Manish Pandey : ಅವನು ಕರ್ನಾಟಕ ಕ್ರಿಕೆಟ್’ನ golden boy. ಕರ್ನಾಟಕದ ಸಾಲು ಸಾಲು ವಿಕ್ರಮಗಳ ವಿಜಯಶಿಲ್ಪಿ ಆಗಿದ್ದವನು..! ಈಗಿನ ದಿಗ್ಗಜರು ಐಪಿಎಲ್’ನಲ್ಲಿ ಕಣ್ಣು ಬಿಡುವ ಮೊದಲೇ ಶತಕ ಚಚ್ಚಿ ಬಿಸಾಕಿದವನು..! ದೇಶೀಯ ಕ್ರಿಕೆಟ್’ನ ದೈತ್ಯ ಮುಂಬೈ ತಂಡವನ್ನು ಅಟ್ಟಾಡಿಸಿ ಹೊಡೆದು ಹಾಕಿದ್ದವನು..! ಆತನ ಹಿಂದೆ ಒಂದು ಚರಿತ್ರೆ ಇದೆ.. ಆತ ಸಾಮಾನ್ಯನಲ್ಲ.. ಕರ್ನಾಟಕ ಕ್ರಿಕೆಟ್ ಕಂಡ ಅಸಾಮಾನ್ಯ ಕ್ರಿಕೆಟಿಗ. A out and out ಮ್ಯಾಚ್ ವಿನ್ನರ್..! ಹೇಗಿದ್ದವನು ಹೇಗಾದ ನೋಡಿ..!

2014ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಧ್ವಂಸಕ 94 ರನ್ ಬಾರಿಸಿ ಕೆಕೆಆರ್ ತಂಡಕ್ಕೆ ಐಪಿಎಲ್ ಟ್ರೋಫಿ ಗೆಲ್ಲಿಸಿ ಕೊಟ್ಟಿದ್ದ ಮನೀಶ್ ಪಾಂಡೆ, ಈ ಬಾರಿ ಕಪ್ ಗೆದ್ದ ಕೆಕೆಆರ್ ತಂಡದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದವನಾಗಿಬಿಟ್ಟ. ಮನೀಶ್ ಪಾಂಡೆಗೆ ಇದ್ದ ಸಾಮರ್ಥ್ಯಕ್ಕೆ ಆತ ಇಷ್ಟು ಹೊತ್ತಿಗೆ ಭಾರತೀಯ ಕ್ರಿಕೆಟ್’ನ ಲೆಜೆಂಡ್ ಆಗಿರಬೇಕಿತ್ತು. Unlucky ಕ್ರಿಕೆಟರ್. ಬೇರೆಯವರಿಗೆ ಸಿಕ್ಕ ಅವಕಾಶಗಳು ಪಾಂಡೆಗೆ ಸಿಗಲಿಲ್ಲ. ಆತನ ಬೆನ್ನ ಹಿಂದೆ ಯಾವ ‘ಲಾಬಿ’ಯೂ ಇರಲಿಲ್ಲ. ಯಾವ ‘ಗಾಡ್ ಫಾದರ್’ನ ಕೈ ಆತನ ಹೆಗಲ ಮೇಲಿರಲಿಲ್ಲ. ತನ್ನನ್ನು ಪ್ರೊಮೋಟ್ ಮಾಡಲು ಅವನು ಯಾವ PR agencyಯನ್ನೂ ಜೊತೆಗಿಟ್ಟುಕೊಂಡವನಲ್ಲ. ಮನೀಶ್ ಪಾಂಡೆ ಆಡಿದ್ದೆಲ್ಲವೂ pure meritನೊಂದಿಗೆ.
ಇದನ್ನೂ ಓದಿ : Team India Head Coach : ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಧಾನಿ ಮೋದಿ, ಅಮಿತ್ ಶಾ!
ಈ ಐಪಿಎಲ್ ಕಥೆ ಹಾಗಿರಲಿ… ಕರ್ನಾಟಕ ಪರ ಮನೀಶ್ ಪಾಂಡೆಯ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿರುತ್ತಿತ್ತು. ಕರ್ನಾಟಕ ಪರವಾಗಿ ಆತ ಆಡಿದ ನಂಬಲಸಾಧ್ಯ ಇನ್ನಿಂಗ್ಸ್’ಗಳು, ಗೆಲ್ಲಿಸಿದ ಪಂದ್ಯಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ರೋಮಾಂಚನಗೊಳ್ಳುತ್ತದೆ. ಮನೀಶ್ ಪಾಂಡೆಯನ್ನು ತುಂಬಾ ಹತ್ತಿರದಿಂದ ನೋಡುತ್ತಾ ಬಂದಿರುವ ನನಗೆ ಈ ಬಾರಿ ಐಪಿಎಲ್’ನಲ್ಲಿ ಆತನನ್ನು ಕಡೆಗಣಿಸಿದ ರೀತಿಯನ್ನು ನೋಡಿ ಬೇಸರವಾಯಿತು.

ಇಡೀ ಟೂರ್ನಮೆಂಟ್’ನಲ್ಲಿ ಆಡಲು ಸಿಕ್ಕಿದ್ದು ಒಂದೇ ಒಂದು ಚಾನ್ಸ್. ಅಲ್ಲಿ 31 ಎಸೆತಗಳಲ್ಲಿ 42 ರನ್. ಕೆಟ್ಟದಾಗಿ ಏನೂ ಆಡಿರಲಿಲ್ಲ. ಆದರೂ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಮತ್ತೊಂದು ಪಂದ್ಯದಲ್ಲಿ ‘’ನೀನೇ ಇವತ್ತು ಇಂಪ್ಯಾಕ್ಟ್ ಪ್ಲೇಯರ್, ರೆಡಿ ಇರು’’ ಎಂದಿದ್ದಕ್ಕೆ ಪ್ಯಾಡ್ ಕಟ್ಟಿ ತಲೆಗೆ ಹೆಲ್ಮೆಟ್ ಏರಿಸಿ ಸಿದ್ಧನಾಗಿ ಕೂತಿದ್ದ, ಕೊನೆಯವರೆಗೂ ಕೂತೇ ಇದ್ದ. ಕಾರಣ, ಪಾಂಡೆಯ ಮುಂದೆ average ಆಟಗಾರನೊಬ್ಬ ಇಂಪ್ಯಾಕ್ಟ್ ಆಟಗಾರನಾಗಿ ಆಡಿ ಬಿಟ್ಟ.
ಇದನ್ನೂ ಓದಿ : Yuvraj Singh 2.0 Loading: ಯುವರಾಜ್ ಸಿಂಗ್ ತಯಾರು ಮಾಡಿದ ಹುಡುಗ ಅಭಿಷೇಕ್ ಶರ್ಮಾ ಐಪಿಎಲ್’ನಲ್ಲಿ ಧೂಳೆಬ್ಬಿಸಿದ!
ಮನೀಶ್ ಪಾಂಡೆ ಕರ್ನಾಟಕ ತಂಡದ ನಾಯಕನಾಗಿದ್ದವನು. ಕರ್ನಾಟಕಕ್ಕೆ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟವನು. ನಮ್ಮ ರಾಜ್ಯದ ಇಂಥಾ ಒಬ್ಬ ದಿಗ್ಗಜ ಐಪಿಎಲ್ auctionನಲ್ಲಿ ಅನ್ ಸೋಲ್ಡ್ ಆಗಿದ್ದ. ಆದರೆ ಸೆಕೆಂಡ್ ರೌಂಡ್’ನಲ್ಲಿ pick ಮಾಡಿದ್ದು ಶಾರುಖ್ ಖಾನ್ ಅವರ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ. ಅವರಿಗೆ ಗೊತ್ತಿತ್ತು ಮನೀಶ್ ಪಾಂಡೆ ಸಾಮರ್ಥ್ಯ ಏನು ಎಂಬುದು. ಆಪತ್ತಿಗಾದಾನೆಂದು ತಂಡಕ್ಕೆ ಸೇರಿಸಿಕೊಂಡರು. ಆದರೆ ಪಾಂಡೆಗೆ ಸಿಗಬೇಕಿದ್ದ ಅವಕಾಶ, ಕೊಡಬೇಕಿದ್ದ ಗೌರವವನ್ನು ಅವರು ಕೊಡಲಿಲ್ಲ.
ಇದನ್ನೂ ಓದಿ : Shikhar Dhawan To Marry Mithali Raj? ಮಿಥಾಲಿ ರಾಜ್ ಜೊತೆ ಶಿಖರ್ ಧವನ್ ಮದುವೆ..? ವಿವಾಹದ ಬಗ್ಗೆ ಗಬ್ಬರ್ ಹೇಳಿದ್ದೇನು..?