KL Rahul : ರಿಷತ್‌ ಪಂತ್‌ ಜಾಗದಲ್ಲಿ ಕನ್ನಡಿಗ ರಾಹುಲ್‌ ಆಯ್ಕೆ

ಲಂಡನ್‌ : ಇಂಗ್ಲೆಂಡ್‌ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಕೌಂಟಿ ಸೆಲೆಕ್ಟ್‌ ತಂಡಗಳ ನಡುವಿನ ಪಂದ್ಯದಲ್ಲಿ ಪಂತ್‌ ಜಾಗದಲ್ಲಿ ಕೆ.ಎಲ್.ರಾಹುಲ್‌ ಆಡೋದು ಖಚಿತವಾಗಿದೆ.

ಈಗಾಗಲೇ ಭಾರತ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌, ವೃದ್ದಿಮಾನ್‌ ಸಾಹ, ತರಬೇತುದಾರ ದಯಾನಂದ ಗರಣಿ ಐಸೋಲೇಶನ್‌ನಲ್ಲಿದ್ದಾರೆ. ಭಾರತ ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಕಾಲಾವಕಾಶವಿದ್ದರೂ, ಅಷ್ಟರಲ್ಲಿ ಆಟಗಾರರು ಕೊರೊನಾದಿಂದ ಚೇತರಿಕೆ ಕಾಣಲೇಬೇಕು. ಅಲ್ಲದೇ ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಸರಣಿಯ ಮೇಲೂ ಹೊಡೆತ ಬೀಳುವ ಸಾಧ್ಯತೆಯೂ ಇದೆ.

ಇದೇ ಕಾರಣಕ್ಕೆ ಟೀಂ ಇಂಡಿಯಾ ಕೌಂಟಿ ಸೆಲೆಕ್ಟ್‌ ಪಂದ್ಯದ ವೇಳೆಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವುದು ಖಚಿತವಾಗಿದೆ. ಐಪಿಎಲ್‌ ಪಂದ್ಯಾವಳಿಗಳಲ್ಲಿ ರಾಹುಲ್‌ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಟೆಸ್ಟ್‌ ಪಂದ್ಯಗಳಲ್ಲಿಯೂ ಮಿಂಚಿದ್ದಾರೆ. ಆದರೆ ನಡುವಲ್ಲೀ ಎದುರಾದ ಫಾರ್ಮ್‌ ಸಮಸ್ಯೆಯಿಂದಾಗಿ ರಾಹುಲ್‌ 2019ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧದ ಟೆಸ್ಟ್‌ ಪಂದ್ಯದ ಬಳಿಕ ಟೀಮ್‌ ಇಂಡಿಯಾ ಪರ ಆಡಿಲ್ಲ.

ಅಲ್ಲದೇ ಐಪಿಎಲ್‌ ಹಾಗೂ ದೇಶೀಯ ಪಂದ್ಯಾವಳಿಗಳಲ್ಲಿಯೂ ರಾಹುಲ್‌ ಭರ್ಜರಿ ಪ್ರದರ್ಶನ ನೀಡಿದ್ದರೂ ಕೂಡ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಒಂದೆಡೆ ಶುಭಮನ್‌ ಗಿಲ್‌ ಗಾಯಗೊಂಡು ಇಂಗ್ಲೆಂಡ್‌ ಸರಣಿಯಿಂದಲೇ ಹೊರ ನಡೆದಿದ್ರೆ, ಇನ್ನೊಂದೆಡೆ ಇಬ್ಬರು ವಿಕೆಟ್‌ ಕೀಪರ್‌ ಕೊರೊನಾದಿಂದ ಬಳಲುತ್ತಿದ್ದಾರೆ. ಹೀಗಾಗಿ ರಾಹುಲ್‌ ಟೀಂ ಇಂಡಿಯಾಕ್ಕೆ ಅನಿವಾರ್ಯವಾಗಿದೆ.

ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ರೋಹಿತ್‌ ಶರ್ಮಾ ಜೊತೆಗೆ ಮಾಯಂಕ್‌ ಅಗರ್‌ವಾಲ್‌ ಕಣಕ್ಕೆ ಆರಂಭಿಕರಾಗಿ ಇನ್ನಿಂಗ್ಸ್‌ ಆರಂಭಿಸಿದ್ರೆ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸೋದು ಖಚಿತ. ಅಭ್ಯಾಸ ಪಂದ್ಯದಲ್ಲಿ ರಾಹುಲ್‌ ಸ್ಥಿರ ಪ್ರದರ್ಶನವನ್ನು ತೋರಿಸಿದ್ರೆ ರಾಹುಲ್‌ ಮತ್ತೆ ಟೀಂ ಇಂಡಿಯಾ ಪರ ಟೆಸ್ಟ್‌ ತಂಡವನ್ನು ಪ್ರತಿನಿಧಿಸಲು ಅವಕಾಶ ದೊರೆಯುವುದು ಖಚಿತ.

Comments are closed.