India’s master plan : ವಿಶ್ವಕಪ್ ಗೆಲ್ಲಲು ಭಾರತದ ಮಾಸ್ಟರ್’ಪ್ಲಾನ್; ಪಾಕ್, ಆಸೀಸ್, ಇಂಗ್ಲೆಂಡ್ ಸೋಲಿಸಲು ಸೂಪರ್ ಗೇಮ್ ಪ್ಲಾನ್ ರೆಡಿ!

ಬೆಂಗಳೂರು : (India’s master plan) ಸತತ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಭಾರತಕ್ಕೆ ಈ ಬಾರಿ ವಿಶ್ವಕಪ್ (ICC World Cup 2023) ಗೆಲ್ಲುವ ಸುವರ್ಣಾವಕಾಶ ಒದಗಿ ಬಂದಿದೆ.

ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಲಿದ್ದು, ವರ್ಲ್ಡ್ ಕಪ್ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ. 2011ರಲ್ಲಿ ಭಾರತದಲ್ಲೇ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಬಾರಿ ಟೀಮ್ ಇಂಡಿಯಾವನ್ನು ಮುಂಬೈಕರ್ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

12 ವರ್ಷಗಳ ನಂತರ ಮತ್ತೆ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಇದಕ್ಕಾಗಿ ಭರ್ಜರಿ ಪ್ಲಾನ್ ಮಾಡಿದೆ. ವಿಶ್ವಕಪ್’ನ ಲೀಗ್ ಹಂತದಲ್ಲಿ ಪ್ರತೀ ತಂಡಗಳು ಎಲ್ಲಾ ತಂಡಗಳ ವಿರುದ್ಧ ಆಡಲಿದ್ದು, ತಲಾ 9 ಲೀಗ್ ಪಂದ್ಯಗಳನ್ನಾಡಲಿವೆ. ಇಲ್ಲಿ ಭಾರತದ ಗೇಮ್ ಪ್ಲಾನ್ ತುಂಬಾನೇ ಇಂಟ್ರೆಸ್ಟಿಂಗ್. ಲೀಗ್ ಹಂತದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳುಪ ಪ್ರಬಲ ಎದುರಾಳಿಗಳಾಗಿರುವ ಕಾರಣ ಈ ಮೂರು ತಂಡಗಳನ್ನು ಮಣಿಸಲು ಭಾರತ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಅದೇನಂದ್ರೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ಸ್ಪಿನ್ ಟ್ರ್ಯಾಕ್’ಗಳಲ್ಲೇ ಭಾರತ ಆಡಲಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಭಾರತ ಆಕ್ಟೋಬರ್ 8ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದ್ರೆ, ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಕ್ಟೋಬರ್ 15ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದೆ. ಅದೇ ರೀತಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಅಕ್ಟೋಬರ್ 29ರಂದು ಲಕ್ನೋದ ಏಕನಾ ಮೈದಾನದಲ್ಲಿ ಆಡಲಿದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಈ ಮೂರೂ ಕ್ರೀಡಾಂಗಣಗಳು ಸ್ಪಿನ್ನರ್’ಗಳ ಪಾಲಿನ ಸ್ವರ್ಗ. ಹೀಗೆ ಬಲಿಷ್ಠ ತಂಡಗಳನ್ನು ಸ್ಪಿನ್ ಟ್ರ್ಯಾಕ್’ಗಳಲ್ಲೇ ಮಟ್ಟಹಾಕಲು ಭಾರತ ಸೂಪರ್ ಪ್ಲಾನ್ ಮಾಡಿದೆ.

ಇದನ್ನೂ ಓದಿ : Teja Nidamunuru : ವಿಶ್ವಕಪ್‌ನಲ್ಲಿ ವಿಂಡೀಸ್‌ಗೆ ಶಾಕ್ ನೀಡಿದ ನೆದರ್ಲೆಂಡ್ಸ್ ಆಟಗಾರ ನಮ್ಮ ಭಾರತೀಯ.. ಯಾರು ಈ ತೇಜ ನಿಡಮನುರು?

ಇದನ್ನೂ ಓದಿ : ICC World Cup 2023 : ದೇಶಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ದಿಗ್ಗಜ ನಾಯಕ ಧೋನಿ ನಾಡಿನಲ್ಲಿ ಈ ಬಾರಿ ವಿಶ್ವಕಪ್ ಪಂದ್ಯಗಳೇ ಇಲ್ಲ!

ಐಸಿಸಿ ವಿಶ್ವಕಪ್ 2023: ಭಾರತ ತಂಡದ ವೇಳಾಪಟ್ಟಿ (ICC World Cup 2023: India’s complete Schedule) :

  • ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ (ಚೆನ್ನೈ)
  • ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ (ದೆಹಲಿ)
  • ಅಕ್ಟೋಬರ್ 15: ಭಾರತ Vs ಪಾಕಿಸ್ತಾನ (ಅಹ್ಮದಾಬಾದ್)
  • ಅಕ್ಟೋಬರ್ 19: ಭಾರತ Vs ಬಾಂಗ್ಲಾದೇಶ (ಪುಣೆ)
  • ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ (ಧರ್ಮಶಾಲಾ)
  • ಅಕ್ಟೋಬರ್ 29: ಭಾರತ Vs ಇಂಗ್ಲೆಂಡ್ (ಲಕ್ನೋ)
  • ನವೆಂಬರ್ 2: ಭಾರತ Vs ಕ್ವಾಲಿಫೈಯರ್-2 (ಮುಂಬೈ)
  • ನವೆಂಬರ್ 5: ಭಾರತ Vs ದಕ್ಷಿಣ ಆಫ್ರಿಕಾ (ಕೋಲ್ಕತಾ)
  • ನವೆಂಬರ್ 11: ಭಾರತ Vs ಕ್ವಾಲಿಫೈಯರ್-1 (ಬೆಂಗಳೂರು)

India’s master plan to win the World Cup; Super game plan ready to defeat Pak, Aussies, England!

Comments are closed.