IPL ಗೆ ಡ್ರೀಮ್ 11 ಶೀರ್ಷಿಕೆ ಪ್ರಾಯೋಜಕತ್ವ

0

ನವದೆಹಲಿ : ದೇಶದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯಾಗಿರುವ ಐಪಿಎಲ್ ಟೂರ್ನಿಯ ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಡ್ರೀಮ್ 11 ಪಡೆದುಕೊಂಡಿದೆ.

ಐಪಿಎಲ್ ಪ್ರಾಯೋಜಕತ್ವದಿಂದ ಚೀನಾ ಮೂಲದ ಮೊಬೈಲ್ ಕಂಪೆನಿ ವಿವೋ ಹಿಂದೆ ಸರಿದ ಬೆನ್ನಲ್ಲೇ ಶೀರ್ಷಿಕೆಗಾಗಿ ಬಾರೀ ಪೈಪೋಟಿ ನಡೆಸಿತ್ತು. ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಸಂಸ್ಥೆ ಕೂಡ ಬಿಡ್ ಮಾಡುವುದಾಗಿ ಹೇಳಿತ್ತು. ಆದರೆ ಅಂತಿಮವಾಗಿ ಡ್ರೀಮ್ 11 ಸಂಸ್ಥೆ ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ.

ಡ್ರೀಮ್ 11 ಈ ಬಾರಿಯ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆಯಲು ಬಾರೀ ಮೊತ್ತದ ಹಣ ಹೂಡಿಕೆ ಮಾಡಲಿದೆ. 222 ಕೋಟಿ ರೂಪಾಯಿ ಮೊತ್ತಕ್ಕೆ ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಈ ಮೂಲಕ ಪ್ರಮುಖ ಕಂಪನಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

ಈ ಹಿಂದೆ ವಿವೋ ಕಂಪನಿ ಶೀರ್ಷಿಕೆ ಪ್ರಾಯೋಜಕತ್ವಕ್ಕೆ 440 ಕೋಟಿಯ ವಾರ್ಷಿಕ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಟೂರ್ನಿ ಆರಂಭಕ್ಕೆ 45 ದಿನಗಳಿರುವಾಗ ಅನಿವಾರ್ಯವಾಗಿ ಟೂರ್ನಿಯಿಂದ ವಿವೋ ಹೊರಗುಳಿಯುವ ನಿರ್ಧಾರಕ್ಕೆ ಬಂದಿತ್ತು.

ಹೀಗಾಗಿ ಆ ಮೌಲ್ಯದ ಅರ್ಧದಷ್ಟು ಮೊತ್ತ ಲಭಿಸಿದರೂ ಬಿಸಿಸಿಐ ಪಾಲಿಗೆ ಲಾಭ ಎಂಬ ವಿಮರ್ಶೆಗಳು ನಡೆದಿತ್ತು. ಅಂದುಕೊಂಡಂತೆಯೇ ಆ ಮೊತ್ತವವನ್ನು ಬಿಸಿಸಿಐ ಡ್ರೀಮ್ 11 ಮೂಲಕ ಪಡೆದುಕೊಂಡಿದೆ.

Leave A Reply

Your email address will not be published.