Ganesha festival in Idga Maidan : ಸ್ವಾತಂತ್ರ್ಯೋತ್ಸವ ಆಯ್ತು ಈಗ ಗಣೇಶೋತ್ಸವಕ್ಕೆ ಬೇಡಿಕೆ : ಮತ್ತೆ ವಿವಾದಕ್ಕೆ ಕಾರಣವಾಯ್ತು ಈದ್ಗಾ ಮೈದಾನ

ಬೆಂಗಳೂರು : (Ganesha festival in Idga Maidan) ಈದ್ಗಾ ಮೈದಾನವನ್ನು ಹಲವು ವರ್ಷಗಳಿಂದ ಮುಸ್ಲಿಂರು ತಮ್ಮ ಪ್ರಾರ್ಥನೆಗೆ ಬಳಸುತ್ತ ಬಂದಿದ್ದರು. ಅಲ್ಲಿ ಈದ್ಗಾ ಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ವರ್ಷ ಈ ಮಧ್ಯೆ ಈದ್ಗಾ ಮೈದಾನದ ಮಾಲಿಕತ್ವಕ್ಕಾಗಿ ಬಿಬಿಎಂಪಿ ಹಾಗೂ ವಕ್ಫ್ ಬೋರ್ಡ್ ನಡುವೆ ದೊಡ್ಡ ಯುದ್ಧವೇ ನಡೆದಿತ್ತು. ಈ ಮಧ್ಯೆ ವಕ್ಪ್ ಬೋರ್ಡ್ ಈದ್ಗಾ ಮೈದಾನದ ಮಾಲಿಕತ್ವವನ್ನು ಸಾಬೀತುಪಡಿಸುವಂತೆ ದಾಖಲೆಗಳನ್ನು ಬಿಬಿಎಂಪಿ ಗೆ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಬಿಬಿಎಂಪಿ ಈದ್ಗಾ ಮೈದಾನವನ್ನು ಕಂದಾಯ ಇಲಾಖೆ ಆಸ್ತಿ ಎಂದು ಘೋಷಿಸಿತ್ತು.

ಇದರ ಬೆನ್ನಲ್ಲೇ ಕಂದಾಯ ಇಲಾಖೆಯ ಆಸ್ತಿಯಾಗಿರೋ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಸೇರಿದಂತೆ ಎಲ್ಲ ಧರ್ಮದ ಚಟುವಟಿಕೆಗಳಿಗೂ ಅವಕಾಶ ನೀಡಬೇಕೆಂಬ ಒತ್ತಡ ಹಾಗೂ ಅಗ್ರಹ ಹಿಂದೂಪರ ಸಂಘಟನೆಗಳಿಂದ ಕೇಳಿಬಂದಿತ್ತು. ಆದರೆ ಧ್ವಜಾರೋಹಣಕ್ಕೆ ಆಕ್ಷೇಪ ವ್ಯಕ್ತಪಡಿಸದ ಮುಸ್ಲಿಂ ನಾಯಕರು ಹಾಗೂ ಸ್ಥಳೀಯ ಎಂಎಲ್ಎ ಜಮೀರ್ ಅಹ್ಮದ್ ನಾವು ಯಾವುದೇ ಕಾರಣಕ್ಕೂ ಗಣೇಶೋತ್ಸವ ಆಚರಣೆಗೆ ಬಿಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈಗಾಗಲೇ ಹಲವು ಸಂಘಟನೆಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಅಚರಿಸಲೇಬೇಕು. ಮುಸ್ಲಿಂ ದೇವರ ಪ್ರಾರ್ಥನೆಗೆ ಸಿಗುವ ಸ್ಥಾನ ಹಿಂದೂ ಆಚರಣೆಗೂ ಸಿಗಬೇಕೆಂದು ಒತ್ತಾಯಿಸಿದ್ದಾರೆ. ಈ ಮಧ್ಯೆ ಚಾಮರಾಜಪೇಟೆ ಯಲ್ಲಿ ಧ್ವಜಾರೋಹಣ ನಡೆಸಿದ ಸರ್ಕಾರದ ತೀರ್ಮಾನಕ್ಕೆ ಹಿಂದೂ ಸಂಘಟನೆಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಈದ್ಗಾ ಮೈದಾನದ ಗಣೇಶೋತ್ಸವದಲ್ಲಿ ನಡೆಸಲು ಅವಕಾಶ ಸಿಗಲೇ ಬೇಕೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸುತ್ತಲೇ ಇದ್ದಾರೆ. ಅಲ್ಲಿ ತಲೆತಲಾಂತರದಿಂದ ಮುಸ್ಕಿಂರು ತಮ್ಮ ಪ್ರಾಥನೆ ನಡೆಸುತ್ತಿದ್ದಾರೆ. ಈಗ ಭಾರಿ ಹಿಂದೂ ಗಣೇಶೋತ್ಸವಕ್ಕೆ ಅವಕಾಶ ನೀಡುವ ಮೂಲಕ ಸರ್ಕಾರ ಎಲ್ಲ ಧರ್ಮವನ್ನು ಸಮಾನವಾಗಿ ಕಾಣಬೇಕೆಂಬ ಒತ್ತಡವೂ ಕೇಳಿಬಂದಿದೆ.

ಸದ್ಯ ಚಾಮರಾಜಪೇಟೆ ಯಲ್ಲಿ ಬಿಗಿ ಬಂದೋಬಸ್ತ್ ಮುಂದುವರೆಸಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಗಣೇಶೋತ್ಸವಕ್ಕೆ ಪಟ್ಟು ಹಿಡಿದಿರುವ ಹಿಂದೂಪರ ಸಂಘಟನೆಗಳು ಹಾಗೂ ಚಾಮರಾಜಪೇಟೆ ನಾಗರೀಕರ ಹಿತ ರಕ್ಷಣಾ ಸಮಿತಿ‌ ಯನ್ನು ಮನವೊಲಿಸುವ ಪ್ರಯತ್ನವೂ ನಡೆದಿದೆ. ಆದರೆ ಹಿಂದೂ ಸಂಘಟನೆಗಳು ಮಾತ್ರ ಗಣೇಶೋತ್ಸವ ಆಚರಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದು ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ : Airtel Plans : ಉಚಿತ ‘ಅಮೆಜಾನ್‌ ಪ್ರೈಮ್‌ ವೀಡಿಯೊ’ ಸಬ್‌ಸ್ಕ್ರಿಪ್ಷನ್‌ ನೀಡುತ್ತಿವೆ ಏರ್‌ಟೆಲ್‌ನ ಈ ಪ್ಲಾನ್‌ಗಳು

ಇದನ್ನೂ ಓದಿ : ವಯಸ್ಸಿನ ಕಾರಣಕ್ಕೆ ನಿವೃತ್ತಿ: ಸರಕಾರದ ವಿರುದ್ದ ಸಿಡಿದೆದ್ದ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ

Independence festival now demand for Ganesha festival in Idga Maidan again causes controversy

Comments are closed.