ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2022) ಕನ್ನಡಿಗ ಕೆ.ಎಲ್.ರಾಹುಲ್ (KL Rahul) ಆರ್ಭಟಿಸಿದ್ದಾರೆ. ಮುಂಬೈ ವಿರುದ್ದದ (LSG vs MI) ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ ಮುಂಬೈ ಗೆಲುವಿಗೆ 200 ರನ್ ಸವಾಲು ಒಡ್ಡಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೂ ಗೆಲುವನ್ನೇ ಕಾಣದ ಮುಂಬೈ ತಂಡವನ್ನು ರಾಹುಲ್ ಪಡೆ ಇದೀಗ ಇಕ್ಕಟ್ಟಿಗೆ ಸಿಲುಕಿಸಿದೆ.

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕ ಕೆ.ಎಲ್.ರಾಹುಲ್ ಹಾಗೂ ಕ್ವಿಂಟಾನ್ ಡಿಕಾಕ್ ಉತ್ತಮ ಆರಂಭ ಒದಗಿಸಿದ್ರು. ಡಿಕಾಕ್ 13 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದ್ರೆ, ನಂತರ ಬಂದ ಮನೀಶ್ ಪಾಂಡೆ ರಾಹುಲ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಲು ಮುಂದಾಗಿತ್ತು. ಕಳೆದ ಪಂದ್ಯಗಳಲ್ಲಿ ಹೀನಾಯ ಆಟವನ್ನಾಡಿದ್ದ ಪಾಂಡೆ ಇಂದಿನ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. 29 ಎಸೆತಗಳನ್ನು ಎದುರಿಸಿ 6 ಬೌಂಡರಿ ನೆರವಿನಿಂದ 38 ರನ್ ಗಳಿಸಿದ್ದಾರೆ.

ಒಂದೆಡೆಯಲ್ಲಿ ವಿಕೆಟ್ ಉರುಳುತ್ತಿದ್ದರೂ ಕೂಡ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದ ನಾಯಕ ಕೆ.ಎಲ್.ರಾಹುಲ್ 60 ಎಸೆತಗಳನ್ನು ಎದುರಿಸಿ, 5 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನಿಂದ 103 ರನ್ ಬಾರಿಸಿದ್ದಾರೆ. ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೊಯಿನಿಸ್ 9೯ ಎಸೆತಗಳಲ್ಲಿ 10 ಹಾಗೂ ದೀಪಕ್ ಹೂಡ 8 ಎಸೆತಗಳಲ್ಲಿ 15 ರನ್ ಸಿಡಿಸಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿದೆ.

ಮುಂಬೈ ಪರ ಜಯದೇವ್ ಉನಾದ್ಕಟ್ 2 ಹಾಗೂ ಫ್ಯಾಬಿನ್ ಅಲೆನ್ ಹಾಗೂ ಮುರುಗನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಇನ್ನೂ ಗೆಲುವನ್ನೇ ಕಾಣದ ಮುಂಬೈಗೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ. ಇನ್ನೊಂದೆಡೆಯಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಡಲು ಲಕ್ನೋ ಯತ್ನಿಸುತ್ತಿದೆ. ಮುಂಬೈ ಬ್ಯಾಟಿಂಗ್ ಬಲಿಷ್ಠವಾಗಿದ್ರೆ, ಲಕ್ನೋ ಬೌಲಿಂಗ್ ಪಡೆ ಕೂಡ ಅಷ್ಟೇ ಬಲಿಷ್ಠವಾಗಿದೆ.
ಇದನ್ನೂ ಓದಿ : Harshal Patel : ಹರ್ಷಲ್ ಪಟೇಲ್ ಸಹೋದರಿ ನಿಧನ : ಆರ್‌ಸಿಬಿ ತೊರೆದ ಖ್ಯಾತ ಆಟಗಾರ
ಇದನ್ನೂ ಓದಿ : 153.3 ಕಿಮೀ ವೇಗದಲ್ಲಿ ಬೌಲಿಂಗ್ : ಉಮ್ರಾನ್ ಮಲಿಕ್ IPL 2022 ರ ಅತ್ಯಂತ ವೇಗದ ಬೌಲರ್
IPL 2022 KL Rahul Scores Unbeaten 103 LSG vs MI