food stuck throat : ಗಂಟಲಿಗೆ ಆಹಾರ ಸಿಕ್ಕು ವಿಲ ವಿಲನೇ ಒದ್ದಾಡಿದ ಗ್ರಾಹಕ; ವೇಯ್ಟರ್​ ಹಾಗೂ ಪೊಲೀಸ್​​​ ಅಧಿಕಾರಿ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಾಣ

ಆಹಾರವನ್ನು ಸೇವಿಸಬೇಕಾದರೆ ಕೊಂಚ ಹುಷಾರಾಗಿ ಇರಬೇಕು. ಗಂಟಲಿಗೆ ಆಹಾರ ಸಿಕ್ಕು ಜೀವ ಕಳೆದುಕೊಂಡ ಅನೇಕ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಅಂತಹದ್ದೇ ಒಂದು ವಿಚಿತ್ರ ಘಟನೆಯು ಬ್ರೆಜಿಲ್​ನ (BRAZIL) ರೆಸ್ಟಾರೆಂಟ್​ ಒಂದರಲ್ಲಿ ನಡೆದಿದೆ. ರೆಸ್ಟಾರೆಂಟ್​ ಒಂದರಲ್ಲಿ ಆಹಾರ ಸೇವಿಸುತ್ತಿದ್ದ ವ್ಯಕ್ತಿಯ ಗಂಟಲಿನಲ್ಲಿ ಆಹಾರ ಸಿಲುಕಿಕೊಂಡ (food stuck throat) ಪರಿಣಾಮ ಆತ ಒದ್ದಾಡಿದಾನೆ. ಕೂಡಲೇ ಆತನ ಸಹಾಯಕ್ಕೆ ಧಾವಿಸಿದ ಹೋಟೆಲ್​ ಮಾಣಿ ಸೇರಿದಂತೆ ಅನೇಕರು ಗ್ರಾಹಕನ ಜೀವವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವೇಯ್ಟರ್​ ಹಾಗೂ ಹೆದ್ದಾರಿ ಪೊಲೀಸ್​​ ಸಹಾಯದಿಂದ 39 ವರ್ಷದ ವ್ಯಕ್ತಿಯ ಪ್ರಾಣ ಉಳಿದಿದೆ ಎಂದು ಪೋಸ್ಟ್​ಗೆ ಶೀರ್ಷಿಕೆ ನೀಡಲಾಗಿದೆ. ವೈರಲ್​ ವಿಡಿಯೋದಲ್ಲಿ 38 ವರ್ಷದ ವ್ಯಕ್ತಿಯು ಆಹಾರ ಸೇವಿಸಿದ ಬಳಿಕ ಉಸಿರುಗಟ್ಟಿದಂತೆ ಮಾಡಿದ್ರು. ಸುತ್ತಮತ್ತಲಿನ ಗ್ರಾಹಕರು ಆತನನ್ನು ಎಬ್ಬಿಸಲು ಯತ್ನಿಸಿದ್ರು. ವೇಯ್ಟರ್​​ನ್ನು ಸಹಾಯಕ್ಕೆ ಕರೆದಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಹೆದ್ದಾರಿ ಪೊಲೀಸರು ಕೂಡ ಆಗಮಿಸಿದ ವ್ಯಕ್ತಿಯ ಜೀವವನ್ನು ಕಾಪಾಡಿದ್ದಾರೆ.


ಈ ವಿಡಿಯೋ ನೋಡಿದ ನೆಟ್ಟಿಗರು ಹೋಟೆಲ್​ನ ಸಿಬ್ಬಂದಿ ಹಾಗೂ ಹೆದ್ದಾರಿ ಪೊಲೀಸರನ್ನು ರಿಯಲ್​ ಹೀರೋ ಎಂದು ಕರೆದಿದ್ದಾರೆ. ಇನ್ನೊಬ್ಬರು ದೇವರಿಗೆ ನೇರವಾಗಿ ಸಹಾಯ ಮಾಡಲು ಆಗುವುದಿಲ್ಲ ಎಂದು ಇಂಥವರನ್ನು ಸೃಷ್ಟಿಸಿದ್ದಾನೆ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನು ಓದಿ :Uttar Pradesh: ತೆಂಗಿನಕಾಯಿ ಒಡೆಯುತ್ತಲೇ ಬಿರುಕುಬಿಟ್ಟ ಹೊಸ ರಸ್ತೆ..! ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರಕ್ಕೆ ಮುಖಭಂಗ

ಇದನ್ನು ಓದಿ : Dog Viral Video : ವಿಭಿನ್ನ ಹವ್ಯಾಸದಿಂದ ಬಹು ಜನಪ್ರಿಯವಾದ ಲಾಯ್ಡ್ ನಾಯಿ ಮರಿ

WATCH: Food gets stuck in man’s throat; hotel waiter and police officer come to his rescue; Twitterati call them ‘heroes’

Comments are closed.