ಮುಂಬೈ : ಐಪಿಎಲ್ 2022 (IPL 2022) ರಲ್ಲಿ ಕೆ.ಎಲ್.ರಾಹುಲ್ (KL RAHUL) ಪಂಜಾಬ್ ತಂಡವನ್ನು ಪ್ರತಿನಿಧಿಸುವುದಿಲ್ಲ. ಈಗಾಗಲೇ ಪಂಜಾಬ್ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ಎರಡು ಆವೃತ್ತಿಗಳಿಂದಲೂ ಪಂಜಾಬ್ ತಂಡ ನಾಯಕನಾಗಿದ್ದ ಕೆ.ಎಲ್.ರಾಹುಲ್ ಮೆಗಾ ಹರಾಜಿನಲ್ಲಿ ಭಾಗಿಯಾಗಲು ಒಲವು ತೋರಿದ್ದಾರೆ. ಅಲ್ಲದೇ ಪಂಜಾಬ್ ಕಿಂಗ್ಸ್ ನಿಂದ ಹೊರ ಬಂದಿರುವ ರಾಹುಲ್ ಕೊನೆಗೂ ಮೌನ ಮುರಿದಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಭಾರತ ತಂಡ ಮಾಜಿ ನಾಯಕ ಮತ್ತು ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ರಾಹುಲ್ ಹರಾಜಿನಲ್ಲಿ ಭಾಗಿಯಾಗುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಐಪಿಎಲ್ ನಿಯಮಗಳ ಪ್ರಕಾರ ಯಾವುದೇ ಪ್ರಾಂಚೈಸಿಯೂ ಆಟಗಾರನನ್ನು ಬಲವಂತವಾಗಿ ಉಳಿಸಿಕೊಳ್ಳಲು ಅವಕಾಶವಿಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆಯಂತೆಯೇ ರಿಟೈನ್ಷನ್ ಪ್ರಕ್ರಿಯೆ ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಂಚೈಸಿ ರಾಹುಲ್ ನಿರ್ಧಾರವನ್ನು ಗೌರವಿಸಿದೆ ಎಂದಿದ್ದಾರೆ.
ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ಚಿನ್ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಂಡ ನಂತರದಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೆ.ಎಲ್.ರಾಹುಲ್ ಅವರಿಗೆ ನಾಯಕತ್ವವನ್ನು ನೀಡಿತ್ತು. ಕಳೆದ ಎರಡೂ ಸಿಸನ್‌ನಲ್ಲಿಯೂ ರಾಹುಲ್ ಅತ್ಯದ್ಬುತವಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆದರೆ ತಂಡವನ್ನು ಗೆಲುವಿನ ದಡ ಸಾಗಿಸುವಲ್ಲಿ ಎಡವಿದ್ದರು. ಇದೀಗ ಪಂಜಾಬ್ ಕಿಂಗ್ಸ್ ತಂಡದಿಂದ ಹೊರಬಂದ ನಂತರ ರಾಹುಲ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ ಪೋಟೋವೊಂದನ್ನು ಟ್ವೀಟ್ ಮಾಡಿದ್ದು, ಇದು ಉತ್ತಮ ಸವಾರಿ, ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ.
It was a good ride, thank you for the love ❤️ see you on the other side 🙌🏻 @PunjabKingsIPL pic.twitter.com/fFKtlOqghR
— K L Rahul (@klrahul11) December 1, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದ ಕೆ.ಎಲ್.ರಾಹುಲ್ ಅದ್ಬುತ ಫಾರ್ಮ್‌ನಲ್ಲಿ ಇದ್ದಾಗಳು ಆರ್‌ಸಿಬಿ ತಂಡ ಕೆ.ಎಲ್.ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿರಲಿಲ್ಲ. ಹೀಗಾಗಿಯೇ IPL 2018 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ KL ರಾಹುಲ್ ಅವರನ್ನು ಬರೋಬ್ಬರಿ 11 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ರಾಹುಲ್ ಅದ್ಬುತ ಆಟ ಐಪಿಎಲ್‌ನಲ್ಲಿ ಗಮನ ಸೆಳೆದಿತ್ತು.
