Fazil was killed : ಹುಟ್ಟು ಹಬ್ಬಕ್ಕೆಂದು ಬಟ್ಟೆ ತರಲು ಹೋಗಿದ್ದೇ ತಪ್ಪಾಯ್ತಾ : ಬರ್ತ್​ಡೇ ಹಿಂದಿನ ದಿನವೇ ಹತ್ಯೆಯಾದ ಫಾಜಿಲ್​

ದಕ್ಷಿಣ ಕನ್ನಡ : Fazil was killed : ಬುದ್ಧಿವಂತರ ಜಿಲ್ಲೆ ಎಂದು ಕರೆಯಿಸಿಕೊಳ್ತಿದ್ದ ದಕ್ಷಿಣ ಕನ್ನಡ ಇದೀಗ ಜನರಲ್ಲಿ ಭೀತಿಯನ್ನು ಹುಟ್ಟಿಸುವಂತಹ ಜಿಲ್ಲೆಯಾಗಿ ಬದಲಾಗ್ತಿದೆ. ಕಳೆದ 10 ದಿನಗಳಲ್ಲಿ ಮೂವರು ಯುವಕರ ನೆತ್ತರು ಹರಿದಿರುವುದು ಸಂಪೂರ್ಣ ಕರಾವಳಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಮಸೂದ್​, ಪ್ರವೀಣ್​ ನೆಟ್ಟಾರು ಇದೀಗ ಫಾಜಿಲ್​ ಹೀಗೆ ದ್ವೇಷದ ಕಿಚ್ಚಿಗೆ ನಡುರಸ್ತೆಯಲ್ಲಿ ಬೀದಿ ಹೆಣವಾಗುತ್ತಿರುವವರ ಪಟ್ಟಿ ಬೆಳೆಯುತ್ತಲೇ ಇದೆ.

ಅಂದಹಾಗೆ ನಿನ್ನೆ ಸುರತ್ಕಲ್​ನಲ್ಲಿ ಕೊಲೆಯಾದ ಫಾಜಿಲ್​​ ಬದುಕಿದ್ದರೆ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟ ಬೇರೆಯದ್ದೇ ಇತ್ತು ನೋಡಿ ಜನ್ಮದಿನದ ಮುನ್ನಾದಿನವೇ ಫಾಜಿಲ್​ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಬರ್ತಡೇಯ ಹಿಂದಿನ ದಿನ ಫಾಜಿಲ್​ ಸ್ಮಾರ್ಟ್ ವಾಚ್​ ಹಾಗೂ ಹೊಸ ಬಟ್ಟೆಯನ್ನು ಖರೀದಿ ಮಾಡಬೇಕೆಂದು ಅಂಗಡಿಗೆ ಬಂದಿದ್ದ. ಬಟ್ಟೆ ಶಾಪ್​ ಎದುರು ನಿಂತಿದ್ದ ಫಾಜಿಲ್​ನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಇಂದು ಪುತ್ರನ ಜನ್ಮದಿನದ ಸಂಭ್ರಮದಲ್ಲಿದ್ದ ಪೋಷಕರು ಇಂದು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಇನ್ನು ಪುತ್ರನ ಫಾಜಿಲ್​ ಕೊಲೆ ವಿಚಾರವಾಗಿ ದೊಡ್ಡಪ್ಪ ಗಫಾರ್​ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ್ದಾರೆ. ನಮಗೆ ಪೊಲೀಸ್​ ಇಲಾಖೆಯ ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಶಿಕ್ಷೆಯನ್ನು ವಿಧಿಸಬೇಕು. ಚುನಾವಣೆ ಹತ್ತಿರ ಬಂತು ಅಂದಾಕ್ಷಣ ಬಡವರ ಮಕ್ಕಳೇ ಕೊಲೆಯಾಗುತ್ತಾರೆ. ಎಲ್ಲಿಯೂ ನಾವು ರಾಜಕಾರಣಿಗಳ ಮಕ್ಕಳು ಕೊಲೆಯಾಗಿದ್ದನ್ನು ಕಂಡಿಲ್ಲ. ಇಂದು ಫಾಜಿಲ್​ ತಂದೆ ತಾಯಿ ಗೋಳಿಡ್ತಾ ಇದ್ದಾರೆ. ನಮ್ಮ ಕಷ್ಟವನ್ನು ನಾವು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ : Bommai high level meeting : ಸಿಎಂ ನೇತೃತ್ವದಲ್ಲಿ ಪೊಲೀಸ್​ ಹಿರಿಯ ಅಧಿಕಾರಿಗಳ ಸಭೆ : ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಕಟ್ಟು ನಿಟ್ಟಿನ ಕ್ರಮ ಸಾಧ್ಯತೆ

ಇದನ್ನೂ ಓದಿ : Pramod Muthalik barred : ಶಾಂತಿ ಕದಡುವ ಆತಂಕ : ಪ್ರಮೋದ್​ ಮುತಾಲಿಕ್​ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ

ಇದನ್ನೂ ಓದಿ : Siddaramaiah : ಬಿಜೆಪಿ ಸರ್ಕಾರಕ್ಕೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಹೇಳಿ ಮರುಕ್ಷಣವೇ ಹೇಳಿಕೆ ವಾಪಸ್​ ಪಡೆದ ಸಿದ್ದರಾಮಯ್ಯ

Fazil was killed the day before his birthday

Comments are closed.