ಸೋಮವಾರ, ಏಪ್ರಿಲ್ 28, 2025
HomeSportsCricketIndia vs Australia 2nd T20: ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯ; ತಂಡದಲ್ಲಿ ಇದೊಂದು...

India vs Australia 2nd T20: ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯ; ತಂಡದಲ್ಲಿ ಇದೊಂದು ಬದಲಾವಣೆ ಮಾಡದಿದ್ದರೆ ಗೆಲುವು ಕಷ್ಟ.. ಕಷ್ಟ

- Advertisement -

ನಾಗ್ಪುರ: India vs Australia 2nd T20 : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಇಂದು (ಸೆಪ್ಟೆಂಬರ್ 23) ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಕಾರಣ ಸರಣಿ ಗೆಲುವಿನ ಕನಸನ್ನು ಜೀವಂತವಾಗಿ ಇಟ್ಟುಕೊಳ್ಳಬೇಕಾದರೆ ಭಾರತ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ಭಾರತಕ್ಕೆ ಮಾಡು ಇಲ್ಲ ಮಡಿ ಎಂಬಂತಾಗಿರುವ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಆಡುವ ಸಾಧ್ಯತೆಯಿದೆ. ಮೊದಲ ಪಂದ್ಯದಿಂದ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಡೆತ್ ಓವರ್’ಗಳಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ದುಬಾರಿಯಾಗುತ್ತಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದರೆ ಭಾರತದ ಡೆತ್ ಓವರ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಏಷ್ಯಾ ಕಪ್ ಟೂರ್ನಿಯಿಂದ ಹಿಡಿದು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದವರೆಗೆ ಡೆತ್ ಓವರ್’ಗಳಲ್ಲಿ ಭುವನೇಶ್ವರ್ ಕುಮಾರ್ ತೀವ್ರ ವೈಫಲ್ಯ ಎದುರಿಸಿದ್ದಾರೆ. ಭುವಿ ವೈಫಲ್ಯದಿಂದಲೇ ಏಷ್ಯಾ ಕಪ್’ನಲ್ಲಿ ಭಾರತ ಫೈನಲ್ ತಲುಪುವಲ್ಲಿ ವಿಫಲವಾಗಿತ್ತು.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ (India Vs Australia T20 Series) 209 ರನ್’ಗಳ ಕಠಿಣ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾಗೆ ಕೊನೆ 4 ಓವರ್’ಗಳಲ್ಲಿ 55 ರನ್’ಗಳ ಅವಶ್ಯಕತೆಯಿತ್ತು. 17ನೇ ಓವರ್ ಬೌಲಿಂಗ್ ಮಾಡಿದ್ದ ಭುವನೇಶ್ವರ್ ಕುಮಾರ್ 15 ರನ್ ಬಿಟ್ಟುಕೊಟ್ಟಿದ್ದರು. 19ನೇ ಓವರ್’ನಲ್ಲಿ ಮತ್ತೆ 16 ರನ್ ನೀಡಿದ ಭುವನೇಶ್ವರ್ ತಮ್ಮ ಅನುಭವಕ್ಕೆ ತಕ್ಕಂತೆ ಬೌಲಿಂಗ್ ಮಾಡುವಲ್ಲಿ ವಿಫಲರಾಗಿದ್ದರು. ಡೆತ್ ಓವರ್’ನಲ್ಲಿ ಭುವನೇಶ್ವರ್ 2 ಓವರ್’ಗಳಲ್ಲಿ 31 ರನ್ ಬಿಟ್ಟುಕೊಟ್ಟದ್ದು ಭಾರತದ ಸೋಲಿಗೆ ಕಾರಣವಾಗಿದ್ದು. 19ನೇ ಓವರ್’ನ ಕೊನೆಯ ಮೂರು ಎಸೆತಗಳಲ್ಲಿ ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಭುವನೇಶ್ವರ್ ಕುಮಾರ್ ಬೌಲಿಂಗ್’ನಲ್ಲಿ ಸತತ ಮೂರು ಬೌಂಡರಿಗಳನ್ನು ಬಾರಿಸಿದ್ದರು.

