India Vs West Indies 2nd T20 : ಭಾರತವನ್ನು ಸೋಲಿಸಿದ್ದು ನಾಯಕ ರೋಹಿತ್.. ಹಿಟ್‌ಮ್ಯಾನ್ ಯಾಕೆ ಹೀಗ್ ಮಾಡಿದ್ರು ?

ಸೇಂಟ್ ಕಿಟ್ಸ್: (India Vs West Indies 2nd T20 ) ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್”ಗಳ ಸೋಲು ಕಂಡಿದೆ. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಭಾರತ ಸೋಲು ಕಾಣಲು ಕಾರಣ ನಾಯಕ ರೋಹಿತ್ ಶರ್ಮಾ (Rohit Sharma defeated India) ಅವರ ಅದೊಂದು ಅಚ್ಚರಿಯ ನಿರ್ಧಾರ. ವಾರ್ನರ್ ಪಾರ್ಕ್ ಮೈದಾನದಲ್ಲಿ ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ನಡೆಸಿತು. ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್”ನ ಮೊದಲ ಎಸೆತದಲ್ಲೇ ಔಟಾದ್ರು. ವಿಂಡೀಸ್ ಮಧ್ಯಮ ವೇಗಿ ಓಬೆಡ್ ಮೆಕೋಯ್ ಅವರ ಮಾರಕ ದಾಳಿಗೆ (6/17) ತತ್ತರಿಸಿದ ಟೀಮ್ ಇಂಡಿಯಾ 19.4 ಓವರ್’ಗಳಲ್ಲಿ ಕೇವಲ 138 ರನ್ನಿಗೆ ಆಲೌಟಾಯ್ತು.

ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಕೊನೆಯ ಓವರ್”ನಲ್ಲಿ ಗೆಲ್ಲಲು 10 ರನ್”ಗಳ ಅವಶ್ಯಕತೆಯಿತು. ಕೈಯಲ್ಲಿದ್ದ ವಿಕೆಟ್ 5. ಅನುಭವೀ ಮಧ್ಯಮ ವೇಗಿ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಕೋಟಾದಲ್ಲಿ ಇನ್ನೂ ಎರಡು ಓವರ್’ಗಳು ಬಾಕಿಯಿದ್ವು. ಹೀಗಾಗಿ ಅಂತಿಮ ಓವರ್ ಅನ್ನು ಭುವನೇಶ್ವರ್ ಕುಮಾರ್ ಅವರೇ ಮಾಡ್ತಾರೆ, ಭಾರತ ಪಂದ್ಯ ಗೆಲ್ಲತ್ತೆ ಅನ್ನೋ ನಿರೀಕ್ಷೆ ಸಹಜವಾಗಿಯೇ ಇತ್ತು. ಆದರೆ ಅಚ್ಚರಿಯ ನಿರ್ಧಾರ ತೆಗೆದುಕೊಂಡ ನಾಯಕ ರೋಹಿತ್ ಶರ್ಮಾ ಕೊನೆಯ ಓವರ್ ಬೌಲಿಂಗ್ ನೀಡಿದ್ದು ಯುವ ವೇಗಿ ಆವೇಶ್ ಖಾನ್’ಗೆ. ಆಗ್ಲೇ ಒಂದು ಓವರ್ ಬೌಲಿಂಗ್ ಮಾಡಿ 19 ರನ್ ನೀಡಿದ್ದ ಆವೇಶ್ ಖಾನ್, ಕೊನೆಯ ಓವರ್’ನಲ್ಲಿ ಮತ್ತೆ ದುಬಾರಿಯಾದ್ರು. ಮೊದಲ ಎಸೆತ ನೋಬಾಲ್ 2 ರನ್, 2ನೇ ಎಸೆತ ಸಿಕ್ಸರ್, 3ನೇ ಎಸೆತ ಬೌಂಡರಿ.. ಮ್ಯಾಚ್ ಫಿನಿಷ್. ಅಂತಿಮ ಓವರ್”ನ ಮೂರೇ ಎಸೆತಗಳಲ್ಲಿ ಗುರಿ ತಲುಪಿದ ವೆಸ್ಟ್ ಇಂಡೀಸ್ 5 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು.

ತಮ್ಮ ಅಚ್ಚರಿಯ ನಿರ್ಧಾರಕ್ಕೆ ಪಂದ್ಯದ ನಂತರ ಸ್ಪಷ್ಟನೆ ಕೊಟ್ಟ ನಾಯಕ ರೋಹಿತ್ ಶರ್ಮಾ, “ಇದು ಅವಕಾಶ ನೀಡುವ ಪ್ರಕ್ರಿಯೆ ಅಷ್ಟೇ. ಭುವನೇಶ್ವರ್ ಕುಮಾರ್ ಅವರ ಸಾಮರ್ಥ್ಯ ನಮಗೆ ಗೊತ್ತೇ ಇದೆ. ಆದರೆ ಆವೇಶ್ ಅಖಾನ ಅಥವಾ ಅರ್ಷದೀಪ್ ಸಿಂಗ್’ಗೆ ಈ ರೀತಿಯ ಅವಕಾಶಗಳನ್ನು ನೀಡದೇ ಇದ್ದರೆ, ಭಾರತ ಪರ ಡೆತ್ ಓವರ್ ಬೌಲಿಂಗ್ ನಡೆಸುವುದು ಎಷ್ಟು ದೊಡ್ಡ ಸವಾಲು ಎಂಬುದನ್ನು ಅವರು ಅರಿಯಲಾರರು. ಇದನ್ನು ಅವರು ಐಪಿಎಲ್’ನಲ್ಲಿ ಈಗಾಗಲೇ ಮಾಡಿ ತೋರಿಸಿದ್ದಾರೆ.

ಕೇವಲ ಒಂದು ಪಂದ್ಯದ ವೈಫಲ್ಯಕ್ಕೆ ಆವೇಶ್ ಖಾನ್ ಗಾಬರಿಯಾಗುವ ಅಗತ್ಯವಿಲ್ಲ. ಅವರಿಗೆ ತಂಡದ ಬೆಂಬಲ ಮತ್ತು ಹೆಚ್ಚು ಹೆಚ್ಚು ಅವಕಾಶಗಳ ಅವಶ್ಯಕತೆಯಿದೆ” ಎಂದು ಹೇಳುವ ಮೂಲಕ ತಮ್ಮ ಅಚ್ಚರಿಯ ನಿರ್ಧಾರವನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ : Exclusive : ಕರ್ನಾಟಕ ರಣಜಿ ತಂಡಕ್ಕೆ ಸ್ಟುವರ್ಟ್ ಬಿನ್ನಿ ಕೋಚ್ ?

ಇದನ್ನೂ ಓದಿ : KSCA Maharaja Trophy T20 : ಗುಲ್ಬರ್ಗ ಮಿಸ್ಟಿಕ್ಸ್‌ಗೆ ಮನೀಶ್ ಕ್ಯಾಪ್ಟನ್, ಬೆಂಗಳೂರು ಬ್ಲಾಸ್ಟರ್ಸ್‌ಗೆ ಮಯಾಂಕ್ ನಾಯಕ

India Vs West Indies 2nd T20 Captain Rohit Sharma defeated India, Why did you do it

Comments are closed.