದಲ್ಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ WTC ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ 209 ರನ್‌ಗಳ ಹೀನಾಯ ಸೋಲು ಕಂಡಿತ್ತು. WTC ಫೈನಲ್ ಪಂದ್ಯದ ನಂತರ ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ಕೊಹ್ಲಿ ಜೊತೆ ಲಂಡನ್‌ನಲ್ಲೇ ಉಳಿದುಕೊಂಡಿದ್ದಾರೆ. ಲಂಡನ್‌ನಲ್ಲಿರುವ ಯೂನಿಯನ್ ಚಾಪೆಲ್’ಗೆ ಪತ್ನಿಯೊಂದಿಗೆ ತೆರಳಿದ ವಿರಾಟ್ ಕೊಹ್ಲಿ, ಅಲ್ಲಿ ಕೃಷ್ಣ ದಾಸ್ ಕೀರ್ತನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಪತ್ನಿ ಜೊತೆ ಕೊಹ್ಲಿ ನೆಲದಲ್ಲೇ ಕೂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

https://twitter.com/TheViratArmy/status/1670413363615236097?s=20

ಕೃಷ್ಣ ದಾಸ್ ಅಮೆರಿಕದ ಗಾಯಕ. ಇವರು ಜಗತ್ತಿನಾದ್ಯತ ಕೀರ್ತನೆಗಳ ಕಾರ್ಯಾಗಾರವನ್ನು ನಡೆಸುತ್ತಾರೆ. ಲಂಡನ್‌ನ ಯೂನಿಯನ್ ಚಾಪೆಲ್‌ನಲ್ಲಿ ಕೃಷ್ಣ ದಾಸ್ ಅವರ ಕಾರ್ಯಕ್ರಮದ ಮಾಹಿತಿ ಪಡೆಯ ವಿರಾಟ್ ಕೊಹ್ಲಿ, ಪತ್ನಿ ಜೊತೆ ಅಲ್ಲಿಗೆ ತೆರಳಿ ಕೀರ್ತನೆಯಲ್ಲಿ ಭಾಗವಹಿಸಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 14 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, 2ನೇ ಇನ್ನಿಂಗ್ಸ್‌ನಲ್ಲಿ 49 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಪರಿಣಾಮ ಭಾರತ ತಂಡ ಸತತ 2ನೇ ಬಾರಿ WTC ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿತ್ತು.

ಇದನ್ನೂ ಓದಿ : Virat Kohli net worth : ವಿರಾಟ್ ಕೊಹ್ಲಿ 1050 ಕೋಟಿಗಳ ಸರದಾರ, ಇಲ್ಲಿದೆ ಕುಬೇರ ಕೊಹ್ಲಿ ಸಂಪತ್ತಿನ ಅಸಲಿ ಗುಟ್ಟು!

ಕ್ರಿಕೆಟ್‌ನಿಂದ ಸದ್ಯ ತಾತ್ಕಾಲಿಕ ವಿರಾಮ ಪಡೆದಿರುವ ಕ್ರಿಕೆಟ್ ತಾರೆಗಳು ಮುಂದಿನ ತಿಂಗಳು ನಡೆಯುವ ವೆಸ್ಟ್ ಇಂಡೀಸ್ ಪ್ರವಾಸದ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.

India tour of West Indies: Virat Kohli attended Krishna Das Kirtan with wife Anushka in London

Comments are closed.