ಕಳೆದ ಏಷ್ಯಾ ಕಪ್ ಟೂರ್ನಿಯ ಸೂಪರ್-4 ಹಂತದಲ್ಲೂ ಭುವನೇಶ್ವರ್ ಕುಮಾರ್ ಡೆತ್ ಓವರ್’ಗಳಲ್ಲಿ ಸಂಪೂರ್ಣ ವಿಫಲರಾಗಿದ್ದರು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ 19ನೇ ಓವರ್’ನಲ್ಲಿ 19 ರನ್ ನೀಡಿದ್ದ ಭುವನೇಶ್ವರ್, ಶ್ರೀಲಂಕಾ ವಿರುದ್ಧದ ಪಂದ್ಯದ 19ನೇ ಓವರ್’ನಲ್ಲಿ 14 ರನ್ ಬಿಟ್ಟುಕೊಟ್ಟಿದ್ದರು. ಭುವಿ ವೈಫಲ್ಯದಿಂದಾಗಿ ಭಾರತ ಆ ಎರಡೂ ಪಂದ್ಯಗಳಲ್ಲಿ ಸೋಲು ಫೈನಲ್ ತಲುಪುವಲ್ಲಿ ವಿಫಲವಾಗಿತ್ತು. ಪಾಕಿಸ್ತಾನ, ಶ್ರೀಲಂಕಾ ವಿರುದ್ಧ 19ನೇ ಓವರ್, ಆಸ್ಟ್ರೇಲಿಯಾ ವಿರುದ್ಧ 17 ಹಾಗೂ 19ನೇ ಓವರ್ ಸೇರಿ ಕಳೆದ ಮೂರು ಟಿ20 ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಡೆತ್ ಓವರ್’ಗಳಲ್ಲಿ ಒಟ್ಟು ನಾಲ್ಕು ಓವರ್ ಎಸೆದಿದ್ದು 63 ರನ್ ಬಿಟ್ಟುಕೊಟ್ಟಿದ್ದಾರೆ.

ಭುವನೇಶ್ವರ್ ಕುಮಾರ್ ಸತತವಾಗಿ ಡೆತ್ ಓವರ್’ಗಳಲ್ಲಿ ಎಡವುತ್ತಿರುವುದು ಭಾರತದ ಯೋಜನೆಗಳನ್ನು ತಲೆ ಕೆಳಗೆ ಮಾಡುತ್ತಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಅವರ ಅನಿವಾರ್ಯತೆ ತಂಡಕ್ಕಿದೆ. ಹೀಗಾಗಿ ನಾಗ್ಪುರದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬುಮ್ರಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಬುಮ್ರಾ ಆಡಿದರೆ ಭುವನೇಶ್ವರ್ ಕುಮಾರ್ ಅಥವಾ ವೇಗಿ ಉಮೇಶ್ ಯಾದವ್ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್ (ಉಪನಾಯಕ), 3.ವಿರಾಟ್ ಕೊಹ್ಲಿ, 4.ಸೂರ್ಯಕುಮಾರ್ ಯಾದವ್, 5.ಹಾರ್ದಿಕ್ ಪಾಂಡ್ಯ, 6.ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 7.ಅಕ್ಷರ್ ಪಟೇಲ್, 8.ಹರ್ಷಲ್ ಪಟೇಲ್, 9.ಜಸ್ಪ್ರೀತ್ ಬುಮ್ರಾ, 10.ಯುಜ್ವೇಂದ್ರ ಚಹಲ್, 111.ಭುವನೇಶ್ವರ್ ಕುಮಾರ್.

ಪಂದ್ಯ ಆರಂಭ: ಸಂಜೆ 7ಕ್ಕೆ
ಸ್ಥಳ: ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನ, ಜಮ್ತಾ (ನಾಗ್ಪುರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Special Gift for Virat Kohli: ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆ ನೀಡಿದ ಪಂಜಾಬ್ ಮಹಿಳೆ ; ಗಿಫ್ಟ್ ನೋಡಿ ಕಿಂಗ್ ಫುಲ್ ಫಿದಾ

ಇದನ್ನೂ ಓದಿ : KL Rahul Athiya Shetty: ಪ್ರಿಯಕರನ ಫಿಫ್ಟಿಗೆ ಪ್ರೇಯಸಿಯ ಹೃದಯ ಮುದ್ರೆ; ರಾಹುಲ್ ಅರ್ಧಶತಕವನ್ನುಆಥಿಯಾ ಶೆಟ್ಟಿ ಸಂಭ್ರಮಿಸಿದ್ದು ಹೀಗೆ

India vs Australia 2nd T20 A do-or-die match for India this change is not made in the team

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular