IPL 2024 Kevin Pietersen : ಕೆವಿನ್ ಪೀಟರ್ಸನ್ ಇಂಗ್ಲೆಂಡ್ ತಂಡದ ಮಾಜಿ ಆಟಗಾರ. ಎಲ್ಲಾ ಮಾದರಿಯ ಕ್ರಿಕೆಟ್ ವಿದಾಹ ಹೇಳಿದ್ದು ಸದ್ಯ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಂಡಿದ್ದಾರೆ. ನಿವೃತ್ತಿ ಘೋಷಿಸಿದ್ದರೂ ಕೂಡ ಬ್ಯಾಟಿಂಗ್‌ನಲ್ಲಿ ಪೀಟರ್ಸನ್ ತಮ್ಮ ಹಿಂದಿನ ಆಟವನ್ನೇ ಪ್ರದರ್ಶಿಸುತ್ತಿದ್ದಾರೆ. ಈ ನಡುವಲ್ಲೇ ಪೀಟರ್ಸನ್ ಐಪಿಎಲ್ (Indian Premier League, )ಆಡುವ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಕೆವಿನ್ ಪೀಟರ್ಸನ್ ಸದ್ಯ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಂಡಿಯಾ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ಪೀಟರ್ಸನ್ ಕೇವಲ 27 ಎಸೆತಗಳಲ್ಲಿ ಐದು ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿದಂತೆ 56 ರನ್ ಗಳಿಸಿದ್ದರು. ಈ ಮೂಲಕ ತಮ್ಮ ಹಿಂದಿನ ಬ್ಯಾಟಿಂಗ್ ವೈಭವವನ್ನು ಮೆರೆದಿದ್ದಾರೆ.

ಸ್ಪೋಟಕ ಬ್ಯಾಟಿಂಗ್ ನಡೆಸಿದ ಬೆನ್ನಲ್ಲೇ ಪೀಟರ್ಸನ್ ತಾನು ಐಪಿಎಲ್ ಆಡಲು ಸಮರ್ಥ ಎಂದಿದ್ದಾರೆ. ಐಪಿಎಲ್ ಹರಾಜು ಶೀಘ್ರದಲ್ಲಿಯೇ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಐಪಿಎಲ್ ನಲ್ಲಿ ಆಡುವ ಆಸಕ್ತಿ ವ್ಯಕ್ತಪಡಿಸಿದ್ದು, ತಾವು ಹರಾಜಿನಲ್ಲಿ ಹೇಗೆ ಪಾಲ್ಗೊಳ್ಳಲಿ ಎಂದಿದ್ದಾರೆ.
ಇದನ್ನೂ ಓದಿ : ಭಾರತ vs ದಕ್ಷಿಣ ಆಫ್ರಿಕಾ T20I ಸರಣಿ : ಲುಂಗಿ ಎನ್‌ಗಿಡಿ ಔಟ್
ತಮ್ಮ ಬ್ಯಾಟಿಂಗ್ ಕುರಿತ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ. ಐಪಿಎಲ್ ಹರಾಜಿನಲ್ಲಿ ನಾನು ಹೇಗೆ ಪ್ರವೇಶಿಸಬಹುದು ? ಎಂದು ತಮಾಷೆಯಾಗಿ ಕೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದ ಕೆವಿನ್ ಪೀಟರ್ಸನ್ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಇಂಗ್ಲೆಂಡ್ ಕಂಡ ಶ್ರೇಷ್ಟ ನಾಯಕರಲ್ಲಿ ಇವರೂ ಒಬ್ಬರು.

ಕೆವಿನ್ ಪೀಟರ್ಸನ್ ಟಿಂಗ್ಹ್ಯಾಮ್ಶೈರ್, ಹ್ಯಾಂಪ್‌ಶೈರ್, ಸರ್ರೆ ಕೌಂಟಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರಾಗಿದ್ದರು. ಅಲ್ಲದೇ ಸನ್‌ರೈಸಸ್ ಹೈದ್ರಾಬಾದ್ ತಂಡದಲ್ಲಿಯೂ ಆಡಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡ, ಕೆರೆಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೈಂಟ್ ಲೂಸಿಯಾ ಝೌಕ್ಸ್ಗೆ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ : BCCI WPL 2024 : ಮಹಿಳಾ ಪ್ರೀಮಿಯರ್ ಲೀಗ್‌ಗೆ ಹೊಸ ರೂಪ : WPL ಸಮಿತಿ ರಚಿಸಿದ ಬಿಸಿಸಿಐ
ಇಂಗ್ಲೆಂಡ್ ತಂಡದ ಪರ ಪಟ್ಟು 136 ಏಕದಿನ ಪಂದ್ಯಗಳನ್ನು ಆಡಿದ್ದು 4,4460 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 25 ಅರ್ಧ ಶತಕ ಒಳಗೊಂಡಿದೆ. 104 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆವಿನ್ ಪೀಟರ್ಸನ್ 8,181 ರನ್ ಗಳಿಸಿದ್ದಾರೆ. 23 ಶತಕ ಹಾಗೂ 35 ಅರ್ಧ ಶತಕ ಬಾರಿಸಿದ್ದಾರೆ. ಇನ್ನು 217 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 16,522 ರನ್ ಸಿಡಿಸಿದ್ದಾರೆ.
ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲಿ ಕೇವಿನ್ ಪೀಟರ್ಸನ್ ಮಿಂಚು ಹರಿಸಿದ್ದಾರೆ. 2010ರ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ತಂಡ ಶ್ರೇಷ್ಟ ಆಟಗಾರರಲ್ಲಿ ಒಬ್ಬರಾಗಿರುವ ಕೆವಿನ್ ಪೀಟರ್ಸನ್ ಇದೀಗ ಐಪಿಎಲ್ ಆಡುವ ಆಶಯ ವ್ಯಕ್ತಪಡಿಸಿದ ಬೆನ್ನಲ್ಲೇ ಸಾಕಷ್ಟು ಮಂದಿ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ವಿಶೇಷ ಕಾಳಜಿ : ಏನಿದು 18 ವಾರಗಳ ವಿಶಿಷ್ಟ ಕಾರ್ಯಕ್ರಮ
IPL 2024 Kevin Pietersen as IPL player How to participate in IPL 2024 auction says ex-cricketer