ಮಂಗಳವಾರ, ಜೂನ್ 17, 2025
HomeSportsCricketIPL Vs ILT20 : ಐಪಿಎಲ್‌ಗೆ ಸವಾಲ್ ಹಾಕಲು ಬರಲಿದೆ ಮತ್ತೊಂದು ಟಿ20 ಲೀಗ್, ಇದು...

IPL Vs ILT20 : ಐಪಿಎಲ್‌ಗೆ ಸವಾಲ್ ಹಾಕಲು ಬರಲಿದೆ ಮತ್ತೊಂದು ಟಿ20 ಲೀಗ್, ಇದು ILT20 ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

- Advertisement -

ದುಬೈ: (IPL Vs ILT20) ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎಂಬ ದಾಖಲೆ ಐಪಿಎಲ್ ಹೆಸರಲ್ಲಿದೆ. ಇತ್ತೀಚೆಗೆ ಐಪಿಎಲ್ ಪಂದ್ಯಗಳ ಪ್ರಸಾರ ಹಕ್ಕು ಬರೋಬ್ಬರಿ 48 ಸಾವಿರ ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ. ಇಡೀ ಜಗತ್ತಿನಲ್ಲಿ ಕ್ರಿಕೆಟ್ ಲೀಗ್ ಒಂದರ ಬ್ರಾಡ್’ಕಾಸ್ಟಿಂಗ್ ರೈಟ್ಸ್ ಇಷ್ಟೊಂದು ಮೊತ್ತಕ್ಕೆ ಮಾರಾಟವಾದ ಇತಿಹಾಸವೇ ಇಲ್ಲ. ಕ್ಯಾಶ್ ರಿಚ್ ಟಿ20 ಲೀಗ್ ಐಪಿಎಲ್ ಹಾದಿಯಲ್ಲೇ ಮತ್ತೊಂದು ಟಿ20 ಲೀಗ್ ಬರ್ತಾ ಇದೆ. ಇದು ಯುಎಇ ಟಿ20 ಲೀಗ್. ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ECB) ಆಶ್ರಯದಲ್ಲಿ ಮುಂದಿನ ವರ್ಷ ನಡೆಯಲಿರುವ ಈ ಟೂರ್ನಿಗೆ ಇಂಟರ್’ನ್ಯಾಷನಲ್ ಲೀಗ್ ಟಿ20 (ILT20) ಎಂದು ಹೆಸರಿಡಲಾಗಿದೆ. ಇದು ಐಪಿಎಲ್ ನಂತರ ಜಗತ್ತಿನ ಅತ್ಯಂತ ಶ್ರೀಮಂತರ ಕ್ರಿಕೆಟ್ ಲೀಗ್ ಎನಿಸಿಕೊಳ್ಳಲಿದ್ದು, ಖ್ಯಾತ ಕ್ರಿಕೆಟಿಗರು ಟೂರ್ನಿಯಲ್ಲಿ ಆಡಲಿದ್ದಾರೆ. ಈ ಟೂರ್ನಿಯಲ್ಲಿ ತಂಡವೊಂದರ ಒಟ್ಟು ಸಂಭಾವನೆ ಮೊತ್ತ 19.86 ಕೋಟಿ. ಐಪಿಎಲ್’ನಲ್ಲಿ ತಂಡವೊಂದರ ಗರಿಷ್ಠ ಸಂಭಾವನೆ ಮೊತ್ತ 80 ಕೋಟಿ.

ILT20ಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಿಗೆ ಸಿಗುವ ಮೊತ್ತ 3,57 ಕೋಟಿ. ಆದ್ರೆ ಐಪಿಎಲ್’ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಿಗೆ ಸಿಗುವ ಮೊತ್ತ ಬರೋಬ್ಬರಿ 15,88 ಕೋಟಿ ರೂಪಾಯಿ. ಪಾಕಿಸ್ತಾನ ಸೂಪರ್ ಲೀಗ್’ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಿಗೆ ಸಿಗುವ ಮೊತ್ತ 1,58 ಕೋಟಿ. ಇಂಗ್ಲೆಂಡ್”ನ ಹಂಡ್ರೆಡ್ ಕ್ರಿಕೆಟ್ ಲೀಗ್”ನಲ್ಲಿ ದುಬಾರಿ ಆಟಗಾರನಿಗೆ ಗರಿಷ್ಠ 1.30 ಕೋಟಿ ಹಾಗೂ ಆಸ್ಟ್ರೇಲಿಯಾದ ಬಿಗ್’ಬ್ಯಾಷ್ ಲೀಗ್”ನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಪಡೆಯುವ ಮೊತ್ತ 1.89 ಕೋಟಿ.

ಜಗತ್ತಿನ ವಿವಿಧ ಟಿ20 ಲೀಗ್”ಗಳಲ್ಲಿ ದುಬಾರಿ ಆಟಗಾರನಿಗೆ ಸಿಗುವ ಮೊತ್ತ
ಐಪಿಎಲ್ (ಭಾರತ): ₹ 15,88 ಕೋಟಿ.
ILT20 (ಯುಎಇ): ₹ 3,57 ಕೋಟಿ
ಪಿಎಸ್ಎಲ್ (ಪಾಕಿಸ್ತಾನ) : ₹ 1,58 ಕೋಟಿ.
ಹಂಡ್ರೆಡ್ ಕ್ರಿಕೆಟ್ ಲೀಗ್ (ಇಂಗ್ಲೆಂಡ್) : ₹ 1.30 ಕೋಟಿ
ಬಿಗ್’ಬ್ಯಾಷ್ ಲೀಗ್ (ಆಸ್ಟ್ರೇಲಿಯಾ) : ₹ 1.89 ಕೋಟಿ.

ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್, ಯುಎಇ ಆಶ್ರಯದಲ್ಲಿ ನಡೆಯಲಿರುವ ILT20 ಲೀಗ್’ನಲ್ಲಿ ಆಡಲು ಬಿಗ್”ಬ್ಯಾಷ್ ಲೀಗ್’ನಿಂದ ಹೊರಗುಳಿಯಲಿದ್ದಾರೆ. ILT20 ಲೀಗ್’ನಲ್ಲಿ ಒಟ್ಟು ಆರು ತಂಡಗಳು ಆಡಲಿದ್ದು, ಪ್ರತೀ ತಂಡಗಳು ಒಟ್ಟು 10 ಲೀಗ್ ಪಂದ್ಯಗಳನ್ನಾಡಲಿವೆ. ಟೂರ್ನಿ ಮುಂದಿನ ವರ್ಷದ ಜನವರಿ 6ರಿಂದ ಫೆಬ್ರವರಿ 12ರವರೆಗೆ ನಡೆಯಲಿದ್ದು, ಲೀಗ್ ಹಾಗೂ ನಾಕೌಟ್ ಪಂದ್ಯಗಳು ಸೇರಿ ಒಟ್ಟು 34 ಪಂದ್ಯಗಳು ನಡೆಯಲಿವೆ. ಪ್ರತೀ ತಂಡಕ್ಕೆ ಗರಿಷ್ಠ 9 ವಿದೇಶಿ ಆಟಗಾರರನ್ನು ಪ್ಲೇಯಿಂಗ್ XIನಲ್ಲಿ ಆಡಿಸುವ ಅವಕಾಶವಿದ್ದು, ಒಬ್ಬ UAE ಆಟಗಾರ ಮತ್ತು ಮತ್ತೊಬ್ಬ ಐಸಿಸಿ ಸಹ ಸದಸ್ಯತ್ವ ಹೊಂದಿರುವ ದೇಶದ ಆಟಗಾರ ಆಡುವ ಬಳಗದಲ್ಲಿರಲಿದ್ದಾರೆ.

ILT20 ಲೀಗ್”ನಲ್ಲಿ ಆಡಲಿರುವ ಆರು ತಂಡಗಳ ಪೈಕಿ ಮೂರು ತಂಡಗಳ ಮಾಲೀಕತ್ವವನ್ನು ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್ (Mumbai Indians – MI), ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders – KKR), ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals -0 DC) ತಂಡಗಳು ಪಡೆದುಕೊಂಡಿವೆ. ಉಳಿದ ಮೂರು ತಂಡಗಳ ಫ್ರಾಂಚೈಸಿಯನ್ನು ಲ್ಯಾನ್ಸರ್ ಕ್ಯಾಪಿಟಲ್ (Lancer Capital), ಅದಾನಿ ಗ್ರೂಪ್ (Adani Group) ಮತ್ತು ಕ್ಯಾಪ್ರಿ ಗ್ಲೋಬಲ್ (Capri Global) ಸಂಸ್ಥೆಗಳು ಪಡೆದುಕೊಂಡಿವೆ.

ಇದನ್ನೂ ಓದಿ : India Vs West Indies T20 : ಇಂದು ಭಾರತ vs ವೆಸ್ಟ್‌ ಇಂಡಿಸ್ ಮೊದಲ ಟಿ20, ಇಲ್ಲಿದೆ Team India Playing 11

ಇದನ್ನೂ ಓದಿ : Manish Pandey Europe trip : ಪತ್ನಿಯೊಂದಿಗೆ ಯುರೋಪ್ ಪ್ರವಾಸದಲ್ಲಿ ಮನೀಶ್ ಪಾಂಡೆ.. ಸುಂದರ ಚಿತ್ರ ಹಂಚಿಕೊಂಡ ಕ್ರಿಕೆಟಿಗ

IPL Vs ILT20 , Another T20 league coming up to challenge the IPL is the ILT20; Here are complete details

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular