ಸೋಮವಾರ, ಏಪ್ರಿಲ್ 28, 2025
HomeSportsCricketKL Rahul fan in Zimbabwe team : ಜಿಂಬಾಬ್ವೆ ತಂಡದಲ್ಲಿದ್ದಾನೆ ಕೆ.ಎಲ್ ರಾಹುಲ್ ಅಭಿಮಾನಿ

KL Rahul fan in Zimbabwe team : ಜಿಂಬಾಬ್ವೆ ತಂಡದಲ್ಲಿದ್ದಾನೆ ಕೆ.ಎಲ್ ರಾಹುಲ್ ಅಭಿಮಾನಿ

- Advertisement -

ಹರಾರೆ: (KL Rahul fan in Zimbabwe team) ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಭಾರತ ಕ್ರಿಕೆಟ್ ತಂಡ 3 ಪಂದ್ಯಗಳ ಏಕದಿನ ಸರಣಿಗಾಗಿಗ ಜಿಂಬಾಬ್ವೆಯಲ್ಲಿದೆ. ಸರಣಿಯ ಮೊದಲ ಪಂದ್ಯ ಗುರುವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ, ಭಾರತಕ್ಕೆ ಎದುರಾಗಿ ನಿಂತಿರುವ ಜಿಂಬಾಬ್ವೆ ತಂಡದಲ್ಲಿ ಟೀಮ್ ಇಂಡಿಯಾ ನಾಯಕ ಕೆ.ಎಲ್ ರಾಹುಲ್ (KL Rahul) ಅವರ ಅಭಿಮಾನಿಯೊಬ್ಬನಿದ್ದಾನೆ. ಹೆಸರು ಇನ್ನೋಸೆಂಟ್ ಕೈಯಾ (Innocent Kaia).

30 ವರ್ಷದ ಬಲಗೈ ಬ್ಯಾಟ್ಸ್’ಮನ್ ಇನ್ನೋಸೆಂಟ್ ಕೈಯಾ ಏಕದಿನ ಸರಣಿಯಲ್ಲಿ ಆಡಲಿದ್ದು, ತಮ್ಮ ಫೇವರಿಟ್ ಕ್ರಿಕೆಟಿಗನ ನಾಯಕತ್ವದ ತಂಡದ ವಿರುದ್ಧವೇ ಕಣಕ್ಕಿಳಿಯಲಿದ್ದಾರೆ.
ಕೆ.ಎಲ್ ರಾಹುಲ್ ಶತಕ ಬಾರಿಸಿದಾಗ “ಶಟ್ ದಿ ನಾಯ್ಸ್” ಶೈಲಿಯಲ್ಲಿ (Shut the Noise celebration) ಸಂಭ್ರಮಿಸುತ್ತಾರೆ. ಶತಕದ ಸಂಭ್ರಮವನ್ನು ಎರಡೂ ಕಿವಿಗಳನ್ನು ಮುಚ್ಚಿ ಸಂಭ್ರಮಿಸುವುದು ರಾಹುಲ್ ಅವರ ಟ್ರೇಡ್ ಮಾರ್ಕ್. ಜಿಂಬಾಬ್ವೆ ತಂಡದ ಇನ್ನೋಸೆಂಟ್ ಕೈಯಾ ಕೂಡ ಶತಕ ಬಾರಿಸಿದ ನಂತರ ರಾಹುಲ್ ಅವರ ಟ್ರೇಡ್ ಮಾರ್ಕ್ ಶೈಲಿಯನ್ನೇ ಅನುಸರಿಸಿದ್ದಾರೆ. ಆಗಸ್ಟ್ 5ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ರಾಹುಲ್ ಅವರ ಶೈಲಿಯಲ್ಲೇ ಕೈಯಾ ಸಂಭ್ರಮಿಸಿದ್ದರು.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ಗೆದ್ದಿದ್ದ ಜಿಂಬಾಬ್ವೆ, ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನೂ 2-1ರ ಅಂತರದಲ್ಲಿ ಗೆಲ್ಲಲಿದೆ ಎಂದು ಇನ್ನೋಸೆಂಟ್ ಕೈಯಾ ಭವಿಷ್ಯ ನುಡಿದಿದ್ದಾರೆ.

“ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಇಲ್ಲ. ಇವರೆಲ್ಲಾ ಅದ್ಭುತ ಆಟಗಾರರು. ಈಗ ಜಿಂಬಾಬ್ವೆಗೆ ಬಂದಿರುವ ಭಾರತ ತಂಡವೂ ಬಲಿಷ್ಠವಾಗಿದೆ. ಹೀಗಾಗಿ ನಾವು ಅವರನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಆದರೆ ಅವರಿಗೆ ನಾವು ತೀವ್ರ ಸ್ಪರ್ಧೆಯೊಡ್ಡಲಿದ್ದೇವೆ. ಭಾರತ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಇಲ್ಲದಿರುವುದು ನಮಗೆ ಅಡ್ವಾಂಜೇಜ್” ಎಂದು ಇನ್ನೋಸೆಂಟ್ ಕೈಯಾ ಹೇಳಿದ್ದಾರೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯ (India Vs Zimbabwe ODI Series) ಮೊದಲ ಪಂದ್ಯ ಆಗಸ್ಟ್ 18ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ಉಳಿರೆಡು ಪಂದ್ಯಗಳು ಕ್ರಮವಾಗಿ ಆಗಸ್ಟ್ 20 ಮತ್ತು 22ರಂದು ಅದೇ ಮೈದಾನದಲ್ಲಿ ನಡೆಯಲಿವೆ. 30 ವರ್ಷದ ಇನ್ನೋಸೆಂಟ್ ಕೈಯಾ ಜಿಂಬಾಬ್ವೆ ಪರ 6 ಏಕದಿನ ಹಾಗೂ 8 ಟಿ20 ಪಂದ್ಯಗಳನ್ನಾಡಿದ್ದು, 14 ಪಂದ್ಯಗಳಿಂದ ಒಟ್ಟು 364 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Indian ABD Suryakumar Yadav: ಸೂರ್ಯಕುಮಾರ್ ಯಾದವ್ ಭಾರತದ ಎಬಿ ಡಿ’ವಿಲಿಯರ್ಸ್ ಎಂದ ಆಸ್ಟ್ರೇಲಿಯಾ ದಿಗ್ಗಜ

ಇದನ್ನೂ ಓದಿ : BCCI former Secretary Amitabh Chaudhary : ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೃದಯಾಘಾತದಿಂದ ಸಾವು

India Tour of Zimbabwe KL Rahul fan in Zimbabwe team

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular