namma metro : ಲಿಫ್ಟ್​ ದುರ್ಬಳಕೆ ತಪ್ಪಿಸಲು ಬಿಎಂಆರ್​ಸಿಎಲ್​ ಪ್ಲಾನ್​ : ಮೆಟ್ರೋದಲ್ಲಿನ್ನು ಲಿಫ್ಟ್​ ಬಳಕೆಗೆ ಬೇಕು ಟೋಕನ್​

ಬೆಂಗಳೂರು : namma metro new token : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್​ನಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಹೀಗಾಗಿ ಅನೇಕರು ಬಿಎಂಟಿಸಿ ಹಾಗೂ ತಮ್ಮ ಸ್ವಂತ ವಾಹನಗಳಿಗೆ ಬೈಬೈ ಹೇಳಿ ಮೆಟ್ರೋವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೆಟ್ರೋ ಸಂಚಾರದ ವೇಳೆ ಯಾವುದೇ ಟ್ರಾಫಿಕ್​ ಕಿರಿಕಿರಿ ಇಲ್ಲದ ಕಾರಣ ಅಂದುಕೊಂಡ ಸ್ಥಳಕ್ಕೆ ಅತ್ಯಂತ ವೇಗವಾಗಿ ತಲುಪಬಹುದಾಗಿದೆ. ಮೆಟ್ರೋದಿಂದ ಇಳಿದ ತಕ್ಷಣ ಅನೇಕರು ಎಸ್ಕಲೇಟರ್​ಗಳನ್ನು ಹತ್ತಿದರೆ ಇನ್ನೂ ಕೆಲವರು ಮೆಟ್ಟಿಲಿನ ಸಹಾಯ ಪಡೆದುಕೊಳ್ತಾರೆ. ಮೆಟ್ರೋದಲ್ಲಿ ಹಿರಿಯರು , ಅಂಗ ವಿಕಲರು, ಗರ್ಭಿಣಿಯರಿಗೆಂದೇ ಲಿಫ್ಟ್​ ಸೌಕರ್ಯ ಇಡಲಾಗಿದೆ. ಆದರೆ ಮೆಟ್ಟಿಲು ಹತ್ತಿಳಿಯುವ ಕಷ್ಟ ತಪ್ಪಿಸಿಕೊಳ್ಳಲು ಸಾಮಾನ್ಯರೂ ಸಹ ಲಿಫ್ಟ್​ಏರುತ್ತಾರೆ.

ಸಾಮಾನ್ಯರು ಲಿಫ್ಟ್​ ಏರುತ್ತಿರೋದ್ರಿಂದ ಯಾರಿಗೆ ನಿಜವಾಗಿಯೂ ಲಿಫ್ಟ್​ನ ಅವಶ್ಯಕತೆಯಿತ್ತೋ ಅವರು ಮೆಟ್ಟಿಲುಗಳಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯರು, ಅಂಗವಿಕಲರು ಎಸ್ಕ್​ಲೇಟರ್​ ಬಳಸಲು ಸಾಧ್ಯವಾಗದೇ ಇರೋದ್ರಿಂದ ಬಹಳ ಸಮಯಗಳ ಕಾಲ ಸರದಿ ಸಾಲಿನಲ್ಲಿ ನಿಂತುಕೊಳ್ತಾರೆ. ಈ ಎಲ್ಲಾ ಸಮಸ್ಯೆಗಳು ಬಿಎಂಆರ್​ಸಿಎಲ್​​ ಗಮನಕ್ಕೆ ಬಂದಿದ್ದು ಸೂಕ್ತ ಕ್ರಮವೊಂದನ್ನು ಕೈಗೊಳ್ಳಲಾಗಿದೆ. ಲಿಫ್ಟ್​ ಅನಾನುಕೂಲವನ್ನು ತಪ್ಪಿಸುವ ಸಲುವಾಗಿ ಟೋಕನ್​ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಲಿಫ್ಟ್​ನ್ನು ಕೇವಲ ಗರ್ಭಿಣಿಯರು, ವೃದ್ಧರು, ಅಂಗವಿಕಲರು ಮಾತ್ರ ಬಳಸಬೇಕೆಂದು ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್​ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಐದು ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಕಬ್ಬನ್‌ಪಾರ್ಕ್, ವಿಧಾನಸೌಧ, ಸರ್ ಎಂ. ವಿಶ್ವೇಶ್ವರಯ್ಯ, ಕೆಎಸ್ ಆರ್ ರೈಲು ನಿಲ್ದಾಣ ಮತ್ತು ಕೆಂಪೇಗೌಡ ಮೆಟ್ರೊ ನಿಲ್ದಾಣಗಳಲ್ಲಿ ಲಿಫ್ಟ್​ ಹತ್ತಲು ಟೋಕನ್​ ನೀಡಲಾಗ್ತಿದೆ. ಮೆಟ್ಟಿಲು ಹತ್ತಲು ಕಷ್ಟವೆನಿಸುವವರಿಗೆ ಮಾತ್ರ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಟೋಕನ್​ಗಳನ್ನು ನೀಡುತ್ತದೆ. ವೃದ್ಧರು, ಗರ್ಭಿಣಿಯರು, ಅಂಗವಿಕಲರು ಟೋಕನ್​​ ಪಡೆಯಬೇಕು ಎಂದೇನಿಲ್ಲ. ಸಾಮಾನ್ಯ ನಾಗರಿಕರಿಗೂ ಲಿಫ್ಟ್​ ಅನಿವಾರ್ಯ ಎಂಬ ಪರಿಸ್ಥಿತಿ ಇದ್ದಲ್ಲಿ ಮಾತ್ರ ಟೋಕನ್​ಗಳನ್ನು ಪಡೆದು ಲಿಫ್ಟ್​ ಸೌಕರ್ಯ ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : PV Sindhu Commonwealth Games : ಭಾರತದ ಧ್ವಜಧಾರಿಯಾಗಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧೂ

ಇದನ್ನೂ ಓದಿ : Janotsava Progarame Canceled : ಪ್ರವೀಣ್‌ ಹತ್ಯೆ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ : ಬೆದರಿದ ಬಿಜೆಪಿ ಸರಕಾರ, ಜನೋತ್ಸವ ಕಾರ್ಯಕ್ರಮ ರದ್ದು

bengaluru bmrcl namma metro new token for metro lift usage

Comments are closed.