India vs Sri Lanka : ಇಶಾನ್‌ ಕಿಶನ್‌, ಅಯ್ಯರ್‌ ಆರ್ಭಟ, ಮೊದಲ ಟಿ20 ಪಂದ್ಯ ಗೆದ್ದ ಭಾರತ

ಲಕ್ನೋ : ಶ್ರೀಲಂಕಾ ವಿರುದ್ದದ ಮೂರು ಪಂದ್ಯಗಳ ಟಿ20 (India vs Sri Lanka ) ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಕಂಡಿದೆ. ನಾಯಕ ರೋಹಿತ್‌ ಶರ್ಮಾ, ಇಶಾನ್‌ ಕಿಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ ಅವರ ಬ್ಯಾಟಿಂಗ್‌ ಆರ್ಭಟದ ಜೊತೆಗೆ ಭಾರತದ ಕರಾರುವಕ್ಕಾದ ಬೌಲಿಂಗ್‌ ದಾಳಿಗೆ ಶ್ರೀಲಂಕಾ ತತ್ತರಿಸಿದೆ. ಈ ಮೂಲಕ ಟೀಂ ಇಂಡಿಯಾ 62ರನ್‌ ಗಳ ಗೆಲುವು ದಾಖಲಿಸುವ ಮೂಲಕ ಟಿ20 ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ಲಕ್ನೋದ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ನಾಯಕ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಶತಕದ ಜೊತೆಯಾಟ ನೀಡಿದ್ದಾರೆ. 44 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೋಹಿತ್‌ ಶರ್ಮಾ ಲಹಿರು ಕುಮಾರ್‌ಗೆ ವಿಕೆಟ್‌ ಒಪ್ಪಿಸಿದ್ದರು. ನಂತರ ಇಶಾನ್‌ ಕಿಶನ್‌ ಜೊತೆಯಾತ ಶ್ರೇಯಸ್‌ ಅಯ್ಯರ್‌ ಆರ್ಭಟಿಸೋದಕ್ಕೆ ಶುರು ಮಾಡಿದ್ರು. ಇಶಾನ್‌ ಕಿಶನ್‌ ಕೇವಲ 56 ರನ್‌ ಗಳಲ್ಲಿ ಬರೋಬ್ಬರಿ 89 ರನ್‌ ಬಾರಿಸಿದ್ರೆ, ಶ್ರೇಯಸ್‌ ಅಯ್ಯರ್‌ 28 ಎಸೆತಗಳಲ್ಲಿ 57ರನ್‌ ಬಾರಿಸುವ ಮೂಲಕ ಭಾರತ ಸವಾಲಿನ ಮೊತ್ತ ದಾಖಲಿಸುವಲ್ಲಿ ನೆರವಾದ್ರು. ಟೀಂ ಇಂಡಿಯಾ ಅಂತಿಮವಾಗಿ 20 ಓವರ್‌ ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 199 ರನ್‌ ಗಳಿಸಿತ್ತು. ಶನಕ ಹಾಗೂ ಲಹಿರು ಕುಮಾರ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಇನ್ನು ಭಾರತ ನೀಡಿದ ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ಶ್ರೀಲಂಕಾ ತಂಡಕ್ಕೆ ಭುವನೇಶ್ವರ್‌ ಕುಮಾರ್‌ ಆರಂಭಿಕ ಆಘಾತವನ್ನು ನೀಡಿದ್ರು. ನಿಶಾಂಕ್‌ ಸೊನ್ನೆ ರನ್‌ಗೆ ಬೌಲ್ಡ್‌ ಆದ್ರೆ ನಂತರದಲ್ಲಿ ಕಾಮಿಲ್‌ ಮಿಶ್ರಾ ಬಲಿ ಪಡೆದ್ರು. ಜೆನಿತ್‌ ಲಿಯಾಂಗೆ ಜೊತೆಯಾದ ಚರಿತ ಅಸಲಂಕಾ ಉತ್ತಮ ಜೊತೆಯಾಟದ ಭರವಸೆ ನೀಡಿದ್ರು ಕೂಡ ವೆಂಕಟೇಶ್‌ ಅಯ್ಯರ್‌ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಕೇವಲ 11ರನ್‌ ಗಳಿಸಿದ್ದ ಲಿಯಾಂಗೆ ವಿಕೆಟ್‌ ಪಡೆದುಕೊಂಡ್ರು. ಅಸಲಂಕಾ ಒಂದೆಡೆಯಲ್ಲಿ ಉತ್ತಮ ಆಟವಾಡುತ್ತಿದ್ರು ಕೂಡ ಇನ್ನೊಂದೆಡೆಯಲ್ಲಿ ವಿಕೆಟ್‌ ಪತನವಾಗುತ್ತಲೇ ಸಾಗಿತ್ತು. ಅಂತಿಮವಾಗಿ ಚಾಮಿಕ ಕರುಣರತ್ನೆ ಹಾಗೂ ಚಾಮಿರಾ ಎರಡಂಕಿ ರನ್‌ ಬಾರಿಸಿದ್ರು. ಅಸಲಂಕಾ ಆಕರ್ಷಕ ಅರ್ಧ ಶತಕದ ನಡುವಲ್ಲೇ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 137 ರನ್‌ಗಳಿಗೆ ಸರ್ವ ಪತನ ಕಂಡಿದೆ.

ಸಂಕ್ಷಿಪ್ತ ಸ್ಕೋರ್‌ :

ಭಾರತ : ಇಶಾನ್‌ ಕಿಶನ್‌ (89), ಶ್ರೇಯಸ್‌ ಅಯ್ಯರ್‌ (57), ರೋಹಿತ್‌ ಶರ್ಮಾ ( 44) ಲಹಿರು ಕುಮಾರ್‌ 43/1, ಶನಕ 19/1

ಶ್ರೀಲಂಕಾ : ಚರಿತ ಅಸಲಂಕಾ* (53), ಚಾಮಿರ ( 24), ಕರುಣರತ್ನೆ (21), ಕಾಮಿಲ್‌ ಮಿಶ್ರಾ (13), ಜಾನಿತ್‌ ಲಿಯಾಂಗೆ (11), ದಿನೇಶ್‌ ಚಾಂಡಿಮಾನ್‌ (10), ಭುವನೇಶ್ವರ್‌ ಕುಮಾರ್‌ 9/2, ವೆಂಕಟೇಶ್‌ ಅಯ್ಯರ್‌ 36/2, ಯಜುವೇಂದ್ರ ಚಹಲ್‌ 11/1, ರವೀಂದ್ರ ಜಡೇಜಾ 28/1

ಇದನ್ನೂ ಓದಿ : ಐಪಿಎಲ್ 2022ಕ್ಕೂ ಮೊದಲೇ ಈ ತಂಡದ ಮುಖ್ಯ ಕೋಚ್ ಆಗ್ತಿದ್ದಾರೆ ಕ್ರಿಸ್ ಗೇಲ್

ಇದನ್ನೂ ಓದಿ : ದೆಹಲಿ ಕ್ಯಾಪಿಟಲ್ಸ್‌ ಸೇರ್ತಾರೆ ಆರ್‌ಸಿಬಿ ತಂಡದ ಈ ಖ್ಯಾತ ಆಟಗಾರ

(India vs Sri Lanka 1st t20 match India won by 62 runs)

Comments are closed.