ಗ್ವಾಲಿಯರ್ : ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕತ್ವದ ರೆಸ್ಟ್ ಆಫ್ ಇಂಡಿಯಾ ತಂಡ 2021-22ರ ರಣಜಿ ಚಾಂಪಿಯನ್ ಮಧ್ಯಪ್ರದೇಶ ತಂಡವನ್ನು ಸೋಲಿಸಿ ಇರಾನಿ ಕಪ್ ಟ್ರೋಫಿಯನ್ನು (India won Irani Cup) ಗೆದ್ದುಕೊಂಡಿದೆ. ಗ್ವಾಲಿಯರ್’ನ ಕ್ಯಾಪ್ಟನ್ ರೂಪ್ ಸಿಂಗ್ ಮೈದಾನದಲ್ಲಿ ಭಾನುವಾರ ಅಂತ್ಯಗೊಂಡ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡ ಮಧ್ಯಪ್ರದೇಶ ತಂಡವನ್ನು 238 ರನ್’ಗಳಿಂದ ಬಗ್ಗು ಬಡಿದು ಇರಾನಿ ಕಪ್ ಮುಡಿಗೇರಿಸಿಕೊಂಡಿತು.
ಗೆಲ್ಲಲು 437 ರನ್’ಗಳ ಕಷ್ಟಕರ ಗುರಿ ಪಡೆದಿದ್ದ ಮಧ್ಯಪ್ರದೇಶ ತಂಡ ತನ್ನ 2ನೇ ಇನ್ನಿಂಗ್ಸ್’ನಲ್ಲಿ ಕೇವಲ 198 ರನ್’ಗಳಿಗೆ ಆಲೌಟಾಯಿತು. ರೆಸ್ಟ್ ಆಫ್ ಇಂಡಿಯಾ ಪರ ಮುಂಬೈನ ಯುವ ಎಡಗೈ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ಪಂದ್ಯದಲ್ಲಿ ಒಟ್ಟು 357 ರನ್ ಕಲೆ ಹಾಕಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರು. ಪ್ರಥಮ ಇನ್ನಿಂಗ್ಸ್’ನಲ್ಲಿ 259 ಎಸೆತಗಳಲ್ಲಿ ಅಮೋಘ 213 ರನ್ ಸಿಡಿಸಿದ್ದ ಜೈಸ್ವಾಲ್, ದ್ವಿತೀಯ ಇನ್ನಿಂಗ್ಸ್’ನಲ್ಲೂ ಅಬ್ಬರಿಸಿ 157 ಎಸೆತಗಳಲ್ಲಿ ಸ್ಫೋಟಕ 144 ರನ್ ಬಾರಿಸಿ ರೆಸ್ಟ್ ಆಫ್ ಇಂಡಿಯಾಗೆ ಇರಾನಿ ಕಪ್ ಗೆದ್ದುಕೊಟ್ಟರು.
ಇದನ್ನೂ ಓದಿ : ಸೆಲೆಬ್ರಿಟಿ ಕ್ರಿಕೆಟ್ ಲೀಗ್ : ಚೆನ್ನೈ ರೈನೋಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್
ಇದನ್ನೂ ಓದಿ : ಮಹಿಳಾ ಪ್ರೀಮಿಯರ್ ಲೀಗ್ : RCBಗೆ ಇಂದು ಡೆಲ್ಲಿ ಚಾಲೆಂಜ್, ಇಲ್ಲಿದೆ ಹೈವೋಲ್ಟೇಜ್ ಪಂದ್ಯದ ಕಂಪ್ಲೀಟ್ ಮಾಹಿತಿ
ಜೈಸ್ವಾಲ್ ಅವರ ಶತಕದ ನೆರವಿನಿಂದ 2ನೇ ಇನ್ನಿಂಗ್ಸ್’ನಲ್ಲಿ 246 ರನ್ ಗಳಿಸಿದ ರೆಸ್ಟ್ ಆಫ್ ಇಂಡಿಯಾ, ಗೆಲುವಿಗಾಗಿ ಮಧ್ಯಪ್ರದೇಶಕ್ಕೆ 437 ರನ್’ಗಳ ಗುರಿಯೊಡ್ಡಿತ್ತು. 2 ವಿಕೆಟ್ ನಷ್ಟಕ್ಕೆ 81 ರನ್’ಗಳೊಂದಿಗೆ 5ನೇ ದಿನದಾಟ ಮುಂದುವರಿಸಿದ ಮಧ್ಯಪ್ರದೇಶ ತಂಡ, 117 ರನ್’ಗಳ ಅಂತರದಲ್ಲಿ ಕೊನೆಯ 8 ವಿಕೆಟ್’ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿದೆ.
India Won Irani Cup: Rest of India won the Irani Cup in the lead