India Vs West Indies test series : ವಿಂಡೀಸ್ ವಿರುದ್ಧದ ಪ್ರಥಮ ಟೆಸ್ಟ್’ಗೆ ಕೌಂಟ್ ಡೌನ್, ಯಶಸ್ವಿ ಜೈಸ್ವಾಲ್ ಪದಾರ್ಪಣೆ, ಇಶಾನ್’ಗೂ ಡೆಬ್ಯೂ ಚಾನ್ಸ್?

ಡೊಮಿನಿಕಾ: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ (India Vs West Indies test series) ಮೊದಲ ಪಂದ್ಯ ಇಂದು (ಬುಧವಾರ) ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.

ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ದೇಶೀಯ ಕ್ರಿಕೆಟ್’ನಲ್ಲಿ ಅಬ್ಬರಿಸಿರುವ ಮುಂಬೈನ ಯುವ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ (Yashasvi Jaiiswal) ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಲಿದ್ದಾರೆ. ಜೈಸ್ವಾಲ್ ಜೊತೆ ಜಾರ್ಖಂಡ್’ನ ಮತ್ತೊಬ್ಬ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶಾನ್ ಕಿಶನ್ (Ishan Kishan) ಕೂಡ ಭಾರತ ಪರ ಚೊಚ್ಚಲ ಟೆಸ್ಟ್ ಆಡುವ ಸಾಧ್ಯತೆಯಿದೆ.

ಎಡಗೈ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ನಾಯಕ ರೋಹಿತ್ ಶರ್ಮಾ ಜೊತೆ ಟೀಮ್ ಇಂಡಿಯಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ ಬಲಗೈ ಯುವ ಓಪನರ್ ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ತಾವು 3ನೇ ಕ್ರಮಾಂಕದಲ್ಲಿ ಆಡಲು ಇಚ್ಚಿಸುವುದಾಗಿ ಶುಭಮನ್ ಗಿಲ್, ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಮನವಿ ಮಾಡಿದ್ದರು. 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು 5ನೇ ಕ್ರಮಾಂಕದಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಆಡಲಿದ್ದಾರೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಕೆ.ಎಸ್ ಭರತ್ ಬದಲು ಇಶಾನ್ ಕಿಶನ್ ಆಡುವ ಸಾಧ್ಯತೆಯಿದೆ.

ಭಾರತ ಇಬ್ಬರು ಸ್ಪಿನ್ ಆಲ್ರೌಂಡರ್’ಗಳೊಂದಿಗೆ ಕಣಕ್ಕಿಳಿಯಲಿದ್ದು, ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಆಡುವುದು ಪಕ್ಕಾ. ಇನ್ನು ಟೀಮ್ ಇಂಡಿಯಾ ಮೂವರು ಮಧ್ಯಮ ವೇಗಿಗಳನ್ನು ಆಡಿಸಲಿದ್ದು, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಜೊತೆ 3ನೇ ವೇಗದ ಬೌಲರ್ ಆಗಿ ಸೌರಾಷ್ಟ್ರದ ಎಡಗೈ ವೇಗಿ ಜೈದೇವ್ ಉನಾದ್ಕಟ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

  1. ರೋಹಿತ್ ಶರ್ಮಾ (ನಾಯಕ)
  2. ಯಶಸ್ವಿ ಜೈಸ್ವಾಲ್
  3. ಶುಭಮನ್ ಗಿಲ್
  4. ವಿರಾಟ್ ಕೊಹ್ಲಿ
  5. ಅಜಿಂಕ್ಯ ರಹಾನೆ (ಉಪನಾಯಕ)
  6. ಇಶಾನ್ ಕಿಶನ್ (ವಿಕೆಟ್ ಕೀಪರ್)
  7. ರವೀಂದ್ರ ಜಡೇಜ
  8. ರವಿಚಂದ್ರನ್ ಅಶ್ವಿನ್
  9. ಶಾರ್ದೂಲ್ ಠಾಕೂರ್
  10. ಮೊಹಮ್ಮದ್ ಸಿರಾಜ್
  11. ಜೈದೇವ್ ಉನಾದ್ಕಟ್

ಇದನ್ನೂ ಓದಿ : Duleep Trophy final : ನಾಳೆಯಿಂದ ಚಿನ್ನಸ್ವಾಮಿಯಲ್ಲಿ ದುಲೀಪ್ ಟ್ರೋಫಿ ಫೈನಲ್, ಚಾಂಪಿಯನ್ ಪಟ್ಟದ ನಿರೀಕ್ಷೆಯಲ್ಲಿ ದಕ್ಷಿಣ ವಲಯ

ಇದನ್ನೂ ಓದಿ : India Vs West Indies test series : ಡ್ರೀಮ್11 ಜರ್ಸಿಯಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು, ನಾಳೆಯಿಂದ ಹೊಸ ಪ್ರಯಾಣ ಶುರು

ಭಾರತ Vs ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್
ಪಂದ್ಯ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ವಿಂಡ್ಸರ್ ಪಾರ್ಕ್ ಮೈದಾನ, ಡೊಮಿನಿಕಾ
ನೇರ ಪ್ರಸಾರ/ ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ/ ಫ್ಯಾನ್ ಕೋಡ್ (JioCinema and FanCode)

India Vs West Indies test series: Countdown to the first Test against Windies, Jaiswal’s successful debut, Ishan’s debut chance?

Comments are closed.