Shikhar Dhawan to marry Mithali Raj? ಮಿಥಾಲಿ ರಾಜ್ ಜೊತೆ ಶಿಖರ್ ಧವನ್ ಮದುವೆ..? ವಿವಾಹದ ಬಗ್ಗೆ ಗಬ್ಬರ್ ಹೇಳಿದ್ದೇನು..?

Shikhar Dhawan- Mithali Raj :  ಟೀಮ್ ಇಂಡಿಯಾದ ಮಾಜಿ ಎಡಗೈ ಓಪನರ್ ಶಿಖರ್ ಧವನ್ (Shikhar Dhawan) ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ (Mithali Raj) ಅವರನ್ನು ಮದುವೆಯಾಗಲಿದ್ದಾರಾ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Shikhar Dhawan- Mithali Raj :  ಟೀಮ್ ಇಂಡಿಯಾದ ಮಾಜಿ ಎಡಗೈ ಓಪನರ್ ಶಿಖರ್ ಧವನ್ (Shikhar Dhawan) ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ (Mithali Raj) ಅವರನ್ನು ಮದುವೆಯಾಗಲಿದ್ದಾರಾ? ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೊದಲ ಪತ್ನಿಯಿಂದ ದೂರವಾಗಿರುವ 38 ವರ್ಷದ ಶಿಖರ್ ಧವನ್ ಈಗ ಏಕಾಂಗಿ. ಮತ್ತೊಂದೆಡೆ 41 ವರ್ಷದ ಮಿಥಾಲಿ ರಾಜ್ ಇನ್ನೂ ಮದುವೆಯಾಗಿಲ್ಲ. ಇಬ್ಬರೂ ಸಿಂಗಲ್ ಆಗಿರುವ ಕಾರಣ, ಮಿಂಗಲ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Shikhar Dhawan to marry Mithali Raj What did Dhawan say about marriage
Image Credit : IPL

ಶಿಖರ್ ಧವನ್ 2012ರಲ್ಲಿ ಆಯೆಶಾ ಮುಖರ್ಜಿ ಎಂಬ ಭಾರತೀಯ ಮೂಲದ ಆಸ್ಟ್ರೇಲಿಯಾ ಮಹಿಳೆ ಜೊತೆ 2012ರಲ್ಲಿ ಸಪ್ತಪದಿ ತುಳಿದಿದ್ದರು. ಆ ದಂಪತಿಗಳ ಜೊರಾವರ್ ಧವನ್ ಎಂಬ ಹತ್ತು ವರ್ಷ ವಯಸ್ಸಿನ ಮಗನಿದ್ದಾನೆ. ಶಿಖರ್ ಧವನ್ ಜೊತೆಗಿನ ಮದುವೆ ಆಯೆಷಾ ಮುಖರ್ಜಿಗೆ 2ನೇ ವಿವಾಹವಾಗಿತ್ತು. ಶಿಖರ್ – ಆಯೆಷಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದ ಕಾರಣ, ಎರಡು ವರ್ಷಗಳ ಹಿಂದೆ ಇಬ್ಬರೂ ದೂರವಾಗಿದ್ದರು.

ಎಡಗೈ ಬ್ಯಾಟ್ಸ್’ಮನ್ ಶಿಖರ್ ಧವನ್ ಭಾರತ ಪರ 34 ಟೆಸ್ಟ್, 167 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿದ್ದು, 24 ಶತಕಗಳ ಸಹಿತ 10,867 ರನ್ ಗಳಿಸಿದ್ದಾರೆ. ಮಹಿಳಾ ಕ್ರಿಕೆಟ್’ನ ಲೆಜೆಂಡ್ ಕ್ರಿಕೆಟರ್ ಆಗಿರುವ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 8 ಶತಕ ಹಾಗೂ 68 ಅರ್ಧಶತಕಗಳ ನೆರವಿನಿಂದ 10,868 ರನ್ ಗಳಿಸಿದ್ದಾರೆ.

