ಕೊರೊನಾ ವೈರಸ್ ಎಫೆಕ್ಟ್ : ಐಪಿಎಲ್ ಮುಂದೂಡಿಕೆ

0

ಮುಂಬೈ : ಕೊರೊನಾ ಎಫೆಕ್ಟ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೇಲೆಯೂ ತಟ್ಟಿದೆ. ಮಾರ್ಚ್ 29ರಂದು ನಡೆಯಬೇಕಿದ್ದ ಐಪಿಎಲ್ ಪಂದ್ಯಾವಳಿಗಳನ್ನು ಮುಂದೂಡಿಕೆ ಮಾಡಲಾಗಿದೆ.

ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ಪಂದ್ಯಾವಳಿ ನಡೆಯೋದು ಅನುಮಾನವಾಗಿತ್ತು. ಆದರೆ ಬಿಸಿಸಿಐ ಪಂದ್ಯಾವಳಿಗಳನ್ನು ನಡೆಸೋದಾಗಿ ಹೇಳಿತ್ತು.

ಈ ಬೆನ್ನಲ್ಲೇ ಮಹರಾಷ್ಟ್ರ ಸರಕಾರ ಐಪಿಎಲ್ ಪಂದ್ಯಾವಳಿಯ ಟಿಕೆಟ್ ಮಾರಾಟಕ್ಕೆ ನಿಷೇಧ ಹೇರಿತ್ತು. ಮಾತ್ರವಲ್ಲ ಕೇಂದ್ರ ಸರಕಾರ ವಿದೇಶಿ ವೀಸಾ ರದ್ದು ಮಾಡಿತ್ತು.

ಹೀಗಾಗಿ ವಿದೇಶಿ ಆಟಗಾರರು ಐಪಿಎಲ್ ಪಂದ್ಯಾವಳಿಗಳಲ್ಲಿ ಆಡೋದು ಅನುಮಾನವಾಗಿತ್ತು. ಇದೀಗ ಬಿಸಿಸಿಐ ಐಪಿಎಲ್ ಪಂದ್ಯಾವಳಿಗಳನ್ನು ಎಪ್ರಿಲ್ 15ಕ್ಕೆ ಮುಂದೂಡಿಕೆ ಮಾಡಿದೆ.

ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ರೆ ಈ ಬಾರಿ ಐಪಿಎಲ್ ಪಂದ್ಯಾವಳಿಗಳು ನಡೆಯೋದು ಅನುಮಾನ.

Leave A Reply

Your email address will not be published.