ನವೆಂಬರ್ 30 ರಂದು ಪಂಜಾಬ್ ಕಿಂಗ್ಸ್ ತಮ್ಮ ರಿಟೇನ್ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಈ ಪಟ್ಟಿಯಲ್ಲಿ ಕೆ.ಎಲ್. ರಾಹುಲ್ ಹೆಸರನ್ನು ಪಂಜಾಬ್ ತಂಡ ಕೈಬಿಟ್ಟಿದೆ. ಅಲ್ಲದೇ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ 12 ಕೋಟಿ ಮತ್ತು ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು 4 ಕೋಟಿ ಕೊಟ್ಟು ಉಳಿಸಿಕೊಂಡಿದೆ.
ಯಾವ ತಂಡದಲ್ಲಿ ಯಾವ ಆಟಗಾರು ಉಳಿದುಕೊಂಡಿದ್ದಾರೆ :
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ – 15 ಕೋಟಿ ರೂ
ಗ್ಲೆನ್ ಮ್ಯಾಕ್ಸ್‌ವೆಲ್ – 11 ಕೋಟಿ ರೂ
ಮೊಹಮ್ಮದ್ ಸಿರಾಜ್ – 7 ಕೋಟಿ ರೂ
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ – 16 ಕೋಟಿ ರೂ
ಜಸ್ಪ್ರೀತ್ ಬುಮ್ರಾ – 12 ಕೋಟಿ
ಸೂರ್ಯ ಕುಮಾರ್ ಯಾದವ್- 8 ಕೋಟಿ
ಕೀರಾನ್ ಪೊಲಾರ್ಡ್ – 6 ಕೋಟಿ
ಪಂಜಾಬ್ ಕಿಂಗ್ಸ್:
ಮಯಾಂಕ್ ಅಗರ್ವಾ- 12 ಕೋಟಿ
ಅರ್ಷದೀಪ್ ಸಿಂಗ್- 4 ಕೋಟಿ
ಸನ್ ರೈಸಸ್ ಹೈದರಾಬಾದ್:
ಕೇನ್ ವಿಲಿಯಮ್ಸನ್- 14 ಕೋಟಿ
ಸಮದ್–4 ಕೋಟಿ
ಉಮ್ರಾನ್ ಮಲ್ಲಿಕ್ – 4 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್:
ರವೀಂದ್ರ ಜಡೇಜಾ – 16 ಕೋಟಿ
ಎಂಎಸ್ ಧೋನಿ – 12 ಕೋಟಿ ರೂ
ರುತುರಾಜ್ ಗಾಯಕ್ವಾಡ್- 8 ಕೋಟಿ
ಮೊಯಿನ್ ಅಲಿ- 6 ಕೋಟಿ
ದೆಹಲಿ ಕ್ಯಾಪಿಟಲ್ಸ್:
ರಿಷಬ್ ಪಂತ್- 16 ಕೋಟಿ
ಅಕ್ಸರ್ ಪಟೇಲ್- 12 ಕೋಟಿ
ಪೃಥ್ವಿ ಶಾ – 8 ಕೋಟಿ
ಆಂಡ್ರೆ ನೋರ್ಟ್ಜೆ- 6 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್:
ಆಂಡ್ರೆ ರಸೆಲ್ – 12 ಕೋಟಿ
ವರುಣ್ ಚಕ್ರವರ್ತಿ- 8 ಕೋಟಿ
ವೆಂಕಟೇಶ್ ಅಯ್ಯರ್ – 8 ಕೋಟಿ
ಸುನಿಲ್ ನರೈನ್ – 6 ಕೋಟಿ ರೂ
ರಾಜಸ್ಥಾನ್ ರಾಯಲ್ಸ್:
ಸಂಜು ಸ್ಯಾಮ್ಸನ್- 14 ಕೋಟಿ
ಜೋಸ್ ಬಟ್ಲರ್- 10 ಕೋಟಿ
ಯಶಸ್ವಿ ಜೈಸ್ವಾಲ್- 4 ಕೋಟಿ.
ಇದನ್ನೂ ಓದಿ : IPL Retention : ಕೆಎಲ್ ರಾಹುಲ್ ನಿರ್ಗಮನ : ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ನಾಯಕ
ಇದನ್ನೂ ಓದಿ : IPL 2022 Retained Players : ಯಾರು ಇನ್, ಯಾರು ಔಟ್ : ಇಲ್ಲಿದೇ ರಿಟೈನ್ಡ್ ಆಟಗಾರರ ಕಂಪ್ಲೀಟ್ ಡಿಟೈಲ್ಸ್
( IPL 2022 retained : KL Rahul Finally break the silence after out from Punjab Kings)