India vs Ireland T20 series : ಆಗಸ್ಟ್‌ನಲ್ಲಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ ಟೀಮ್ ಇಂಡಿಯಾ, ಇಲ್ಲಿದೆ ಇಂಡಿಯಾ Vs ಐರ್ಲೆಂಡ್ ಸರಣಿಯ ವೇಳಾಪಟ್ಟಿ

ಬೆಂಗಳೂರು : (India vs Ireland T20 series) ಭಾರತ ಕ್ರಿಕೆಟ್ ತಂಡ ಮುಂಬರುವ ಆಗಸ್ಟ್ ತಿಂಗಳಲ್ಲಿ ಐರ್ಲೆಂಡ್‌ನಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಭಾರತ Vs ಐರ್ಲೆಂಡ್ ಸರಣಿಯ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ವೆಸ್ಟ್ ಇಂಡೀಸ್‌ನಿಂದ ಟೀಮ್ ಇಂಡಿಯಾ ನೇರವಾಗಿ ಐರ್ಲೆಂಡ್‌ಗೆ ತೆರಳಿ ಚುಟುಕು ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿ ಆಗಸ್ಟ್ 18ರಂದು ಆರಂಭವಾಗಲಿದೆ.

ಭಾರತ ತಂಡ ಇನ್ನೆರಡು ದಿನಗಳಲ್ಲಿ ವೆಸ್ಟ್ ಇಂಡೀಸ್‌ಗೆ ಪ್ರವಾಸ ಬೆಳೆಸಲಿದ್ದು, ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.

ಕೆರಿಬಿಯನ್ ಟೂರ್ ನಂತರ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಐರ್ಲೆಂಡ್‌ನಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಯ ಮೂಲಕ ಟೀಮ್ ಇಂಡಿಯಾದ ಪ್ರೀಮಿಯಂ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ. ಬೆನ್ನು ನೋವಿನ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವ ಬುಮ್ರಾ, ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಐರ್ಲೆಂಡ್ ಪ್ರವಾಸದ ನಂತರ ಭಾರತ ತಂಡ ಏಷ್ಯಾ ಕಪ್ ಟೂರ್ನಿಯನ್ನಾಡಲು ಶ್ರೀಲಂಕಾಗೆ ಪ್ರವಾಸ ಬೆಳೆಸಲಿದೆ. ಏಷ್ಯಾ ಕಪ್ ಏಕದಿನ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ದ್ವೀಪರಾಷ್ಟ್ರ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿವೆ.

ಇದನ್ನೂ ಓದಿ : India’s master plan : ವಿಶ್ವಕಪ್ ಗೆಲ್ಲಲು ಭಾರತದ ಮಾಸ್ಟರ್’ಪ್ಲಾನ್; ಪಾಕ್, ಆಸೀಸ್, ಇಂಗ್ಲೆಂಡ್ ಸೋಲಿಸಲು ಸೂಪರ್ ಗೇಮ್ ಪ್ಲಾನ್ ರೆಡಿ!

ಇದನ್ನೂ ಓದಿ : Teja Nidamunuru : ವಿಶ್ವಕಪ್‌ನಲ್ಲಿ ವಿಂಡೀಸ್‌ಗೆ ಶಾಕ್ ನೀಡಿದ ನೆದರ್ಲೆಂಡ್ಸ್ ಆಟಗಾರ ನಮ್ಮ ಭಾರತೀಯ.. ಯಾರು ಈ ತೇಜ ನಿಡಮನುರು?

ಭಾರತ Vs ಐರ್ಲೆಂಡ್ ಟಿ20 ಸರಣಿಯ ವೇಳಾಪಟ್ಟಿ :

  • ಮೊದಲ ಟಿ20: ಆಗಸ್ಟ್ 18 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)
  • 2ನೇ ಟಿ20: ಆಗಸ್ಟ್ 20 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)
  • 3ನೇ ಟಿ20: ಆಗಸ್ಟ್ 23 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)

India vs Ireland T20 series: Team India to tour Ireland in August, here is the schedule of India vs Ireland series

Comments are closed.