Kandahar Blast : ಅಫ್ಘಾನಿಸ್ತಾನದ ಕಂದಹಾರ್ ಮಸೀದಿಯಲ್ಲಿ ಸ್ಫೋಟ : 32 ಸಾವು, 53 ಮಂದಿಗೆ ಗಾಯ

ಕಂದಹಾರ್ : ಅಫ್ಘಾನಿಸ್ತಾನದ ಕಂದಹಾರ್ ನಗರದಲ್ಲಿರುವ ಶಿಯಾ ಮಸೀದಿಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇಸ್ಲಾಮಿಕ್ ಸ್ಟೇಟ್-ಖೊರಾಸನ್ (ಐಎಸ್-ಕೆ) ಆತ್ಮಾಹುತಿ ಬಾಂಬರ್ ಕುಂಡುಜ್‌ನ ಶಿಯಾ ಮಸೀದಿಯಲ್ಲಿ ನಡೆದಿದ್ದ ದಾಳಿಯ ಬೆನ್ನಲ್ಲೇ ಇದೀಗ ಮತ್ತೊಂದು ದಾಳಿ ನಡೆಸಲಾಗಿದೆ. ಈಗಾಗಲೇ ಘಟನೆಯಲ್ಲಿ ಮೃತಪಟ್ಟಿರುವವರ ಪೈಕಿ 32 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಲ್ಲದೇ 53 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಪ್ಘಾನಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ಆಗಿರುವ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ರು. ಈ ವೇಳೆಯಲ್ಲಿ ಮಸೀದಿಯಲ್ಲಿ ಒಟ್ಟು ಮೂರು ಬಾರಿ ಸ್ಪೋಟ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಶಿಯಾ ಬಂಧುಗಳ ಮಸೀದಿಯಲ್ಲಿ ನಡೆದ ಸ್ಪೋಟದಲ್ಲಿ ಹಲವಾರು ಮಂದಿ ಹುತಾತ್ಮರಾಗಿದ್ದಾರೆ ಎಂದು ತಾಲಿಬಾಲ್‌ ಆಂತರಿಕ ಸಚಿವಾಲಯದ ಆಯುಕ್ತ ಕರಿ ಸೈಯ್ಯದ್‌ ಖೋಸ್ತಿ ಟ್ವೀಟ್‌ ಮಾಡಿದ್ದಾರೆ.

ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಶಿಯಾ ಅಲ್ಪಸಂಖ್ಯಾತರನ್ನು ರಕ್ಷಿಸುವ ಭರವಸನೆಯನ್ನು ನೀಡಿತ್ತು. ಅಲ್ಲದೇ ಅಫ್ಘಾನ್ ಜನಸಂಖ್ಯೆಯ ಸರಿಸುಮಾರು 10 ಶಿಯಾ ಸಮುದಾಯದವರಿದ್ದಾರೆ. ಈ ಸಮುದಾಯ ಕಳೆದ ಒಂದು ದಶಕಗಳಿಂದಲೂ ಹಿಂಸೆಯನ್ನು ಅನುಭವಿಸುತ್ತಲೇ ಇದ್ದಾರೆ. ಅಕ್ಟೋಬರ್ 2017 ರಲ್ಲಿ, ಐಎಸ್ ಆತ್ಮಾಹುತಿ ದಾಳಿಕೋರ ಕಾಬೂಲ್‌ನ ಪಶ್ಚಿಮದಲ್ಲಿರುವ ಶಿಯಾ ಮಸೀದಿಯಲ್ಲಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಸುಮಾರು 56 ಮಂದಿ ಸಾವನ್ನಪ್ಪಿದ್ದು, 55 ಮಂದಿ ಗಾಯ ಗೊಂಡಿದ್ದರು.

ಇದನ್ನೂ ಓದಿ :

ಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ : ಸಾವಿನ ಸಂಖ್ಯೆ 100ಕ್ಕೆ ಏರಿಕೆ

( 32 Killed, 53 Injured In Blast At Mosque In Afghanistan’s Kandahar )

Comments are closed.