IPL 2024 – Virat Kohli : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bangalore ) ತಂಡ ಕಳೆದ 16 ವರ್ಷಗಳಿಂದಲೂ ಐಪಿಎಲ್‌ನಲ್ಲಿ ಭಾಗವಹಿಸುತ್ತಿದೆ. ಆದರೆ ಇದುವರೆಗೂ ಐಪಿಎಲ್ ಪ್ರಶಸ್ತಿ ಗೆಲ್ಲುವ ಆರ್‌ಸಿಬಿ ಕನಸು ಇಂದಿಗೂ ನನಸಾಗಿಲ್ಲ. ಅದ್ರಲ್ಲೂ ಕಮ್ ನಮ್ದೆ ಅನ್ನೋ ಘೋಷಣೆ ಯೊಂದಿಗೆ ಐಪಿಎಲ್ 2023ರಲ್ಲಿ ಕಣಕ್ಕೆ ಇಳಿದ ಆರ್‌ಸಿಬಿ ಲೀಗ್ ಹಂತದಲ್ಲಿಯೇ ಹೊರ ನಡೆದಿತ್ತು. ಆದ್ರೀಗ ತಂಡದಲ್ಲಿ ಮತ್ತೆ ನಾಯಕತ್ವದ ಬದಲಾವಣೆಯ ಮಾತು ಕೇಳಿಬಂದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಪ್ರತೀ ಆವೃತ್ತಿಯಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಟವಾಗಿರುತ್ತೆ. ಆದರೆ ಪಂದ್ಯಾವಳಿಯಲ್ಲಿ ಮಾತ್ರ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ಅದ್ರಲ್ಲೂ ಕಳೆದ ಸೀಸನ್‌ನಲ್ಲಿ ಪಾಪ್ ಡುಪ್ಲೆಸಿಸ್ ನೇತೃತ್ವದಲ್ಲಿ ಆರ್‌ಸಿಬಿ ಕಣಕ್ಕೆ ಇಳಿದಿತ್ತು. ವಿರಾಟ್ ಕೊಹ್ಲಿ(Virat Kohli) ಅದ್ಬುತ ಫಾರ್ಮನಲ್ಲಿದ್ದರೂ ಕೂಡ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಆರ್‌ಸಿಬಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ : 2 ಎಸೆತ 21 ರನ್ ! ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ಟ್ರಾವೆಸ್ ಹೆಡ್
ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು ತವರು ಮೈದಾನದಲ್ಲಿ 7 ಪಂದ್ಯಗಳನ್ನು ಆಡಿದೆ. ಈ ಪೈಕಿ ಕೇವಲ 3 ಪಂದ್ಯಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಇದರಿಂದಾಗಿ ಐಪಿಎಲ್ 2024ರ ಆವೃತ್ತಿಯಲ್ಲಿ ಆರ್‌ಸಿಬಿಗೆ ಮತ್ತೆ ವಿರಾಟ್ ಕೊಹ್ಲಿ ನಾಯಕನಾಗಬೇಕು ಅನ್ನೋ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದೆ.

2019ರ ಐಪಿಎಲ್ ಪಂದ್ಯಾವಳಿಯ ನಂತರದಲ್ಲಿ ಆರ್‌ಸಿಬಿ ತಂಡ 2023ರ ನಂತರ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಪಾಪ್ ಡುಪ್ಲಸಿಸ್ ನಾಯಕತ್ವ ವಹಿಸಿಕೊಂಡು ಎರಡು ವರ್ಷಗಳ ಕಾಲ ತಂಡವನ್ನು ಮುನ್ನೆಡೆಸಿದ್ದರು ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಚಿನ್ ರವೀಂದ್ರ : ಸಚಿನ್ ದಾಖಲೆ ಸರಿಗಟ್ಟಿದ ಬೆಂಗಳೂರಿನ ಹುಡುಗ
ಫಾಫ್ ಡುಪ್ಲಸಿಸ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 27 ಪಂದ್ಯಗಳನ್ನು ಆಡಿದೆ. ಆದರೆ ಈ ಪೈಕಿ ಕೇವಲ 14 ಪಂದ್ಯ ಗಳಲ್ಲಿ ಮಾತ್ರವೇ ಜಯಗಳಿಸಿದ್ದು, ಬರೋಬ್ಬರಿ 13 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಜೊತೆಗೆ ತವರಿನಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಆದರೆ ಡುಪ್ಲಸಿಸ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮೂರು ಪಂದ್ಯಗಳಲ್ಲಿ ನಾಯಕನಾಗಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ತಂಡ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆಟದ ಪ್ರದರ್ಶನವನ್ನು ನೀಡಿದ್ದರು. ಟೀಂ ಇಂಡಿಯಾ ನಾಯಕ ರಾಗಿದ್ದ ವಿರಾಟ್ ಕೊಹ್ಲಿ ಒತ್ತಡ ಕಡಿಮೆ ಮಾಡಿಸಿಕೊಳ್ಳುವ ಸಲುವಾಗಿ ಆರ್‌ಸಿಬಿ ನಾಯಕತ್ವವನ್ನು ತ್ಯೆಜಿಸಿದ್ದರು. ಆದ್ರೀಗ ಅವರು ಟೀಂ ಇಂಡಿಯಾದ ನಾಯಕರಲ್ಲ. ಹೀಗಾಗಿ ಮತ್ತೆ ಆರ್‌ಸಿಬಿ ನಾಯಕತ್ವ ಒಲಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಭಾರತಕ್ಕೆ ಸೋಲೇ ಇಲ್ಲ, ಸತತ 6ನೇ ಗೆಲುವು : ವಿಶ್ವಕಪ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಇಂಗ್ಲೆಂಡ್
ಐಪಿಎಲ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಟೆಸ್ಟ್, ಏಕದಿನ ಹಾಗೂ ಟಿ20 ತಂಡಗಳ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಅವರ ಮೇಲೆ ಯಾವುದೇ ಒತ್ತಡ ಇಲ್ಲ. ಹೀಗಾಗಿ ಕೊಹ್ಲಿ ಮತ್ತೆ ಆರ್‌ಸಿಬಿ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ತಂಡ ಒಟ್ಟು 3 ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ಅಲ್ಲದೇ ಒಮ್ಮೆ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರೂ ಕೂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದಿಂದ ದೂರವಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದ ಬೆನ್ನಲ್ಲೇ ಇದೀಗ ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗುವ ಮಾತು ಕೇಳಿಬಂದಿದೆ.
IPL 2024 Virat Kohli is again the captain of the RCB team