Healthy Monsoon Diet : ಮಳೆಗಾಲದಲ್ಲಿ ಏನು ತಿಂದರೆ ಒಳ್ಳೆಯದು? ಬೆಸ್ಟ್‌ ಟಿಪ್ಸ್ ಹೇಳಿದ್ದಾರೆ ಫೇಮಸ್‌ ನ್ಯುಟ್ರಿಷನಿಸ್ಟ್‌!

ನಮ್ಮ ಹಿರಿಯರು ಆಯಾ ಕಾಲಗಳಲ್ಲಿ ದೊರೆಯುವ ಹಣ್ಣು ಮತ್ತು ತರಕಾರಿಗಳನ್ನೇ(Fruits and Vegetables) ಸೇವಿಸಬೇಕು ಎಂದು ನಮಗೆ ಯಾವಾಗಲೂ ಸಲಹೆ ನೀಡುತ್ತಿರುತ್ತಾರೆ. ಏಕೆಂದರೆ ಅವುಗಳು ಆ ಕಾಲದಲ್ಲಿ ದೇಹಕ್ಕೆ ಬೇಕಾಗುವ ಪೋಷಕಾಂಶಗಳಿಂದ ಕೂಡಿರುತ್ತವೆ ಎಂದು ನ್ಯುಟ್ರಿಷನಿಸ್ಟ್‌ ರುಜುತಾ ದಿವೇಕರ್‌(Rujuta Diwekar) ಅವರೂ ಸಹ ಇದನ್ನೇ ವಿವರಿಸಿದ್ದಾರೆ. ಮಳೆಗಾಲದ ಡಯಟ್‌(Healthy Monsoon Diet)ನಲ್ಲಿ ಏನನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂದು ಹೇಳಿದ್ದಾರೆ. ‘ಭಾರತದಲ್ಲಿ ಮಳೆಗಾಲ ಪ್ರಾರಂಭವಾಯಿತೆಂದರೆ ನಾವು ವಿಶೇಷವಾದ 4 ತಿಂಗಳುಗಳೂ ಪ್ರಾರಂಭವಾಗುತ್ತವೆ. ಅವುಗಳನ್ನು ಚಾತುರ್ಮಾಸ ಎನ್ನುತ್ತಾರೆ. ಈ ವಿಶೇಷವಾದ ನಾಲ್ಕು ತಿಂಗಳುಗಳು ಬದಲಾಗುತ್ತಿರುವ ಹವಾಮಾನದೊಂದಿಗೆ ಬರುತ್ತವೆ.

ಈ ಕಾಲವು ಭಾರಿ ಮಳೆಯಿಂದ ಮಳೆಯೇ ಇಲ್ಲದ ಬಿಸಿಲಿನ ದಿನಗಳವರೆಗೆ ಬದಲಾಗುತ್ತಿರುತ್ತದೆ. ಇದು ಭೂಮಿಯ ಮೇಲಿನ ಸಸ್ಯವರ್ಗವನ್ನೇ ಬದಲಾಯಿಸುತ್ತದೆ. ಕಾಡು ಮತ್ತು ಕೃಷಿ ಮಾಡದ ಹಣ್ಣುಗಳು ಮತ್ತು ಸಸ್ಯಗಳು ಸಮೃದ್ಧವಾಗಿ ಬೆಳೆಯಲು ಸಹಾಯ ಮಾಡಿಕೊಡುತ್ತದೆ.’ ಎಂದು ರುಜುತಾ ತಮ್ಮ ವೀಡಿಯೊದಲ್ಲಿ ಹೇಳಿದ್ದಾರೆ.

ಹಾಗಾದರೆ, ಅವರು ಹೇಳುವಂತೆ ನಮ್ಮ ಮಾನ್‌ಸೂನ್‌ ಡಯಟ್‌ ಹೇಗಿರಬೇಕು. ಯಾವ ಆಹಾರ ಸೇವಿಸಬೇಕು ಮತ್ತು ಯಾವುದರಿಂದ ದೂರವಿರಬೇಕು ಇಲ್ಲಿದೆ ಓದಿ :

ವೀಡಿಯೊದಲ್ಲಿ, ರುಜುತಾ ಅವರು ರೋಗನಿರೋಧಕ ಶಕ್ತಿ ಸುಧಾರಿಸಲು, ಕರುಳಿಗೆ ಉತ್ತಮವಾಗಿರುವ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿಕೊಳ್ಳಲು, ಫಿಟ್‌ ಆಂಡ್‌ ಹೆಲ್ದಿಯಾಗಿರಲು ಮತ್ತು ಉತ್ತಮ ತ್ವಚೆ ಮತ್ತು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ವಿವಿಧ ಆಹಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ಮಾನ್ಸೂನ್‌ ಆಹಾರ ಮಾರ್ಗದರ್ಶಿಯನ್ನು ಸೇರಿಸುವುದು, ದೂರವಿರುವುದು, ಕಡಿಮೆ ಮಾಡುವುದು ಮತ್ತು ಮಾನ್ಸೂನ್‌ ವಿಶೇಷಗಳು ಎಂಬ ಭಾಗಗಳನ್ನು ಮಾಡಿ ವಿವಿರಿಸಿದ್ದಾರೆ.

ದೂರವಿರುವುದು :
ಮಳೆಗಾಲದಲ್ಲಿ ದೂರವಿರಬೇಕಾದ ಮೊಟ್ಟ ಮೊದಲ ವಿಷಯವೆಂದರೆ ಹೊರಗಿನ ಆಹಾರ ತಿನ್ನುವುದದನ್ನು ಬಿಡುವುದು. ‘ಮನೆಯ ಹಿರಿಯರು ಯಾವಾಗಲೂ ಸಲಹೆ ನೀಡುವ ಒಂದೇ ಒಂದು ವಿಷಯವೆಂದರೆ ಹೊರಗೆ ತಯಾರಿಸಿದ ಆಹಾರವನ್ನು ತಿನ್ನುವುದನ್ನು ಬಿಡುವದು ಎಂದು ನಾನು ಭಾವಿಸುತ್ತೇನೆ’ ಎಂದು ರುಜುತಾ ವಿವಿರಿಸದ್ದಾರೆ. ಮಳೆಯು ಅನಾರೋಗ್ಯಕ್ಕೆ ಕಾರಣವಾಗುವ ಹಲವಾರು ರೋಗಕಾರಕಗಳನ್ನು ತನ್ನೊಂದಿಗೆ ತರುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹೊರಗಿನ ಆಹಾರ ಸೇವಿಸುವುದನ್ನು ತಪ್ಪಿಸಿ.

ಕಡಿಮೆ ಮಾಡಿ :
ಮಾನ್ಸೂನಿನ ಎರಡನೇ ನಿಯಮವೆಂದರೆ ಮಾಂಸ, ಮೊಟ್ಟೆ ಮತ್ತು ಮೀನಿನ ಸೇವನೆ ಕಡಿಮೆ ಮಾಡುವುದು. ಮೀನು ಸೇವನೆ ಕಡಿಮೆ ಏಕೆ ಮಾಡಬೇಕೆಂದರೆ ಮಳೆಗಾಲವು ಮೀನುಗಳ ಸಂತಾನೋತ್ಪತ್ತಿಯ ಕಾಲ. ಆದ್ದರಿಂದ ಸಮುದ್ರಾಹಾರವನ್ನು ಈ ಋತುವಿನಲ್ಲಿ ಯಾವಾಗಲೂ ಸೇವಿಸಬಾರದು ಎಂದು ಸಲಹೆ ನೀಡಲಾಗುತ್ತದೆ.

ಸೇರಿಸಿ :
ಮಾಂಸ, ಮೀನುಗಳ ಸೇವನೆ ಕಡಿಮೆ ಮಾಡುವುದು ಮೂಲಭೂತವಾಗಿ ನೀವು ಆಹಾರದಲ್ಲಿ ಇತರ ಅಂಶಗಳನ್ನು ಸೇರಿಸಲು ಅವಕಾಶ ಮಾಡಿಕೊಡುತ್ತದೆ. ಈ ತಿಂಗಳುಗಳಲ್ಲಿ ಹಲವಾರು ಉಪವಾಸಗಳಿವೆ. ಅದಕ್ಕಾಗಿ ರಾಜಗಿರಾ, ಕುಟ್ಟು ಮತ್ತು ಬಾಳೆಕಾಯಿ ಹಿಟ್ಟು(ಬಕಾಹು) ಸೇವನೆ ಹೆಚ್ಚಾಗುವುದು. ಯಮ್‌, ಗೆಣಸು ಮತ್ತು ಅರಬಿ ಮುಂತಾದ ತರಕಾರಿಗಳ ಸೇವನೆಯೂ ಹೆಚ್ಚಿದೆ. ‘ಇವುಗಳನ್ನು ನೀವು ಖಂಡಿತ ನಿಮ್ಮ ಡಯಟ್‌ ನಲ್ಲಿ ಸೇರಿಸಿಕೊಳ್ಳುವ ಗುರಿ ಹೊಮದಬೇಕು’ ಎಂದು ರುಜುತಾ ಅವರು ಹೇಳಿದ್ದಾರೆ.

ಇವುಗಳ ಜೊತೆ ಮಳೆಗಾದಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಡು ಮತ್ತು ಕೃಷಿ ಮಾಡದ ತರಕಾರಿಗಳು ಪೌಷ್ಠಿಕಾಂಶದ ದೊಡ್ಡ ಮೂಲವಾಗಿದೆ. ‘ನಿಮ್ಮ ಪ್ರದೇಶದಲ್ಲಿ ಬೆಳೆಯುವ ಮತ್ತು ಈ ಋತುವಿನಲ್ಲಿ ಮಾರುಕಟ್ಟೆಯಲ್ಲಿ ದೊರಯುವ ಯಾವುದೇ ಕಾಡು ಮತ್ತು ಕೃಷಿ ಮಾಡದ ಹಸಿರು ತರಕಾರಿಗಳನ್ನು ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು’ ಎಂದು ರುಜುತಾ ಅವರು ಹೇಳಿದ್ದಾರೆ.

ಇದನ್ನೂ ಓದಿ : Flax Seed : ಅಗಾಧ ಪೋಷಕಾಂಶ ಹೊಂದಿರುವ ಅಗಸೆ ಬೀಜದಿಂದ ಏನೆಲ್ಲಾ ತಯಾರಿಸಬಹುದು ಗೊತ್ತಾ?

ಇದನ್ನೂ ಓದಿ : Dal Paratha : ಮಕ್ಕಳ ಟಿಫಿನ್‌ ಬಾಕ್ಸ್‌ ಗೆ ಮಾಡಿಕೊಡಿ ರುಚಿಯಾದ ದಾಲ್‌ ಪರಾಠ!

(Healthy Monsoon Diet what to avoid reduce and include in the monsoon)

Comments are closed.