IPL 2025 RCB : ಐಪಿಎಲ್‌ 2025 ಕ್ಕೆ ಆರ್‌ಸಿಬಿಯ ಅತ್ಯುತ್ತಮ ಪ್ಲೇಯಿಂಗ್ 11

IPL 2025 RCB : ಬೆಂಗಳೂರು : ಇಂಡಿಯನ್‌ ಪ್ರಿಮಿಯರ್‌ ಲೀಗ್‌ಗೆ ದಿನಗಣನೆ ಶುರುವಾಗಿದೆ. ಇದೇ ಹೊತ್ತಲ್ಲೇ ತಂಡಗಳು ಆಡುವ ಆಟಗಾರರ ಸಿದ್ದತೆಯನ್ನು ಮಾಡಿಕೊಳ್ಳುತ್ತಿವೆ. ಅದ್ರಲ್ಲೂ ರಾಯಲ್‌ […]

IPL 2025 RCB Playing 11 Royal Challangers Bengaluru full team

IPL 2025 RCB : ಬೆಂಗಳೂರು : ಇಂಡಿಯನ್‌ ಪ್ರಿಮಿಯರ್‌ ಲೀಗ್‌ಗೆ ದಿನಗಣನೆ ಶುರುವಾಗಿದೆ. ಇದೇ ಹೊತ್ತಲ್ಲೇ ತಂಡಗಳು ಆಡುವ ಆಟಗಾರರ ಸಿದ್ದತೆಯನ್ನು ಮಾಡಿಕೊಳ್ಳುತ್ತಿವೆ. ಅದ್ರಲ್ಲೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಬಲಿಷ್ಟವಾಗಿದ್ದು, ಐಪಿಎಲ್‌ 2025 ಕ್ಕೆ ಆರ್‌ಸಿಬಿಯ ಅತ್ಯುತ್ತಮ ಪ್ಲೇಯಿಂಗ್ 11 ಇಲ್ಲಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಬಾರಿ ಹೊಸ ಆಟಗಾರರ ಜೊತೆಗೆ ಕಣಕ್ಕೆ ಇಳಿಯುತ್ತಿದೆ. ಐಪಿಎಲ್ ನಲ್ಲಿ ಬಾರಿ ಬೆಂಗಳೂರು ಬಲಾಢ್ಯ ಆಟಗಾರರನ್ನು ಹೊಂದಿದ್ದು, ಆಡುವ ಬಳಗದಲ್ಲಿ ಯಾವೆಲ್ಲಾ ಆಟಗಾರರು ಕಾಣಿಸಿಕೊಳ್ಳಬಹುದು.

IPL 2025 RCB Playing 11 Royal Challangers Bengaluru full team
Image Credit to Original Source

ಐಪಿಎಲ್‌ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡವು ಈ ಬಾರಿ ಒಟ್ಟು 19 ಮಂದಿ ಆಟಗಾರರನ್ನು ಖರೀದಿ ಮಾಡಿದೆ. ಈ ಪೈಕಿ 8 ಮಂದಿ ವಿದೇಶಿ ಆಟಗಾರರಿದ್ದು, ಪ್ರಾಂಚೈಸಿಯು ಕಳೆದ ಸಾಲಿನಲ್ಲಿ ಒಟ್ಟು 3 ಮಂದಿ ಆಟಗಾರರನ್ನು ಉಳಿಸಿಕೊಂಡಿತ್ತು. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಆರ್‌ಸಿಬಿ ತಂಡವು ಒಟ್ಟು 22 ಆಟಗಾರರ ಜೊತೆಗೆ ಕಾಣಿಸಿಕೊಳ್ಳಲಿದೆ.

ಆರ್‌ಸಿಬಿಯ ಅತ್ಯುತ್ತಮ ಪ್ಲೇಯಿಂಗ್ 11

ವಿರಾಟ್ ಕೊಹ್ಲಿ , ಫಿಲ್ ಸಾಲ್ಟ್, ರಜತ್ ಪಾಟಿದಾರ್/ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಕಬ್ ಬೆಥೆಲ್, ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್ ಮತ್ತು ರಸಿಖ್ ಸಲಾಂ /ಸುಯಾಶ್ ಶರ್ಮಾ.

ರಾಯಲ್‌ ಚಾಲೆಂಜರ್ಸ್‌ ಸಂಪೂರ್ಣ ತಂಡ

ಬ್ಯಾಟಿಂಗ್: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ
ವಿಕೆಟ್‌ಕೀಪರ್‌ಗಳು: ಫಿಲ್ ಸಾಲ್ಟ್, ಜಿತೇಶ್ ಶರ್ಮಾ
ಆಲ್ ರೌಂಡರ್‌ಗಳು: ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್
ವೇಗದ ಬೌಲರ್‌ಗಳು: ಜೋಶ್ ಹ್ಯಾಜಲ್‌ವುಡ್, ರಸಿಖ್ ದಾರ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಲ್, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್
ಸ್ಪಿನ್ನರ್‌ಗಳು: ಸುಯಾಶ್ ಶರ್ಮಾ, ಮೋಹಿತ್ ರಾಠಿ‌

IPL 2025 RCB Playing 11 Royal Challangers Bengaluru full team
Image Credit to Original Source

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ಯಾರು?
ಯುವ ಆಟಗಾರ ರಜತ್ ಪಾಟೀದಾರ್‌ ಅವರನ್ನು 2025 ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕರನ್ನಾಗಿ ಘೋಷಿಸಲಾಯಿತು. 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ RCB ಯ ಈ ಹೊಸ ನಾಯಕನನ್ನು 11 ಕೋಟಿ ರೂಪಾಯಿಗೆ ಉಳಿಸಿಕೊಳ್ಳಲಾಯಿತು.

Also Read : ISPL 2025 : ಐಎಸ್‌ಪಿಎಲ್‌ 2026 ರ ಆವೃತ್ತಿಗೆ ಎರಡು ಹೊಸ ತಂಡ : ಇಂದು ಮೊದಲ ಕ್ವಾಲಿಫೈಯರ್‌ ಪಂದ್ಯ

RCB ಯ ಮುಖ್ಯ ತರಬೇತುದಾರ ಯಾರು ?

2025 ರ ಐಪಿಎಲ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನ ಮುಖ್ಯ ತರಬೇತುದಾರ ಆಂಡಿ ಫ್ಲವರ್. ಅವರನ್ನು ಬ್ಯಾಟಿಂಗ್ ಕೋಚ್ ಆಗಿ ದಿನೇಶ್ ಕಾರ್ತಿಕ್ ಮತ್ತು ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಲ್ವಿ ಸೇರಿದಂತೆ ಇತರ ಕೋಚಿಂಗ್ ಸಿಬ್ಬಂಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್ 2025 ಹರಾಜಿನಲ್ಲಿ RCB ಗಾಗಿ ಅತ್ಯಂತ ದುಬಾರಿ ಖರೀದಿದಾರ ಯಾರು ?

2025 ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗಾಗಿ ಅತ್ಯಂತ ದುಬಾರಿ ಖರೀದಿದಾರ ಜೋಶ್ ಹ್ಯಾಜಲ್‌ವುಡ್, ಅವರನ್ನು 12.50 ಕೋಟಿ ರೂಪಾಯಿಗೆ ಖರೀದಿಸಲಾಯಿತು.

IPL 2025 RCB Playing 11 Royal Challangers Bengaluru full team

Scroll to Top