ಸೋಮವಾರ, ಜೂನ್ 16, 2025
HomeSportsCricketಟಿ20 ವಿಶ್ವಕಪ್ ಫೈನಲ್: ಕೊಹ್ಲಿ ವಿರಾಟ ಆಟ, ದಕ್ಷಿಣ ಆಫ್ರಿಕಾಕ್ಕೆ 177 ರನ್ ಟಾರ್ಗೆಟ್

ಟಿ20 ವಿಶ್ವಕಪ್ ಫೈನಲ್: ಕೊಹ್ಲಿ ವಿರಾಟ ಆಟ, ದಕ್ಷಿಣ ಆಫ್ರಿಕಾಕ್ಕೆ 177 ರನ್ ಟಾರ್ಗೆಟ್

- Advertisement -

India vs South Africa : ಬಾರ್ಬೆಡೋಸ್: ಟಿ20 ವಿಶ್ವಕಪ್ ಫೈನಲ್ ( ICC T20 World Cup Final ) ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ( Indian Cricket Team) ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಪವರ್ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತು. ನಾಯಕ ರೋಹಿತ್ ಶರ್ಮಾ (9 ರನ್), ವಿಕೆಟ್ ಕೀಪರ್ ರಿಷಭ್ ಪಂತ್ (0) ಹಾಗೂ ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ (3) ಫೈನಲ್ ಪಂದ್ಯದಲ್ಲಿ ತಂಡವನ್ನು ನಡುನೀರಲ್ಲಿ ಕೈ ಬಿಟ್ಟು ಔಟಾದರು.

India vs South Africa ICC T20 World cup 2024 Final Virat Kohli and Axar Patel Batting
Image Credit : BCCI

ಸಾಲು ಸಾಲು ವಿಕೆಟ್‌ ಉರುಳುತ್ತಿದ್ದರೂ ಕೂಡ 4ನೇ ವಿಕೆಟ್’ಗೆ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ 54 ಎಸೆತಗಳಲ್ಲಿ 72 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ನಾಲ್ಕು ಸಿಕ್ಸರ್’ಗಳೊಂದಿಗೆ ಅಬ್ಬರಿಸಿದ ಆಲ್ರೌಂಡರ್ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 47 ರನ್ ಸಿಡಿಸಿದರು.

ಇದನ್ನೂ ಓದಿ : Aiden Markram : ದಕ್ಷಿಣ ಆಫ್ರಿಕಾಗೆ ಚೊಚ್ಚಲ ಕಪ್ ಗೆಲ್ಲಿಸ್ತಾನಾ ಲಕ್ಕಿ ಕ್ಯಾಪ್ಟನ್ ಏಡನ್ ಮಾರ್ಕ್ರಮ್ ?

ಮತ್ತೊಂದೆಡೆ ಟೂರ್ನಿಯಲ್ಲಿ ಮೊದಲ ಅರ್ಧಶತಕ ದಾಖಲಿಸಿದ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 76 ರನ್ ಗಳಿಸಿ ಫೈನಲ್ ಪಂದ್ಯದಲ್ಲಿ ತಂಡಕ್ಕೆ ಆಸರೆಯಾದರು. ಕೊಹ್ಲಿ ಜೊತೆ 5ನೇ ವಿಕೆಟ್’ಗೆ 32 ಎಸೆತಗಳಲ್ಲಿ 57 ರನ್’ಗಳ ಜೊತೆಯಾಟವಾಡಿದ ಶಿವ ದುಬೆ 16 ಎಸೆತಗಳಲ್ಲಿ 27 ರನ್ ಗಳಿಸಿದರು. ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ದಕ್ಷಿಣ ಆಫ್ರಿಕಾ ತಂಡ 177 ರನ್ ಗಳಿಸಬೇಕಿದೆ.

India vs South Africa ICC T20 World cup 2024 Final Virat Kohli and Axar Patel Batting
Image Credit : BCCI

ಇದನ್ನೂ ಓದಿ : India Vs South Africa World Cup Final: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಇಂಚಿಂಚೂ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತ ತಂಡ : ವಿರಾಟ್‌ ಕೊಹ್ಲಿ (76), ಅಕ್ಷರ್‌ ಪಟೇಲ್‌ (47), ಶಿವಂ ದುಬೆ (27 ), ರೋಹಿತ್‌ ಶರ್ಮಾ (9) , ಹಾರ್ದಿಕ್‌ ಪಾಂಡ್ಯ (6),   ನಿಟ್ರೋಜೆ 26/2, ಕೇಶವ್‌ ಮಹಾರಾಜ 23/2, ರಬಾಡಾ 36/1, ಜಾನ್‌ಸೇನ್‌ 49/1

ಇದನ್ನೂ ಓದಿ : India Vs South Africa: ಶೆಫಾಲಿ ದ್ವಿಶತಕ, ಸ್ಮೃತಿ ಶತಕದಬ್ಬರಕ್ಕೆ ಚೆನ್ನೈನಲ್ಲಿ ಕೊಚ್ಚಿ ಹೋದ ದಕ್ಷಿಣ ಆಫ್ರಿಕಾ  

India vs South Africa ICC T20 World cup 2024 Final Virat Kohli and Axar Patel Batting

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular