ಭಾನುವಾರ, ಏಪ್ರಿಲ್ 27, 2025
HomeSportsCricketJasprit Bumrah net worth: ಜಸ್ಪ್ರೀತ್ ಬುಮ್ರಾ ಎಷ್ಟು ಶ್ರೀಮಂತ ? ಇಲ್ಲಿದೆ ಬುಮ್ರಾ ಸಂಪತ್ತಿನ...

Jasprit Bumrah net worth: ಜಸ್ಪ್ರೀತ್ ಬುಮ್ರಾ ಎಷ್ಟು ಶ್ರೀಮಂತ ? ಇಲ್ಲಿದೆ ಬುಮ್ರಾ ಸಂಪತ್ತಿನ ಕೋಟೆ ರಹಸ್ಯ !

- Advertisement -

Jasprit Bumrah net worth: ನ್ಯೂಯಾರ್ಕ್: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಇದೀಗ ಟಾರ್ ಆಫ್ ದಿ ಟೌನ್. ಕಾರಣ, ಪಾಕಿಸ್ತಾನ ವಿರುದ್ಧದ ಐಸಿಸಿ ಟಿ20 ವಿಶ್ವಕಪ್ (ICC t20 World Cup 2024) ಪಂದ್ಯ. ನ್ಯೂ ಯಾರ್ಕ್’ನ ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ (India Vs Pakistan) ತಂಡ 6 ರನ್’ಗಳ ರೋಚಕ ಗೆಲುವು ಸಾಧಿಸಿತ್ತು.

Jasprit Bumrah Sanjana Ganesh
Image Credit : sanjana Ganesh/ Instagram

ನಡೆದ ಲೋ ಸ್ಕೋರಿಂಗ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ್ದ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah). ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಭಾರೀ ಬ್ಯಾಟಿಂಗ್ ವೈಫಲ್ಯ ಎದುರಿಸಿ 19 ಓವರ್’ಗಳಲ್ಲಿ 119 ರನ್’ಗಳಿಗೆ ಆಲೌಟಾಯಿತು. ಪಾಕಿಸ್ತಾನ ತಂಡದ ಚೇಸಿಂಗ್ ವೇಳೆ ಮಾರಕ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ 4 ಓವರ್’ಗಳಲ್ಲಿ ಕೇವಲ 14 ರನ್ನಿತ್ತು 3 ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು.

ಇದನ್ನೂ ಓದಿ : Azam Khan: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ದಢೂತಿ ಕ್ರಿಕೆಟಿಗನನ್ನು “ಕೊಬ್ಬಿದ ಆನೆ” ಎಂದ ಕ್ರಿಕೆಟ್ ಪ್ರೇಕ್ಷಕ!

ಬುಮ್ರಾ ದಾಳಿಗೆ ನಲುಗಿದ ಪಾಕಿಸ್ತಾನ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಗಿ ಟೂರ್ನಿಯಲ್ಲಿ ಸತತ 2ನೇ ಸೋಲು ಅನುಭವಿಸಿತು. ಪಾಕ್ ವಿರುದ್ಧದ ಪಂದ್ಯದ ಹೀರೋ ಜಸ್ಪ್ರೀತ್ ಬುಮ್ರಾ ಸಂಪತ್ತಿನಲ್ಲಿ ಎಷ್ಟು ಶ್ರೀಮಂತ? ಬುಮ್ರಾ ಎಷ್ಟು ಕೋಟಿಗಳ ಒಡೆಯ? ಬುಮ್ರಾ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಜಸ್ಪ್ರೀತ್ ಬುಮ್ರಾ ಒಟ್ಟು ಆಸ್ತಿ ಮೌಲ್ಯ:
2024ರ ವೇಳೆ ಜಸ್ಪ್ರೀತ್ ಬುಮ್ರಾ ಅವರ ಒಟ್ಟು ಆಸ್ತಿ ಮೌಲ್ಯ $7 million. ಅಂದರೆ 55 ಕೋಟಿ ರೂಪಾಯಿ.

