Shreyas Iyer : ಶ್ರೇಯಸ್ ಅಯ್ಯರ್‌ಗೆ ಪದೇ ಪದೇ ಅವಕಾಶದ ಗುಟ್ಟೇನು..? ಮುಂಬೈ ಲಾಬಿನಾ..? ದ್ರಾವಿಡ್ ಇದ್ದೂ ಹೀಗಾದ್ರೆ ಹೇಗೆ..?

ಬೆಂಗಳೂರು : (secret of Shreyas Iyer repeated opportunities) ಅದೊಂದು ಕಾಲವಿತ್ತು. ಮುಂಬೈ ಆಟಗಾರರು ಫಾರ್ಮ್’ನಲ್ಲಿ ಇರಲಿ, ಇಲ್ಲದಿರಲಿ.. ಭಾರತ ತಂಡದಲ್ಲಿ ಅವರ ಸ್ಥಾನಕ್ಕೇನು ಕುತ್ತು ಬರುತ್ತಿರಲಿಲ್ಲ. ಆದರೆ ಭಾರತೀಯ ಕ್ರಿಕೆಟ್’ನಲ್ಲಿ ಸೌರವ್ ಗಂಗೂಲಿ ಯುಗ ಆರಂಭವಾಗಿ, ನಂತರ ಧೋನಿ, ವಿರಾಟ್ ಕೊಹ್ಲಿ ನಾಯಕರಾಗುತ್ತಿದ್ದಂತೆ ಟೀಮ್ ಇಂಡಿಯಾದಲ್ಲಿ ಮುಂಬೈ ಪ್ರಾಬಲ್ಯ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಈಗ ರೋಹಿತ್ ಶರ್ಮಾ ನಾಯಕರಾಗುತ್ತಿದ್ದಂತೆ ಮತ್ತೆ ಮುಂಬೈ ಲಾಬಿ ಶುರುವಾದಂತಿದೆ. ಇದಕ್ಕೆ ಉದಾಹರಣೆ ಟಿ20ಯಲ್ಲಿ ಔಟ್ ಆಫ್ ಫಾರ್ಮ್ ಶ್ರೇಯಸ್ ಅಯ್ಯರ್’ಗೆ ಸಿಗುತ್ತಿರುವ ಸಾಲು ಸಾಲು ಅವಕಾಶ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ (India Vs West Indies T20 Series) ಮೊದಲ ಎರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ದಯನೀಯ ವೈಫಲ್ಯ ಎದುರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮುಗ್ಗರಿಸಿದ್ರೂ, ಶ್ರೇಯಸ್ ಅಯ್ಯರ್”ಗೆ ವಿಂಡೀಸ್ ವಿರುದ್ಧ ಆಡುವ ಅವಕಾಶ ಸಿಕ್ಕಿತ್ತು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಅಯ್ಯರ್ ಗಳಿಸಿದ ರನ್ ಕೇವಲ 10. ಆರಂಭಿಕ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಮುಂಬೈಕರ್, 2ನೇ ಪಂದ್ಯದಲ್ಲಿ 10 ರನ್ ಗಳಿಸಿ ಮತ್ತೊಂದು ವೈಫಲ್ಯ ಎದುರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲೂ ಮುಗ್ಗರಿಸಿದ್ದ ಶ್ರೇಯಸ್ ಅಯ್ಯರ್ ಆಡಿದ ಒಂದು ಪಂದ್ಯದಲ್ಲಿ 28 ರನ್ ಗಳಿಸಿದ್ರು. ಅದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ನಡೆದಿದ್ದ ಟಿ20 ಸರಣಿಯಲ್ಲೂ ಶ್ರೇಯಸ್ ಅಯ್ಯರ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದರು.

ಕಳೆದ 8 ಟಿ20 ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಸ್ಕೋರ್:
36, 40, 14, 4, 0*, 28, 0, 10 = 132 ರನ್.

ಶ್ರೇಯಸ್ ಅಯ್ಯರ್”ಗೆ ಅವಕಾಶ ಕೊಡುವ ಸಲುವಾಗಿ ಇನ್ ಫಾರ್ಮ್ ಆಟಗಾರರಾದ ದೀಪಕ್ ಹೂಡ (Deepak Hooda) ಮತ್ತು ಸಂಜು ಸ್ಯಾಮ್ಸನ್ (Sanju samson) ಅವರನ್ನು ಕಡಗಣಿಸಲಾಗುತ್ತಿದೆ. ಭಾರತ ಪರ ಆಡಿದ ನಾಲ್ಕುಟಿ20 ಇನ್ನಿಂಗ್ಸ್”ಗಳಲ್ಲಿ ದೀಪಕ್ ಹೂಡ ಒಟ್ಟು 205 ರನ್ (21, 47*, 104, 33) ಗಳಿಸಿ ಭರವಸೆ ಮೂಡಿಸಿದ್ದಾರೆ. ಇದೇ ವೇಳೆ ಕೇರಳ ಆಟಗಾರ ಸಂಜು ಸ್ಯಾಮ್ಸನ್ ಕಳೆದ ಮೂರು ಟಿ20 ಇನ್ನಿಂಗ್ಸ್’ಗಳಿಂದ 134 ರನ್ (39, 18, 77) ಗಳಿಸಿದ್ದಾರೆ. ಇಂತಹ ಫಾರ್ಮ್’ನಲ್ಲಿರುವ ಆಟಗಾರರನ್ನು ಬೆಂಚ್ ಕಾಯಿಸಲು ಬಿಟ್ಟು, ಫಾರ್ಮ್ ಕಳೆದುಕೊಂಡಿರುವ ಶ್ರೇಯಸ್ ಅಯ್ಯರ್’ಗೆ ಪದೇ ಪದೇ ಅವಕಾಶ ನೀಡುತ್ತಿರುವುದರ ವಿರುದ್ಧ ಕ್ರಿಕೆಟ್ ಪ್ರಿಯರು ಸಾಮಾಜಿಕ ತಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ. ರಾಹುಲ್ ದ್ರಾವಿಡ್ ಅವರಂತಹ ಕೋಚ್ ಇರುವಾಗ ಯುವ ಟೀಮ್ ಇಂಡಿಯಾದಲ್ಲಿ ಕೆಲ ಯುವ ಆಟಗಾರರಿಗೆ ಈ ರೀತಿಯ ಅನ್ಯಾಯ ನಡೆಯುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಫಾರ್ಮ್ ಕಳೆದುಕೊಂಡಿರುವ ಶ್ರೇಯಸ್ ಅಯ್ಯರ್”ಗೆ ಪದೇ ಪದೇ ಅವಕಾಶ ನೀಡುತ್ತಿರುವುದಕ್ಕೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Exclusive : ಕರ್ನಾಟಕ ರಣಜಿ ತಂಡಕ್ಕೆ ಸ್ಟುವರ್ಟ್ ಬಿನ್ನಿ ಕೋಚ್ ?

ಇದನ್ನೂ ಓದಿ : India Vs West Indies 2nd T20 : ಭಾರತವನ್ನು ಸೋಲಿಸಿದ್ದು ನಾಯಕ ರೋಹಿತ್.. ಹಿಟ್‌ಮ್ಯಾನ್ ಯಾಕೆ ಹೀಗ್ ಮಾಡಿದ್ರು ?

secret of Shreyas Iyer repeated opportunities Mumbai lobby How can this happen even with Rahul Dravid

Comments are closed.