ಇದನ್ನೂ ಓದಿ : IPL Final 2024: ಇಂದು ಐಪಿಎಲ್ ಫೈನಲ್: ಕೆಕೆಆರ್ Vs ಸನ್’ರೈಸರ್ಸ್, ಯಾರು ಬಲಿಷ್ಠರು ? ಯಾರು ಕಪ್ ಗೆಲ್ತಾರೆ? ಇಲ್ಲಿದೆ ಫೈನಲ್’ನ ಇಂಚಿಂಚೂ ಮಾಹಿತಿ !

ಮಿಥಾಲಿ ರಾಜ್ ಜೊತೆಗಿನ ವಿವಾಹದ ಬಗ್ಗೆ ಎದ್ದಿರುವ ಊಹಾಪೋಹದ ಬಗ್ಗೆ ಪ್ರತಿಕ್ರಿಯಿಸಿರುವ ಶಿಖರ್ ಧವನ್, ‘’ಇದೆಲ್ಲಾ ಸುಳ್ಳು ಸುದ್ದಿ, ಅಂತಹ ಯಾವ ಆಲೋಚನೆಯೂ ನಮ್ಮ ಮುಂದಿಲ್ಲ’’ ಎಂದಿದ್ದಾರೆ.  ಭಾರತ ಮಹಿಳಾ ತಂಡದ ಮಾಜಿ ನಾಯಕಿಯಾಗಿರುವ ಮಿಥಾಲಿ ರಾಜ್‌ ಭಾರತ ಕಂಡ ಶ್ರೇಷ್ಟ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಹಲವು ವರ್ಷಗಳ ಭಾರತ ಮಹಿಳಾ ಕ್ರಿಕೆಟ್‌ ತಂಡವನ್ನು ಅವರು ಮುನ್ನೆಡೆಸಿದ್ದರು.

Shikhar Dhawan to marry Mithali Raj What did Dhawan say about marriage
Image Credit : BCCI

ಇದನ್ನೂ ಓದಿ : Devdutt Padikkal: ಕನ್ನಡಿಗನೆಂದು ಸಪೋರ್ಟ್ ಮಾಡಿದರೂ, ಆತ ರಾಹುಲ್ ನಂಬಿಕೆ ಉಳಿಸಿಕೊಳ್ಳಲಿಲ್ಲ..!

ಟೀಂ ಇಂಡಿಯಾದ ಆಟಗಾರ ಶಿಖರ್‌ ಧವನ್‌ ಭಾರತ ಕ್ರಿಕೆಟ್‌ ತಂಡದ ಸದಸ್ಯರಾಗಿದ್ದು, ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಭಾಗವಾಗಿದ್ದರು. ಒಂದು ಕಾಲದಲ್ಲಿ ಟೀಂ ಇಂಡಿಯಾದ ಖಾಯಂ ಆರಂಭಿಕ ಆಟಗಾರನಾಗಿ ಶಿಖರ್‌ ಧವನ್‌ ಗುರುತಿಸಿಕೊಂಡಿದ್ದರು. ಅಲ್ಲದೇ ಕೆಲವು ಟೂರ್ನಿಗಳಲ್ಲಿ ಭಾರತ ಕ್ರಿಕೆಟ್‌ ತಂಡವನ್ನು ಅವರು ಮುನ್ನೆಡೆಸಿದ್ದರು.

ಇದನ್ನೂ ಓದಿ : Virat Kohli : ಅವರು ನಿನ್ನ ಕನಸಿಗೆ ಕೊಳ್ಳಿ ಇಟ್ಟರು, ಅವರನ್ನು ಕ್ಷಮಿಸಿ ಬಿಡು ವಿರಾಟ್..’’

Shikhar Dhawan to marry Mithali Raj ? What did Dhawan say about marriage?

Comments are closed.