IPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್‌ ಪಂತ್‌ ನಾಯಕ

IPL 2024 Rishabh Pant : ಅಪಘಾತಕ್ಕೆ ಒಳಗಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ರಿಷಬ್‌ ಪಂತ್‌ ಮುಂದಿನ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕರಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ. ಈ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಘೋಷಿಸಿದ್ದಾರೆ.

IPL 2024 Rishabh Pant : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2024) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌  (Delhi Capitals) ತಂಡವನ್ನು ಯಾರು ಮುನ್ನೆಡೆಸುತ್ತಾರೆ ಅನ್ನೋ ಗೊಂದಲಗಳಿಗೆ ತೆರೆಬಿದ್ದಿದೆ. ಅಪಘಾತಕ್ಕೆ ಒಳಗಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ರಿಷಬ್‌ ಪಂತ್‌ ಮುಂದಿನ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕರಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ. ಈ ಕುರಿತು ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಘೋಷಿಸಿದ್ದಾರೆ.

IPL 2024 Rishabh Pant is the captain for Delhi Capitals
Image Credit to Original Source

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಪಂತ್ 2022ರ ಡಿಸೆಂಬರ್ ನಲ್ಲಿ ಕಾರು ಅಪಾತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಅಪಘಾತದಲ್ಲಿ ಉಂಟಾದ ಗಾಯದಿಂದಾಗಿ ಅವರು ಚೇತರಿಸಿಕೊಳ್ಳಲು ಹಲವು ಸಮಯಗಳೇ ಬೇಕಾಯಿತು. ಕಳೆದ ಬಾರಿ ಐಪಿಎಲ್‌ನಿಂದ ದೂರ ಉಳಿದಿದ್ದ ರಿಷನ್‌ ಪಂತ್‌, ಈ ಬಾರಿ ಐಪಿಎಲ್‌ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ ಭಾರತದಲ್ಲೇ ನಡೆಯಲಿದೆ ಐಪಿಎಲ್ 2024 : ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್

ರಿಷಬ್‌ ಪಂತ್‌ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡದ ಡೇವಿಡ್‌ ವಾರ್ನರ್‌ ತಂಡವನ್ನು ಮುನ್ನೆಡೆಸಿದ್ದರು. ಆದರೆ ಈ ಬಾರಿ ರಿಷಬ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನೆಡೆಸಲಿದ್ದಾರೆ ಎಂದು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಘೋಷಣೆ ಮಾಡಿದೆ. ಈ ಕುರಿತು ಮಾತನಾಡಿರುವ ಡಿಸಿ ಸಹ ಮಾಲೀಕ ಪಾರ್ಥ ಜಿಂದಾಲ್‌, ರಿಷಬ್‌ ಪಂತ್‌ ಈ ಬಾರಿ ಐಪಿಎಲ್‌ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

IPL 2024 Rishabh Pant is the captain for Delhi Capitals
Image Credit to Original Source

ರಿಷಬ್‌ ಪಂತ್‌ ಕೇವಲ ಬ್ಯಾಟ್ಸ್‌ಮನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ಹೊರುವುದಿಲ್ಲ. ಆರಂಭಿಕ ಪಂದ್ಯದಿಂದಲೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ರಿಷಬ್‌ ಪಂತ್‌ ನಾಯಕನಾಗಿ ಮುನ್ನೆಡೆಸುತ್ತಾರೆ. ಅಲ್ಲದೇ ಪಂತ್‌ IPL 2024 ಕ್ಕೆ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆ. ಆರಂಭಿಕ ಏಳು ಪಂದ್ಯಗಳಲ್ಲಿ ಅವರು ಬ್ಯಾಟ್ಸ್‌ಮನ್‌ ಆಗಿ ಮಾತ್ರವೇ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ಬೇಕಾ ಬೇಡವೇ ಅನ್ನೋ ಬಗ್ಗೆ ನಿರ್ಧಾರವಾಗಲಿದೆ.

ಇದನ್ನೂ ಓದಿ : T20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ರೋಹಿತ್‌ ಶರ್ಮಾ ನಾಯಕ : ಭಗ್ನವಾಯ್ತು ಹಾರ್ದಿಕ್‌ ಪಾಂಡ್ಯ ಕನಸು

ಇನ್ನು ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನಾರ್ಟ್ಜೆ ಅವರ ಫಿಟ್ನೆಸ್‌ ಬಗ್ಗೆ ಅಪ್ಡೇಟ್ಸ್‌ ಕೊಟ್ಟಿದ್ದಾರೆ. ಅನ್ರಿಚ್ ನಾರ್ಟ್ಜೆ ಚೇತರಿಸಿಕೊಳ್ಳುತ್ತಿದ್ದು, ಪ್ರಸ್ತುತ 80% ತೀವ್ರತೆಯಲ್ಲಿ ಬೌಲಿಂಗ್ ಮಾಡುತ್ತಿದ್ದು, ಮುಂಬರುವ ವಾರದಲ್ಲಿ ಅದನ್ನು 100% ಗೆ ಹೆಚ್ಚಿಸಲು ಯೋಜಿಸಿದ್ದಾರೆ. ರಿಷಬ್‌ ಪಂತ್‌ ಪುನರಾಗಮನ ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬಲವನ್ನು ಹೆಚ್ಚಿಸಿದ್ದು, ಇಂಗ್ಲೆಂಡ್‌ ತಂಡದ ಹ್ಯಾರಿ ಬ್ರೂಕ್ ನಂ.6 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಐಪಿಎಲ್‌ 2024ಗೆ ಹಾರ್ದಿಕ್‌ ಪಾಂಡ್ಯ ಎಂಟ್ರಿ ಫಿಕ್ಸ್ : ಎನ್‌ಸಿಎನಲ್ಲಿ ಅಭ್ಯಾಸ ಪಂದ್ಯವಾಡಿದ ಮುಂಬೈ ಇಂಡಿಯನ್ಸ್ ನಾಯಕ

ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರ ಮಿಚೆಲ್‌ ಮಾರ್ಷ್‌ ಆಸ್ಟ್ರೇಲಿಯಾ T20I ತಂಡದ ನಾಯಕನ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಈ ಬಾರಿಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸಮತೋಲದಿಂದ ಕೂಡಿದ್ದು, ಐಪಿಎಲ್‌ ಟ್ರೋಫಿ ಗೆಲ್ಲುವ ಭರವಸೆಯನ್ನು ಮೂಡಿಸಿದೆ.

IPL 2024: Rishabh Pant is the captain for Delhi Capitals

Comments are closed.