Jasprit Bumrah
Image Credit to Original Source

ಜಸ್ಪ್ರೀತ್ ಬುಮ್ರಾ ಸಂಬಳ:
29 ವರ್ಷದ ಜಸ್ಪ್ರೀತ್ ಬುಮ್ರಾ ಬಿಸಿಸಿಐನಲ್ಲಿ A+ ಕಾಂಟ್ರಾಕ್ಟ್ ಹೊಂದಿದ್ದು, ವರ್ಷಕ್ಕೆ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಪ್ರತೀ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯದಲ್ಲಿ 6 ಲಕ್ಷ, ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಜೊತೆ ಬುಮ್ರಾ ವಾರ್ಷಿಕ 12 ಕೋಟಿ ರೂಪಾಯಿಗಳ ಒಪ್ಪಂದ ಹೊಂದಿದ್ದಾರೆ.

ಇದನ್ನೂ ಓದಿ : International Cricket Stadium In Mysore: ಮೈಸೂರಿನಲ್ಲಿ ತಲೆ ಎತ್ತಲಿದೆ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ, ಕೆಎಸ್‌ಸಿಎಗೆ 20 ಎಕರೆ ಜಮೀನು ಹಸ್ತಾಂತರ

ಜಾಹೀರಾತು:
ಅಸಿಕ್ಸ್ (ASICS), ಒನ್ ಪ್ಲಸ್ (OnePlus), ರಾಯಲ್ ಸ್ಟಾಗ್ (Royal Stag), ಬೋಟ್ (BOAT), ಡ್ರೀಮ್11 (Dream11), ಕಲ್ಟ್ ಸ್ಪೋರ್ಟ್ (Cultsport), ಭಾರತ್ ಪೇ (Bharat Pe), ಮತ್ತು ಪರ್ಫಾಮ್ಯಾಕ್ಸ್ ಆಕ್ಟಿವ್ ವೇರ್ (Performax Activewear) ಉತ್ಪನ್ನಗಳಿಗೆ ಜಸ್ಪ್ರೀತ್ ಬುಮ್ರಾ ಪ್ರಚಾರ ರಾಯಭಾರಿ ಆಗಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಟಿ20 ವಿಶ್ವಕಪ್”ನಲ್ಲಿ ಐಸಿಸಿ ಇನ್’ಸೈಡರ್ ಬ್ರಾಡ್’ಕಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 33 ವರ್ಷದ ಸಂಜನಾ 2021ರಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಮದುವೆಯಾಗಿದ್ದರು. ಬುಮ್ರಾ ದಂಪತಿಗಳ ಅಂಗದ್ ಹೆಸರಿನ ಒಂದು ವರ್ಷದ ಮಗನಿದ್ದಾನೆ.

ಇದನ್ನೂ ಓದಿ : Jasprit Bumrah Interviewed By His Wife: ಪಾಕ್ ವಿರುದ್ಧ ಗೆದ್ದ ನಂತರ ಗಂಡನ ಸಂದರ್ಶನ ನಡೆಸಿದ ಹೆಂಡತಿ!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ 4 ಓವರ್’ಗಳಲ್ಲಿ ಕೇವಲ 14 ರನ್ನಿತ್ತು 3 ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಪಂದ್ಯದ ನಂತರ ಜಸ್ಪ್ರೀತ್ ಬುಮ್ರಾ ಅವರನ್ನು ಪತ್ನಿ ಸಂಜನಾ ಗಣೇಶನ್ (Bumrah’s wife Sanjana Ganesan) ಸಂದರ್ಶನ ನಡೆಸಿದ್ದು ಗಮನ ಸೆಳೆಯಿತು.

https://x.com/cricwatcher11/status/1799998086640730286?s=46

Jasprit Bumrah net worth: How rich is Jasprit Bumrah ? Here is the secret of Bumrah wealth

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular