ಸೋಮವಾರ, ಏಪ್ರಿಲ್ 28, 2025
HomeSportsCricketಭಾರತ- ಆಸ್ಟ್ರೇಲಿಯಾ 3 ನೇ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ XI : ವಿರಾಟ್‌ ಕೊಹ್ಲಿ- ರೋಹಿತ್‌...

ಭಾರತ- ಆಸ್ಟ್ರೇಲಿಯಾ 3 ನೇ ಏಕದಿನ ಪಂದ್ಯಕ್ಕೆ ಪ್ಲೇಯಿಂಗ್ XI : ವಿರಾಟ್‌ ಕೊಹ್ಲಿ- ರೋಹಿತ್‌ ಶರ್ಮಾ ಇನ್‌, ಶುಭಮನ್‌ ಗಿಲ್‌ ಔಟ್‌

- Advertisement -

ರಾಜ್‌ಕೋಟ್‌ : ಆಸ್ಟ್ರೇಲಿಯ  (india vs australia) ವಿರುದ್ದದ ಮೂರನೇ ಏಕದಿನ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ (Indian Cricket Team) ಸಜ್ಜಾಗಿದೆ. ಈಗಾಗಲೇ ಭಾರತ – ಆಸ್ಟ್ರೇಲಿಯಾ 3 ಪಂದ್ಯಗಳ (Ind vs aus 3rd Odi) ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದ್ದು, ಅಂತಿಮ ಪಂದ್ಯಕ್ಕೆ ನಾಯಕ ರೋಹಿತ್‌ ಶರ್ಮಾ (Rohit Sharma) ಹಾಗೂ ವಿರಾಟ್‌ ಕೊಹ್ಲಿ (Virat Kohli) ತಂಡಕ್ಕೆ ಸೇರ್ಪಡೆಯಾಗಿದ್ದು, ಶುಭಮನ್‌ ಗಿಲ್‌ (Shubman Gill) ತಂಡದಿಂದ ಹೊರಬಿದ್ದಿದ್ದಾರೆ.

ಕನ್ನಡಿಗ ಕೆಎಲ್‌ ರಾಹುಲ್‌ ನೇತೃತ್ವದಲ್ಲಿ ಮೊದಲ ಎರಡು ಪಂದ್ಯಗಳನ್ನು ಜಯಿಸಿರುವ ಭಾರತ ತಂಡ ಇದೀಗ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ರೋಹಿತ್‌ ಶರ್ಮಾ ನೇತೃತ್ವದಲ್ಲಿ ಭಾರತ ಕಣಕ್ಕೆ ಇಳಿಯಲಿದೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಭಾರತ ತಂಡವನ್ನು ಹಾರ್ದಿಕ್‌ ಪಾಂಡ್ಯ ಹಾಗೂ ಮೊಹಮ್ಮದ್‌ ಸೆಮಿ ಸೇರ್ಪಡೆಗೊಂಡಿದ್ದಾರೆ.

ವಿಶ್ವಕಪ್‌ ಸರಣಿಗೂ ಮೊದಲು ನಡೆಯುತ್ತಿರುವ ಈ ಪಂದ್ಯ ಭಾರತ ತಂಡಕ್ಕೆ ಮಹತ್ವದ್ದಾಗಿದೆ. ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು, ಆಟಗಾರರ ಪಾಲಿಗೆ ಸ್ವರ್ಗ ಎನಿಸಿಕೊಂಡಿದೆ.

india vs australia 3rd Odi Rajkot Rohit Sharma Virat Kohli in Shubman Gill Axar Patel Out
Image Credit to Original Source

ಭಾರತ ತಂಡ ಅಂತಿಮ ಪಂದ್ಯಕ್ಕೆ ಇನ್ನಷ್ಟು ಬಲಿಷ್ಟವಾಗಿದೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದ ಶುಭಮನ್‌ ಗಿಲ್‌ ಮೂರನೇ ಪಂದ್ಯದಲ್ಲಿ ಆಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಯಕ ರೋಹಿತ್‌ ಶರ್ಮಾ ಬದಲು ಇಶಾನ್‌ ಕಿಶನ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ICC Cricket Ranking : ಟೆಸ್ಟ್‌, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ವಿಶ್ವಕ್ಕೆ ಭಾರತವೇ ನಂ.1

ಒಂದನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಕಣಕ್ಕೆ ಇಳಿಯುವುದರಿಂದ ಶ್ರೇಯಸ್‌ ಅಯ್ಯರ್‌, ರಾಹುಲ್‌ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಆಗಲಿದೆ. ಶ್ರೇಯಸ್‌ ಅಯ್ಯರ್‌ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ರೆ, ನಾಯಕ ಕೆ.ಎಲ್.ರಾಹುಲ್‌ ಸತತ ಅರ್ಧಶತಕ ಹಾಗೂ ಸೂರ್ಯ ಕುಮಾರ್‌ ಯಾದವ್‌ ಸ್ಪೋಟಕ ಬ್ಯಾಟಿಂಗ್‌ ಭಾರತ ತಂಡಕ್ಕೆ ಆನೆ ಬಲ ತಂದುಕೊಟ್ಟಿದೆ.

ಆಲ್‌ರೌಂಡರ್‌ ಸ್ಥಾನದಲ್ಲಿ ಹಾರ್ದಿಕ್‌ ಪಾಂಡ್ಯ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇನ್ನು ರವೀಂದ್ರ ಜಡೇಜಾ, ಆರ್.‌ ಅಶ್ವಿನ್‌ ಅವರ ಪೈಕಿ ಒಬ್ಬರ ಬದಲು ವಾಷಿಂಗ್ಟನ್‌ ಸುಂದರ್‌ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಇನ್ನು ಕುಲದೀಪ್‌ ಯಾದವ್‌ ಅಥವಾ ಮುಖೇಶ್‌ ಕುಮಾರ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳ ಬಹುದು.

india vs australia 3rd Odi Rajkot Rohit Sharma Virat Kohli in Shubman Gill Axar Patel Out
Image Credit : Cricket Australia

ಉಳಿದಂತೆ ಮೊಹಮ್ಮದ್‌ ಸಿರಾಜ್‌, ಬೂಮ್ರಾ ನಾಳಿನ ಪಂದ್ಯದಲ್ಲಿ ಆಡುವುದು ಖಚಿತ. ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಗಾಯಗೊಂಡಿದ್ದು, ಅಂತಿಮ ಪಂದ್ಯದಿಂದ ಹೊರಬಿದ್ದಿದ್ದಾರೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿರುವ ಕಾರಣಕ್ಕೆ ಭಾರತ ತಂಡ ರನ್‌ ಹೊಳೆಯನ್ನೇ ಹರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಶುಭಮನ್‌ ಗಿಲ್‌ ಆಕರ್ಷಕ ಅರ್ಧ ಶತಕ : ಕೊನೆಗೂ ಈಡೇರಿತು ಗಿಲ್‌ ಕನಸು

ರೋಹಿತ್‌ ಶರ್ಮಾ, ಕೊಹ್ಲಿ, ರಾಹುಲ್‌, ಅಯ್ಯರ್‌ ಹಾಗೂ ಸೂರ್ಯುಕುಮಾರ್‌ ಯಾದವ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ನಾಳೆಯ ರಾಜ್‌ಕೋಟ್‌ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಮತ್ತೆ ವಿಕೆಟ್‌ ಕೀಪರ್‌ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಮೊಹಾಲಿಯಲ್ಲಿ ರಾಹುಲ್‌ ಕೀಪಿಂಗ್‌ ಅಷ್ಟೊಂದು ಪರಿಣಾಮಕಾರಿ ಆಗಿ ಇರಲಿಲ್ಲ.

ಹೀಗಾಗಿ ಇಂದೋರ್‌ನಲ್ಲಿ ಇಶನ್‌ ಕಿಶನ್‌ ವಿಕೆಟ್‌ ಕೀಪಿಂಗ್‌ ಸ್ಥಾನವನ್ನು ನಿಭಾಯಿಸಿದ್ದರು. ಇನ್ನು ಮೊದಲ ಎರಡು ಪಂದ್ಯಗಳಿಂದ ಕುಲದೀಪ್‌ ಯಾದವ್‌ಗೆ ವಿಶ್ರಾಂತಿ ನೀಡಲಾಗಿತ್ತು. ಆದ್ರೆ ಮತ್ತೆ ಮೂರನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಮುಖೇಶ್‌ ಕುಮಾರ್‌ ಏಷ್ಯನ್‌ ಕಪ್‌ನಲ್ಲಿ ಭಾಗಿಯಾಗುವ ಸಾಧ್ಯತೆಯಿದ್ದು, ನಾಳೆ ಆಡುತ್ತಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ

india vs australia 3rd Odi Rajkot Rohit Sharma Virat Kohli in Shubman Gill Axar Patel Out
Image Credit To Original Source

ಆರ್‌.ಅಶ್ವಿನ್‌ ಹಲವು ಸಮಯದ ನಂತರ ಏಕದಿನ ತಂಡಕ್ಕೆ ವಾಪಾಸಾಗಿದ್ದಾರೆ. ಕಂಬ್ಯಾಕ್‌ ಪಂದ್ಯದಲ್ಲಿಯೇ ಅಶ್ವಿನ್‌ ಭರ್ಜರಿ ಪ್ರದರ್ಶನವನ್ನು ನೀಡಿದ್ದಾರೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಅಶ್ವಿನ್‌ ಆಡುವುದು ಖಚಿತ. ಜೊತೆಗೆ ಅಶ್ಚಿನ್‌ ವಿಶ್ವಕಪ್‌ನಲ್ಲಿಯೂ ಆಡ್ತಾರಾ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಭಾರತ ಪ್ಲೇಯಿಂಗ್ XI (IND vs AUS) 3 ನೇ ODI

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್)‌, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ/ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್/ ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

india vs australia 3rd Odi Rajkot Rohit Sharma Virat Kohli in Shubman Gill Axar Patel Out
Image Credit to Original Source

ಆಸ್ಟ್ರೇಲಿಯಾ ವಿರುದ್ದ 3ನೇ ಏಕದಿನ ಪಂದ್ಯ : ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್

india vs australia 3rd Odi Rajkot Rohit Sharma Virat Kohli in Shubman Gill Axar Patel Out

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular