ಐಪಿಎಲ್-2020 ಚೆನ್ನೈ ವಿರುದ್ದ ಗೆದ್ದು ಬೀಗಿದ ಹೈದ್ರಾಬಾದ್ : ಹ್ಯಾಟ್ರಿಕ್ ಸೋಲು ದಾಖಲಿಸಿದ ಧೋನಿ ಪಡೆ

0

ದುಬೈ: ಮಹೇಂದ್ರ ಸಿಂಗ್ ಧೋನಿ ಏಕಾಂಗಿ ಹೋರಾಟದ ನಡುವಲ್ಲೇ, ರಶೀದ್ ಖಾನ್ ಹಾಗೂ ಭುವನೇಶ್ವರ್ ಕುಮಾರ್ ದಾಳಿಗೆ ತತ್ತರಿಸಿದ ಚೆನ್ಮೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ 7 ರನ್ ಗಳ ಜಯಗಳಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಬ್ಯಾಟಿಂಗ್ ನಡೆಸಿದ ವಾರ್ನರ್‌ ಪಡೆಗೆ ಚೆನ್ಮೈ ಬೌಲರ್ ಗಳ ಆಘಾತ ನೀಡಿದ್ದಾರೆ. ಬ್ರಿಸ್ಟೋ ಸೊನ್ನೆಗೆ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ನಂತರ ಮನೀಶ್ ಪಾಂಡೆ ಹಾಗೂ ವಾರ್ನರ್ ಉತ್ತಮ ಜೊತೆಯಾಟದ ಭರವಸೆ ನೀಡಿದ್ದರೂ ಕೂಡ ಸಾಧ್ಯವಾಗಲಿಲ್ಲ.

ಸಾಲು ಸಾಲು ವಿಕೆಟ್ ಉದುರುತ್ತಿದ್ದರೂ ಕೂಡ ಅಭಿಷೇಕ್ ಶರ್ಮಾ ಮತ್ತು ಪ್ರಿಯಮ್ ಗಾರ್ಗ್ ಅವರ ಭರ್ಜರಿ ಜೊತೆಯಾಟದಿಂದ ನಿಗದಿತ 20 ಓವರ್ ಗೆ 5 ವಿಕೆಟ್ ಕಳೆದುಕೊಂಡು 164 ರನ್‌ ಗಳಿಸಿತ್ತು.

ಈ ಸವಾಲಿನ ಮೊತ್ತ ಬೆನ್ನತ್ತಿದ ಧೋನಿ ಬಳಗ ಸನ್ ರೈಸಸ್ ಬೌಲರ್ ಗಳು ಆಘಾತ ನೀಡಿದ್ರು. ಫಾಫ್ ಡು ಪ್ಲೆಸಿಸ್ (22) ಶೇನ್ ವ್ಯಾಟ್ಸನ್ (1), ಅಂಬಾಟಿ ರಾಯುಡು (8), ಕೇದಾರ್ ಜಾಧವ್ (3) ರನ್ ಗೆ ವಿಕೆಟ್ ಒಪ್ಪಿಸಿ ಹೈದರಾಬಾದ್‌ ಬೌಲರ್ ಗಳ ಎದುರು ಸಿಡಿದು ನಿಲ್ಲಲು ವಿಫಲರಾದರು.

ನಾಯಕ ಧೋನಿ ಹಾಗೂ ರವೀಂದ್ರ ಜಡೇಜಾ ತಂಡದ ಗೆಲುವಿಗೆ ಹೋರಾಟ ನಡೆಸಿದರಾದರೂ ಯಾವುದೇ ಫಲ ನೀಡಲಿಲ್ಲ. ಜಡೇಜಾ (50) ವಿಕೆಟ್ ನೀಡಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು. ಕೊನೆಯಲ್ಲಿ ಹೋರಾಟ ನಡೆಸಿದ ಧೋನಿ (47), ಸ್ಯಾಮ್ ಕರ್ರನ್(15) ರನ್ ಗಳಿಸಲಷ್ಟೇ ಶಕ್ತರಾದರು.

ರಂಭದಿಂದಲೇ ಚೆನ್ನೈ ದಾಂಢಿಗರನ್ನು ಕಟ್ಟಿಹಾಕುವಲ್ಲಿ ಸಫಲರಾದ ಹೈದರಾಬಾದ್‌ ಬೌಲರ್ ಗಳು ವಿಕೆಟ್ ಉರುಳಿಸುತ್ತಾ ಹೋದರು. ಇದರಿಂದ ಒತ್ತಡಕ್ಕೆ ಸಿಲುಕಿದ ಚೆನ್ನೈ 157 ರನ್ ಗೆ 5 ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು.

Leave A Reply

Your email address will not be published.