ಭಾನುವಾರ, ಏಪ್ರಿಲ್ 27, 2025
HomeSportsCricketIPL 2024 : ಐಪಿಎಲ್ 2024 ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್ ಗಾಯಕ್ವಾಡ್ ನಾಯಕ

IPL 2024 : ಐಪಿಎಲ್ 2024 ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್ ಗಾಯಕ್ವಾಡ್ ನಾಯಕ

- Advertisement -

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (indian premier league) ಈ ಬಾರಿ ಹಲವು ಪ್ರಾಂಚೈಸಿಗಳು ಹೊಸ ನಾಯಕರೊಂದಿಗೆ ಕಣಕ್ಕೆ ಇಳಿಯುತ್ತಿದೆ. ಚೆನ್ನೈ ಸೂಪರ್‌ ಕಿಂಗ್‌ ತಂಡಕ್ಕೆ ಕೂಡ ಹೊಸ ನಾಯಕ ಎಂಟ್ರಿ ಕೊಡುವ ಸಾಧ್ಯತೆಯಿದೆ. ಭಾರತ ಕ್ರಿಕೆಟ್‌ ತಂಡದ ಶ್ರೇಷ್ಟ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಉತ್ತರಾಧಿಕಾರಿಯಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್ ಗಾಯಕ್ವಾಡ್ (Ruturaj Gaikwad) ನೇಮಕವಾಗುವ ಸಾಧ್ಯತೆಯಿದೆ.

ಮಹಾರಾಷ್ಟ್ರ ಮೂಲದ ಋತುರಾಜ್‌ ಗಾಯಕ್ವಾಡ್‌ ಈಗಾಗಲೇ ಐಪಿಎಲ್‌ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ನೇಮಕ ಮಾಡಿತ್ತು. ಆದರೆ ಅವರು ತಂಡವನ್ನು ಮುನ್ನೆಡೆಸುವಲ್ಲಿ ವಿಫಲರಾಗಿದ್ದರು.

IPL 2024 Ruturaj Gaikwad to captain Chennai Super Kings in  indian premier league 2024
Image Credit to Original Source

ಇದೇ ಕಾರಣಕ್ಕೆ ಸರಣಿಯ ನಡುವಲ್ಲೇ ಮಹೇಂದ್ರ ಸಿಂಗ್‌ ಧೋನಿ ತಂಡವನ್ನು ಮುನ್ನೆಡೆಸಿದ್ದರು. ಕಳೆದ ಬಾರಿಯೂ ನಾಯಕತ್ವದ ಬದಲಾವಣೆಯ ಮಾತು ಕೇಳಿಬಂದಿತ್ತು. ಆದರೆ ಮಹೇಂದ್ರ ಸಿಂಗ್‌ ಧೋನಿ ಅವರು ತಂಡ ಚುಕ್ಕಾಣಿ ಹಿಡಿದು ತಂಡವನ್ನು ಮುನ್ನೆಡೆಸಿದ್ದರು. ಮಾತ್ರವಲ್ಲ ಸಿಎಸ್‌ಕೆ ತಂಡಕ್ಕೆ ಐಪಿಎಲ್‌ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು.

ಇದನ್ನೂ ಓದಿ : IPL 2024 Auction : ಐಪಿಎಲ್‌ ಆಡ್ತಾರಂತೆ ಕೆವಿನ್‌ ಪೀಟರ್ಸನ್‌ : ಹರಾಜಿಗೆ ಹೇಗೆ ಭಾಗವಹಿಸಲಿ ಎಂದ ಮಾಜಿ ಕ್ರಿಕೆಟಿಗ

ಮಹೇಂದ್ರ ಸಿಂಗ್‌ ಧೋನಿ ಗಾಯದ ಸಮಸ್ಯೆಯಿಂದಾಗಿ ಅವರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಧೋನಿ ಐಪಿಎಲ್‌ಗೆ ಗುಡ್‌ಬೈ ಹೇಳುತ್ತಾರೆ. ನಂತರ ಚೆನ್ನೈ ತಂಡದ ಮೆಂಟರ್‌ ಆಗಿ ನೇಮಕವಾಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಒಂದೊಮ್ಮೆ ಮಹೇಂದ್ರ ಸಿಂಗ್‌ ಧೋನಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದೇ ಇದ್ರೆ, ಮುಂದಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಹೊಸ ನಾಯಕನ ಎಂಟ್ರಿಯಾಗಲಿದೆ.

ಇದನ್ನೂ ಓದಿ : ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾಕ್ಕೆ ಕಂಬ್ಯಾಕ್‌ : ಜಯ್‌ ಶಾ ಕೊಟ್ರು ಗುಡ್‌ನ್ಯೂಸ್‌

ಏಷ್ಯನ್‌ ಗೇಮ್ಸ್‌ ನಲ್ಲಿ ಭಾರತ ತಂಡವನ್ನು ಮುನ್ನೆಡೆಸಿರುವ ಋತುರಾಜ್‌ ಗಾಯಕ್ವಾಡ್‌ ತಂಡಕ್ಕೆ ಗೆಲುವನ್ನು ತಂದು ಕೊಟ್ಟಿದ್ದರು. ಮಾತ್ರವಲ್ಲ ಭಾರತ ತಂಡದ ಖಾಯಂ ಆಟಗಾರನಾಗುವ ನಿಟ್ಟಿನಲ್ಲಿ ಹೆಜ್ಜ ಇಟಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕನ ಪಾತ್ರವನ್ನು ರುತುರಾಜ್ ಗಾಯಕ್ವಾಡ್ ವಹಿಸಿಕೊಳ್ಳಬಹುದೆಂಬ ಮಾತು ಕೇಳಿಬಂದಿದೆ.

IPL 2024 Ruturaj Gaikwad to captain Chennai Super Kings in  indian premier league 2024
Image Credit to Original Source

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023ರಲ್ಲಿ ಪ್ರಶಸ್ತಿಯನ್ನು ಜಯಿಸಿತ್ತು.‌ ಐಪಿಎಲ್‌ ಬೆನ್ನಲ್ಲೇ ಎಂಎಸ್ ಧೋನಿ ಕೀಹೋಲ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 42ರ ಹರೆಯದ ಭಾರತದ ಮಾಜಿ ನಾಯಕ ಐಪಿಎಲ್‌ನ ಮುಂದಿನ ಆವೃತ್ತಿಯಲ್ಲಿ ಪಾಲ್ಗೊಳ್ಳುವುದಕ್ಕೆ ಅವರು ಸಂಪೂರ್ಣ ಫಿಟ್‌ ಆಗಿದ್ದಾರೆಂಬ ಕುರಿತು ಖಚಿತತೆ ಇಲ್ಲ. ಧೋನಿ ಐಪಿಎಲ್‌ ಆಡದೇ ಇರುವ ಸಾಧ್ಯತೆಯಿದೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ರಿಯಲ್‌ ಕಿಂಗ್‌ ! 25 ವರ್ಷದಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಆದ ಕ್ರಿಕೆಟಿಗ ಕಿಂಗ್‌ ಕೊಹ್ಲಿ

26 ವರ್ಷದ ಗಾಯಕ್ವಾಡ್ 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರವಾಗಿ ಅವರು IPLಗೆ ಪಾದಾರ್ಪಣೆ ಮಾಡಿದ್ದರು. 2021 ರಲ್ಲಿ 16 ಪಂದ್ಯಗಳಲ್ಲಿ 635 ರನ್ ಗಳಿಸಿದ ನಂತರ, ಅವರು ಪಂದ್ಯಾವಳಿಯ ಅಗ್ರ ರನ್ ಸ್ಕೋರರ್ ಆಗಿ ಹೊರಹೊಮ್ಮಿದರು. 2021 ಮತ್ತು 2023 ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

2021ರಲ್ಲಿ ಐಪಿಎಲ್‌ ಋತುರಾಜ್‌ ಗಾಯಕ್ವಾಡ್‌ ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿಯೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 2022 ರ ಮೆಗಾ ಹರಾಜಿಗೆ ಮೊದಲು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿತ್ತು. ಟಿ20 ಮತ್ತು ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಋತುರಾಜ್‌ ಗಾಯಕ್ವಾಡ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರವಾಗಿ ಐಪಿಎಲ್‌ನಲ್ಲಿ ಅವರು ಒಟ್ಟು 52 ಪಂದ್ಯಗಳನ್ನು ಆಡಿದ್ದಾರೆ, 39.07 ರ ಸರಾಸರಿಯಲ್ಲಿ 1797 ರನ್ ಗಳಿಸಿದ್ದಾರೆ.

IPL 2024: Ruturaj Gaikwad to captain Chennai Super Kings in  indian premier league 2024

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular